ಕನ್ನಡಿಗರಿಗಾಗಿ ಚೆನ್ನೈನ ಜಮೀನು ಮಾರಿ ಆಸ್ಪತ್ರೆ ಕಟ್ಟಿಸಿದ ಹಿರಿಯ ನಟಿ ಲೀಲಾವತಿ

Team Newsnap
1 Min Read

ಕನ್ನಡದ ಹಿರಿಯ ನಟಿ ಲೀಲಾವತಿ ತಮ್ಮ ಸ್ವಂತ ಖರ್ಚಿನಲ್ಲಿ ನೆಲಮಂಗಲದ ಬಳಿಯ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿರುವ ಆಸ್ಪತ್ರೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ ಉದ್ಘಾಟಿಸಿದರು.

ನಟಿ ಲೀಲಾವತಿ ಚೆನ್ನೈನಲ್ಲಿನ ತಮ್ಮ ಜಮೀನು ಮಾರಿ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಜನರಿಗೆ ಒಳ್ಳೆಯದಾಗಲೀ ಎಂಬ ಉದ್ದೇಶದಿಂದ ಈ ಕಾರ್ಯ ಮಾಡಿದ್ದಾರೆ.

ಸರ್ಕಾರ ಈ ಆಸ್ಪತ್ರೆಗೆ ಅಗತ್ಯವಾದ ಸಹಾಯ ಮಾಡಲಿದೆ ಎಂದು ಸಿಎಂ ಬಸವರಾಜ್​​ ಬೊಮ್ಮಾಯಿ ಹೇಳಿದರು

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದ ವಿನೋದ್​ ರಾಜ್​​, 1 ಕೋಟಿ 20 ಲಕ್ಷ ಖರ್ಚು ಮಾಡಿ ಅಮ್ಮ ಆಸ್ಪತ್ರೆ ಕಟ್ಟಿದ್ದಾರೆ. ಇದು ಸೋಲದೇವನಹಳ್ಳಿ ಜನರಿಗೆ ಸಹಾಯವಾಗಲಿ ಎಂದು ಕಟ್ಟಿದ್ದೇವೆ. ಇಂದೇ ಆಸ್ಪತ್ರೆಯನ್ನು ಸರ್ಕಾರಕ್ಕೆ ಹಸ್ತಾಂತರ ಮಾಡುತ್ತೇವೆ ಎಂದಿದ್ದಾರೆ. ಹಿಂದಿ ನಟಿ ಆಶಾ ಪರೇಖ್ ಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ

20 ವರ್ಷಗಳ ಹಿಂದೆ ಬೆಟ್ಟವೊಂದು ತಗೊಂಡ್ವಿ. ಈ ಜಾಗ ಯಾಕೆ ತಗೊಂಡೆ ಎಂದು ಅಮ್ಮನನ್ನು ಕೇಳಿದೆ. ಆಗ ಈ ಜಾಗದಲ್ಲಿ ಏನಾದ್ರೂ ಮಾಡು, ನಾನು ಇಲ್ಲೇ ಇರ್ತೀನಿ ಅಂದಿದ್ರು ಅಮ್ಮ. ಈಗ ಅಮ್ಮನ ಕನಸು ನನಸಾಗಿದೆ ಎಂದು ಹೇಳಿದರು.

Share This Article
Leave a comment