ಒಕ್ಕಲಿಗ ಮತಕ್ಕಾಗಿ JDS ಬಗ್ಗೆ ಚೆಲುವರಾಯಸ್ವಾಮಿ ಸಾಫ್ಟ್ ಕಾರ್ನರ್ – ಸೂಕ್ಷ್ಮ ಹೆಜ್ಜೆ ಹಾಕುವ ನಾಯಕ

Team Newsnap
2 Min Read

ರಾಹುಲ್ ಗಾಂಧಿ ( Rahul Gandhi ) ಯಾತ್ರೆ ನಂತರ ಮಂಡ್ಯ ಜಿಲ್ಲಾ ( mandya District ) ಕಾಂಗ್ರೆಸ್‍ಗೆ ಹೊಸ ಹುಮ್ಮಸ್ಸು ಬಂದರೆ ಮತ್ತೊಂದು ಕಡೆ ಒಕ್ಕಲಿಗ ( Vokkaliga ) ಮತ ಬ್ಯಾಂಕ್ ಅನ್ನು ತನ್ನತ್ತ ಸೆಳೆದು ಜೆಡಿಎಸ್ ಕೋಟೆಯನ್ನು ಛಿದ್ರ ಮಾಡುವ ತಂತ್ರವನ್ನು ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಹೆಣೆಯಲು ತಂತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ .

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ( Bharat Jodo Yatra ) ಯಾತ್ರೆ ಮಂಡ್ಯದಲ್ಲಿ ಮೂರು ದಿನ ಸಂಚರಿಸಿತು. ಹೋದ ಕಡೆಯಲೆಲ್ಲ ಅಭೂತ ಪೂರ್ವ ಬೆಂಬಲ ಸಿಕ್ಕಿದೆ.ಇದನ್ನು ಓದಿ –‘ಗಂಧದ ಗುಡಿ’ಯಲ್ಲಿ ಪವರ್ ಸ್ಟಾರ್ ಮಿಂಚು-ಟ್ರೆಕ್ಕಿಂಗ್, ಡ್ರೈವಿಂಗ್, ಡ್ಯಾನ್ಸಿಂಗ್

ಯಾತ್ರೆಯಲ್ಲಿ ಜನಸಾಗರಕ್ಕೆ ರಾಹುಲ್ ಸೇರಿದಂತೆ ರಾಜ್ಯ ನಾಯಕರ ದಂಗಾಗಿದ್ದಾರೆ. ಇದೇ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲಾ ಕಾಂಗ್ರೆಸ್ ( Congress ) ಹೊಸ ಹುಮ್ಮಸ್ಸು ಮೂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ( Vidhana Sabha Election ) ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್‍ಗೆ ಮತ್ತೆ ಪುಟಿದೇಳುವ ಆತ್ಮವಿಶ್ವಾಸ ಮೂಡಿದೆ.

ಈ ಯಾತ್ರೆಯಿಂದ ಒಂದು ರೀತಿ ಕಾಂಗ್ರೆಸ್‍ಗೆ ಬೂಸ್ಟರ್ ಡೋಸ್ ಲಸಿಕೆ ಸಿಕ್ಕಂತಾಗಿದೆ, ಮುಂದಿನ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕೈದು ಸ್ಥಾನ ಗೆಲ್ಲುವ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲಿ ಮೂಡಿದೆ. ಇದರ ಪ್ಲಾನ್ ವರ್ಕೌಟ್ ಆಗಬೇಕು ಅಂದ್ರೆ ಒಕ್ಕಲಿಗರ ಮತಗಳನ್ನು ತನ್ನತ್ತ ಸೆಳೆಯಲೇ ಬೇಕಿರುವ ಅನಿವಾರ್ಯತೆ ಕೂಡ ಕಾಂಗ್ರೆಸ್‍ಗೆ ಇದೆ.

ಹಾಗಾಗಿ ಚೆಲುವರಾಯಸ್ವಾಮಿ ( Cheluvaraya Swamy ) ಸದಾ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡ ( Deve Gowda ) ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಫುಲ್ ಸಾಫ್ಟ್‌ ಕಾರ್ನರ್ ಹೊಂದಿದ್ದಾರೆ.

ಮಂಡ್ಯದಲ್ಲಿ ಒಕ್ಕಲಿಗರು ದೇವೇಗೌಡರನ್ನು ಮರೆಯಲ್ಲ ಎಂಬ ಮಾಜಿ ಸಿಎಂ ಹೆಚ್‍ಡಿಕೆ ( HDK ) ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೆಲುವರಾಯಸ್ವಾಮಿ, ದೇವೇಗೌಡರು ನಮ್ಮ ನಾಯಕರೇ, ನಾನು ಅವರ ಬಗ್ಗೆ ಲಘುವಾಗಿ ಮಾತನಾಡಲ್ಲ. ಮೇಲುಕೋಟೆಯ ರಾಜಗೋಪುರದಲ್ಲಿ ಬಾರ್ ಸೆಟ್ – ನಟ ನಾಗಚೈತನ್ಯ ಚಿತ್ರ ತಂಡದಿಂದ ಎಡವಟ್ಟು

ಕುಮಾರಸ್ವಾಮಿಯವರು ( Kumar Swamy ) ಮಾಜಿ ಮುಖ್ಯಮಂತ್ರಿಗಳು. ಅವರು ಕೂಡ ದೊಡ್ಡವರು. ಅವರ ಬಗ್ಗೆ ಮಾತಾಡೋದು ಬೇಡ ಎನ್ನುವ ಜೆಡಿಎಸ್ ( JDS ) ನಾಯಕರ ವಿರುದ್ಧ ಮಾತನಾಡಲು ಹಿಂದೇಟು ಹಾಕ್ತಿದ್ದಾರೆ. ಅಲ್ಲದೇ ನಮ್ಮ ಜಿಲ್ಲೆಯ ಜನರ ಮೇಲೆ ನಂಬಿಕೆ ಇದೆ.

ತಮ್ಮ ಮಕ್ಕಳನ್ನು ಜಿಲ್ಲೆಯ ಜನರು ಪ್ರೀತಿಸುತ್ತಾರೆ ಎನ್ನುವ ಮೂಲಕ ಜಿಲ್ಲೆಯ ಒಕ್ಕಲಿಗರು ನನ್ನ ನಾಯಕತ್ವದ ಪಕ್ಷವನ್ನು ಬೆಂಬಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಾಫ್ಟ್‌ ಮಾತುಗಳಿಂದ ಇದ್ದರಷ್ಟೇ ಒಕ್ಕಲಿಗರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ಸೂಕ್ಷ್ಮತೆ ಅರಿತಿದ್ದಾರೆ ಎನ್ನಲಾಗುತ್ತಿದೆ.

Share This Article
Leave a comment