December 19, 2024

Newsnap Kannada

The World at your finger tips!

fight man

ವಾಕಿಂಗ್ ಹೋದಾಗಲೇ ಕುಸ್ತಿಪಟು ಸಂಗಪ್ಪ ಹೃದಯಾಘಾತದಿಂದ ಸಾವು

Spread the love

ವಾಯುವಿಹಾರಕ್ಕೆಂದು ಹೋಗಿದ್ದ ಕುಸ್ತಿಪಟು ಒಬ್ಬರು ಹೃದಯಾಘಾತದಿಂದ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ಜರುಗಿದೆ. ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಕುಸ್ತಿಪಟು ಸಂಗಪ್ಪ ಬಳಿಗೇರ ಸಾವನ್ನಪ್ಪಿದ ದುರ್ದೈವಿ.

ಬುಧವಾರ ಬೆಳಗ್ಗೆ ವಾಯುವಿಹಾರಕ್ಕೆಂದು ತಮ್ಮ ಸ್ನೇಹಿತನೊಂದಿಗೆ ತೆರಳಿದ್ದರು. ಈ ವೇಳೆ ಅವರಿಗೆ ಏಕಾಏಕಿ ಹೃದಯಾಘಾತವಾಗಿ ಕೆಳಗಡೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಪಿಎಫ್​​ಐ ಸಂಘಟನೆ 5 ವರ್ಷ ಬ್ಯಾನ್​ ಕೇಂದ್ರದ ಆದೇಶ

ಧಾರವಾಡದ ಮದಿಹಾಳದ ಬಳಿ ಈ ಘಟನೆ ಸಂಭವಿಸಿದೆ, ಕುಸಿದು ಬಿದ್ದು ಸಾವನ್ನಪ್ಪಿದ ದೃಶ್ಯ ಶಾಲಾ ಕಟ್ಟಡದ ಮೇಲೆ ಹಾಕಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಗಪ್ಪ ಕುಸಿದು ಬಿದ್ದ ತಕ್ಷಣ ಆತನ ಸ್ನೇಹಿತ ಹಾಗೂ ಇತರರು ಸಂಗಪ್ಪನನ್ನು ಮೇಲೆಬ್ಬಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಸಂಗಪ್ಪ ಪ್ರಾಣಪಕ್ಷಿ ಹಾರಿ ಹೋಗಿತ್ತು.

Copyright © All rights reserved Newsnap | Newsever by AF themes.
error: Content is protected !!