ಏ.3 ರಂದು ಯದುವೀರ್‌ ಒಡೆಯರ್‌ ನಾಮಪತ್ರ ಸಲ್ಲಿಕೆ

Team Newsnap
1 Min Read

ಬೆಂಗಳೂರು: ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಏ.3 ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ಈ ಕುರಿತು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದು , ಏ.3 ರಂದು ಬೆಳಗ್ಗೆ 10:30 ಕ್ಕೆ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸದ್ದಾರೆ.

ಏ.3 ರಂದು ಬೆಳಗ್ಗೆ 10:30 ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೆರವಣಿಗೆ ಆರಂಭವಾಗಲಿದ್ದು , ಕಾರ್ಯಕರ್ತರು ಹಾಗೂ ಅಭಿಮಾನಿಗಳಳು ಅಧಿಕ ಸಂಖ್ಯೆಯಲ್ಲಿ ಬಂದು ಸೇರುವಂತೆ ಮನವಿ ಮಾಡಿದ್ದಾರೆ.ಸುನೀಲ್ ಬೋಸ್ , ರಕ್ಷಾ ರಾಮಯ್ಯ ಬಳ್ಳಾರಿ ತುಕಾರಾಂ ಗೆ ಕಾಂಗ್ರೆಸ್ ಟಿಕೆಟ್ : ಕೋಲಾರ ಕಗ್ಗಂಟು

ಯದುವೀರ್‌ ಅವರಿಗೆ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ಟಿಕೆಟ್‌ ನೀಡಿದ್ದು , ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಮೈಸೂರು-ಕೊಡಗಿನ ಸಮಸ್ತ ಜನತೆ ಆಗಮಿಸಿ ಆಶೀರ್ವದಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಎಂದು ಹೇಳಿದ್ದಾರೆ.

Share This Article
Leave a comment