ಟೋಲ್ ದರ ವಸೂಲಿ: KSRTC ಬಸ್​ ಟಿಕೆಟ್​ ​ದರ ಏರಿಕೆ? ಯಾವ ಬಸ್ ಗೆ ಎಷ್ಟು ದರ ? ಮಾಹಿತಿ ಇಲ್ಲಿದೆ

Team Newsnap
1 Min Read
Free bus pass - only up to 50 K.M from home ? ಉಚಿತ ಬಸ್ ಪಾಸ್ - ಮನೆಯಿಂದ 50 K.M ವರೆಗೆ ಮಾತ್ರ ?

ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೇ ಟೋಲ್ ಸಂಗ್ರಹ ಆರಂಭವಾದ ನಂತರ ಕೆಎಸ್​​ಆರ್​ಟಿಸಿ ಪ್ರಯಾಣಿಕರಿಗೆ ಟಿಕೆಟ್​​ ದರ ಏರಿಕೆಯ ಶಾಕ್ ಎದುರಾಗಿದೆ.

ಟೋಲ್ ಹೊರೆಯನ್ನು ಕೆಎಸ್​​ಆರ್​ಟಿಸಿ​ ಪ್ರಯಾಣಿಕರಿಗೆ ವರ್ಗಾಯಿಸಲು ನಿರ್ಧರಿಸಿದೆ. ಬೆಂಗಳೂರು, ಮೈಸೂರು ಎಕ್ಸ್​​ಪ್ರೆಸ್​ವೇನಲ್ಲಿ ಸಂಚರಿಸುವ ಸಾಮಾನ್ಯ ಸಾರಿಗೆ ಪ್ರಯಾಣಿಕರಿಗೆ 15 ರೂಪಾಯಿ, ರಾಜಹಂಸ ಬಸ್​​ಗಳಿಗೆ 18 ರೂಪಾಯಿ ಹಾಗೂ ಮಲ್ಟಿ ಆ್ಯಕ್ಸಲ್ ಬಸ್​​ಗಳಿಗೆ 20ರೂ ಶುಲ್ಕ ನಿಗದಿ ಮಾಡಿ ಪ್ರಕಟಣೆ ಹೊರಡಿಸಿದೆ.

highway , toll , inauguration

ಸಾಮಾನ್ಯ ಬಸ್​​ನ ದರ 150 ರೂಪಾಯಿ ಇತ್ತು. 15 ರೂಪಾಯಿ ಹೆಚ್ಚಳದಿಂದ 165 ರೂಪಾಯಿ ದರ ತೆರಬೇಕಿದೆ.
ರಾಜಹಂಸದಲ್ಲಿ ಈ ಮೊದಲು 180 ಇತ್ತು.. ಈಗ 18 ರೂಪಾಯಿ ಹೆಚ್ಚಳದಿಂದ 198 ರೂಪಾಯಿ ನೀಡಬೇಕಿದೆ.. ಇನ್ನು, ಮಲ್ಟಿ ಆ್ಯಕ್ಸೆಲ್​​ನ ದರ 330 ರೂಪಾಯಿ ಇದ್ದು, 20 ರೂಪಾಯಿ ಏರಿಕೆ ಆಗಿದೆ. ಹೀಗಾಗಿ 340 ರೂಪಾಯಿ ಟಿಕೆಟ್​​ ನಿಗದಿ ಆಗಿದೆ.

Share This Article
Leave a comment