ಸಾವಿನಲ್ಲೂ ಸಾರ್ಥಕತೆ: 9 ಮಂದಿಗೆ ಜೀವದಾನ ಮಾಡಿದ ಮೈಸೂರಿನ ಯುವಕ

Team Newsnap
1 Min Read

ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗ ದಾನ ಮಾಡುವ ಮೂಲಕ 9 ಮಂದಿಗೆ ಜೀವದಾನ ಮಾಡಿದ್ದಾನೆ. ಈ ಘಟನೆ ಮೈಸೂರಿನಲ್ಲಿ ಜರುಗಿದೆ ನಡೆದಿದೆ.

ಮುನೇಶ್ವರ ನಗರದ ನಿವಾಸಿ ಮದನ್ ಕುಮಾರ್ (25) ಅಪಘಾತದಿಂದ ಮೆದುಳು ನಿಷ್ಕ್ರಿಯವಾಗಿತ್ತು. ಇವರಿಂದ ಪಡೆದ ಹೃದಯ, ಶ್ವಾಸಕೋಶಗಳು, 2 ಮೂತ್ರಪಿಂಡಗಳು, ಯಕೃತ್ತು ಮತ್ತು ಕಾರ್ನಿಯಾಗಳಿಂದ 9 ಮಂದಿಯ ಜೀವವನ್ನು ವೈದ್ಯರು ಉಳಿಸಿದ್ದಾರೆ.

ಮೈಸೂರಿನ ಸಿದ್ದಾರ್ಥ ಬಡಾವಣೆಯ ರಸ್ತೆಯಲ್ಲಿ ಅ‌ 3ರಂದು ಅಪಘಾತದಿಂದ ಗಾಯಗೊಂಡಿದ್ದ ಇತನನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಪಘಾತದಲ್ಲಿ ತೆಲೆಗೆ ಬಲವಾಗಿ ಪೆಟ್ಟು ಬಿದ್ದ ಕಾರಣ ಯುವಕನ ಮೆದುಳು ನಿಷ್ಕ್ರಿಯಗೊಂಡಿದೆ. ಒಕ್ಕಲಿಗ ಮತಕ್ಕಾಗಿ JDS ಬಗ್ಗೆ ಚೆಲುವರಾಯಸ್ವಾಮಿ ಸಾಫ್ಟ್ ಕಾರ್ನರ್ – ಸೂಕ್ಷ್ಮ ಹೆಜ್ಜೆ ಹಾಕುವ ನಾಯಕ 

ಯುವಕನ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಹೃದಯ, ಶ್ವಾಸಕೋಶಗಳು, 2 ಮೂತ್ರಪಿಂಡಗಳು, ಯಕೃತ್ತು ಮತ್ತು ಕಾರ್ನಿಯಾಗಳನ್ನು ಕಸಿ ಮಾಡಿ ಮೈಸೂರು, ಬೆಂಗಳೂರಿನ ನಾರಾಯಣ ಹೃದಯಾಲಯ, ನೆಪ್ರೋ ಯೂರಾಲಜಿ, ಕೆ.ಆರ್ ಆಸ್ಪತ್ರೆಗೆ ಆಂಬ್ಯುಲೆನ್ಸ್​ ಮೂಲಕ ರವಾನಿಸಲಾಗಿದೆ.

Share This Article
Leave a comment