ಯಾಂತ್ರೀಕೃತ ಭತ್ತದ ನಾಟಿಗೆ ಚಾಲನೆ ನೀಡಿದ ಡಿಸಿ ವೆಂಕಟೇಶ್

Team Newsnap
1 Min Read

ಮಂಡ್ಯ

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ತಾಲೂಕಿನ ಸಾತನೂರು ಗ್ರಾಮದಲ್ಲಿ ಯಾಂತ್ರೀಕೃತ ಭತ್ತದ ನಾಟಿ ಹಾಗೂ 5001 ಒಂದನೇ ಸ್ವಸಹಾಯ ಸಂಘವನ್ನು ಜಿಲ್ಲಾಧಿಕಾರಿ ವೆಂಕಟೇಶ್ ಬುಧವಾರ ಉದ್ಘಾಟಿಸಿದರು.

ಯಾಂತ್ರಿಕೃತ ಭತ್ತ ನಾಟಿಗೆ ಬತ್ತದ ಪೈರಿನ ಟ್ರೈ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟೇಶ್ ಧರ್ಮಸ್ಥಳ ಸಂಸ್ಥೆಯು ರೈತರಿಗೆ ಹಾಗೂ ಮತ್ತು ಮಹಿಳೆಯರನ್ನು ಸಂಘಟನೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಗ್ರಾಮೀಣ ಪ್ರದೇಶದ ಮಹೆಳೆಯರಿಗೆ ಅನುಕೂಲ ವಾಗುತ್ತಿದೆ ಅಲ್ಲದೆ ಜಿಲ್ಲೆಯ ರೈತರಿಗೆ ಪ್ರಸುಸ್ತ ಭತ್ತ ನಾಟಿಗೆ ಯಾತ್ರೀಕರಣ ಅಳವಡಿಕೆ ಮಾಡುವುದರಿಂದ ರೈತರಿಗೆ ಅನೂಕಲವಾಗುತ್ತಿದೆ.. ಅಲ್ಲದೆ ಯಂತ್ರಗಳ ಮೂಲಕ ರೈತರು ನಾಟಿ ಮಾಡುವುದರಿಂದು ಹೆಚ್ಚಯ ಇಳುವರಿಯು ಸಿಗಲಿದೆ ಎಂದು ತಿಳಿಸಿದರು.

ನಂತರ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಪಿ.ಗಂಗಾದರ್ ಮಾತನಾಡಿ ರೈತರಿಗೆ ಉಪಯೋಗವಾಗಲೆಂದು ಭತ್ತದ ನಾಟಿಯಗೆ ಹೊಸ ಯಂತ್ರಗಳನ್ನು ನೀಡಲಾಗಿದೆ. ಮಂಡ್ಯ ಜಿಲ್ಲೆಯ ರೈತರಿಗೆ ಭತ್ತ ಬೇಸಾಯವು ಜೀವನಾಡಿಯಾಗಿದೆ ಭತ್ತ ಬೇಸಾಯಕ್ಕೆ ಕಾರ್ಮಿಕರ ಸಮಸ್ಯೆ ಎದುರಾಗಿದೆ. ಇದನ್ನು ಮನಗೊಂಡು ಯಂತ್ರಗಳನ್ನು ಬಳಸುವಂತೆ ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಎಸ್ ಪಿ ಮಹೇಶ್, ಮಂಡ್ಯ ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್ ಸುವರ್ಣ, ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾದ್ಯಕ್ಷ ಬೋರೇಗೌಡ, ಸದಸ್ಯ ರಘು ಅಪ್ಪಾಜಿ,ಮಂಡ್ಯ ತಾಲ್ಲೂಕು ಯೋಜನಾಧಿಕಾರಿ ಸದಾನಂದ ಬಂಗೇರ, ಕೃಷಿ ಯಂತ್ರಧಾರೆ ಯೋಜನಾಧಿಕಾರಿ ದಿನೇಶ್ ಇದ್ದರು.

Share This Article
Leave a comment