ಶ್ರವಣ ಸಮಸ್ಯೆ ಅಥವಾ ಕಿವುಡುತನ ಎಂಬುದು ಶಾಪವಲ್ಲ. ಅದು ಇತರೆ ಎಲ್ಲ ಖಾಯಿಲೆಗಳಂತೆ ಒಂದು ಸಾಮಾನ್ಯವಾದ ಖಾಯಿಲೆ. ನೂತನ ತಂತ್ರಜ್ಞಾನಗಳನ್ನು ಬಳಸಿ ಜಾಗತಿಕವಾಗಿರುವ ಶ್ರವಣ ಸಮಸ್ಯೆಯನ್ನು ಕಡಿಮೆ ಮಾಡಬಹುದಾಗಿದೆ.
ಕಿವುಡುತನವೆಂಬುದು ಶಬ್ದಗಳಿಗೆ ಕಡಿಮೆಯಾದ ತೀಕ್ಷ್ಣತೆ ಒದಗಿಸುತ್ತದೆ. ಒಬ್ಬರ ಮಾತನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಇರುವವರನ್ನು “ಶ್ರವಣ ದೋಷ, “ಕಿವುಡ” ಸೇರಿದಂತೆ ನಾನಾ ಪದಗಳು ಇವೆ.
ಸಾರ್ವಜನಿಕ ಆರೋಗ್ಯ ಜಾಗೃತಿ ಕ್ರಮಗಳ ಮೂಲಕ ಜಾಗತಿಕವಾಗಿ ಅರ್ಧದಷ್ಟು ಕಿವುಡುತನವನ್ನು ತಡೆಯಬಹುದು. ಇದಲ್ಲದೆ ಮಾನವನ ಕಿವಿಯು ಆವರ್ತನದಲ್ಲಿ 20 ರಿಂದ 20,000 ಹರ್ಟ್ಸ್ ಮತ್ತು 0 ಡೆಸಿಬಲ್ಸ್ ನಿಂದ 120 ಬಿ.ಸಿ.ಎಚ್.ಎಲ್ ಅಥವಾ ಹೆಚ್ಚಿನ ಶಬ್ದವನ್ನು ಕೇಳಸಿಕೊಳ್ಳುವಷ್ಟು ಸಮರ್ಥವಾಗಿದೆ. ಕೆಲವು ಜನರು 5 ಅಥವಾ 10 ಡೆಸಿಬಲ್ಸ್ ವರೆಗೆ ಕೇಳಬಹುದು.ಮಾನವ ಕಿವಿಯ ಶ್ರವಣ ಸಂವೇದನೆ ಹೆಚ್ಚು ಕಡಿಮೆ 3000 Hz ಇರುತ್ತದೆ.
ಕಿವುಡುತನಕ್ಕೆ ಕಾರಣಗಳು :
- ಒಬ್ಬರ ಸ್ವಂತ ಧ್ವನಿ ಮತ್ತು ಉಸಿರಾಟದ ಶಬ್ದಗಳ ಅಸಹಜ ಶ್ರವಣ, ನಿರಂತರವಾಗಿ ಪರಿಣಾಮವನ್ನು ಬೀರುತ್ತದೆ.
- ವಯಸ್ಸಾದವರಲ್ಲಿ ಅತಿಯಾದ ಶಬ್ಧವು ಕಿವಿಗೆ ತಾಗಿದಾಗ ಕಿವುಡುತನ ಉಂಟಾಗುತ್ತದೆ.
- ಸಾಮಾನ್ಯವಾಗಿ ಪುರುಷರಿಗೆ 25 ಮತ್ತು 30 ವಯಸ್ಸಿನಲ್ಲಿ ಕಿವುಡುತನದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
- ಪ್ರಪಂಚದಲ್ಲಿ ಸುಮಾರು ಶೇ 5 ರಷ್ಟು ಈ ತರಹದ ಕಿವುಡುತನಕ್ಕೆ ಒಳಗಾಗುವವರಿದ್ದಾರೆ.
- ಅಮೇರಿಕಾದಲ್ಲಿ 6-19 ವರ್ಷ ವಯಸ್ಸಿನ ಶೇ 12.5 ಮಕ್ಕಳು ಅತಿಯಾದ ಶಬ್ದ ಕೇಳಿಸಿಕೊಳ್ಳುವದರಿಂದ ಕಿವುಡುತನ ಉಂಟಾಗಿವೆ.
- ವಿಶ್ವ ಆರೋಗ್ಯ ಸಂಸ್ಥೆ ವೈಯಕ್ತಿಕ ಆಡಿಯೊ ಸಾಧನ ವನ್ನು ಹೆಚ್ಚಾಗಿ ಬಳಸುವುದರಿಂದ ಕಿವುಡುತನ ಉಂಟಾಗುತ್ತದೆ.
- ಸುಮಾರು 75-80ರಷ್ಟು ಜನ ವಂಶವಾಹಿಗಳ ಪರಿಣಾಮಗಳಿಂದಲೂ ಶ್ರವಣ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.
- ವಂಶವಾಹಿಗಳ ನ್ಯೂನ್ಯತೆಯಿಂದ ತಾಯಂದಿರಿಗೆ ಜನಿಸಿದ ಶೇ 64 ಶಿಶುಗಳಲ್ಲಿ ಕಿವುಡುತನ ಕಾಣಿಸಿಕೊಳ್ಳುತ್ತದೆ.
ಕಿವುಡುತನ ಹರಡುವಿಕೆ:
ಜಾಗತಿಕವಾಗಿ ಶ್ರವಣ ಸಮಸ್ಯೆಯು ಸುಮಾರು ಶೇ 10 ರಷ್ಟು ಜನಸಂಖ್ಯೆಯಲ್ಲಿದೆ. ಶ್ರವಣ ಸಮಸ್ಯೆಯು ಶೇ 20 ರಿಂದ ಶೇ 35 ದರದಲ್ಲಿ ಉಂಟಾಗುತ್ತಿದೆ. ಶ್ರವಣ ಸಮಸ್ಯೆಯನ್ನು ಹೊಂದಿದವರ ವಾರ್ಷಿಕ ವೆಚ್ಚವು $ 750-790 ಬಿಲಿಯನ್ ಅಂತರರಾಷ್ಟ್ರೀಯ ಡಾಲರ್ ಗಳು ಎಂದು ಅಂದಾಜಿಸಲಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳ ಪ್ರತೀ 1000 ಜನಕ್ಕೆ 3 ಜನ ಮತ್ತು ಅಭಿವೃದ್ಧಿ ಹೊಂದಿದುತ್ತಿರುವ ದೇಶಗಳಲ್ಲಿ 1000 ಜನಕ್ಕೆ 6 ಕ್ಕಿಂತ ಹೆಚ್ಚು ಜನ ಶ್ರವಣ ಸಮಸ್ಯೆಗೆ ಒಳಗಾಗುತ್ತಿದ್ದಾರೆ.
ಕಿವುಡುತನ ತಡೆಯಲು ಸಂಶೋಧನಾ ಕಾರ್ಯ:
ಪ್ರಪಂಚದಲ್ಲಿನ ಶ್ರವಣ ಸಮಸ್ಯೆಯ ಅರ್ಧದಷ್ಟು ಪ್ರಕರಣಗಳನ್ನು ಚಿಕಿತ್ಸೆಯ ಮೂಲಕ ತಡೆಯಬಹುದು ಎಂದು ಅಂದಾಜಿಸಲಾಗಿದೆ.15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸುಮಾರು ಶೇ 60 ಶ್ರವಣ ಸಮಸ್ಯೆಯನ್ನು ತಪ್ಪಿಸಬಹುದು.
- 1.’ವಿಶ್ವ ಶ್ರವಣ ದಿನವು ಶ್ರವಣ ಹಾನಿಯನ್ನು ತಡೆಗಟ್ಟುವ ಕ್ರಮಗಳನ್ನು ಉತ್ತೇಜಿಸುವ ವಾರ್ಷಿಕ ಕಾರ್ಯಕ್ರಮವಾಗಿದೆ.
- ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಆಕ್ಯುಪೇಷನಲ್ ಸೇಷ್ಟಿ ಅಂಡ್ ಹೆಲ್ತ್ (NIOSH)ಸಂಶೋಧನೆ ನಡೆಸಿ ಮತ್ತು ಕಿವುಡುತನದ ಅಪಾಯಗಳನ್ನು ತಡೆಗಟ್ಟುವ ಕಾರ್ಯ ವನ್ನು ಮಾಡಿದ್ದಾರೆ.
- ನ್ಯಾಷನಲ್ ಹೆಲ್ತ್ ಅಂಡ್ ನ್ಯೂಟ್ರಿಷನ್ ಎಕ್ಸಾಮಿನೇಷನ್ ಸರ್ವೇ(NHANES), ಆರೋಗ್ಯ ರಾಷ್ಟ್ರೀಯ ಕೇಂದ್ರವು ಅಧ್ಯಯನ ಮಾಡಿದೆ.
- ಸ್ಟೆಮ್ ಸೆಲ್ ಕಸಿ ಮತ್ತು ಜೀನ್ಸ್ ಥೆರಪಿ: 2005 ರಲ್ಲಿನ ಒಂದು ಅಧ್ಯಯನವು ಗಿಲಿಯಿಲಿಗಳಲ್ಲಿ ಕೋಕ್ಲಿಯಾ ಕೋಶಗಳ ಪುನರ್ ಬೆಳವಣಿಗೆಯನ್ನು ಯಶಸ್ವಿಯಾಗಿ ಸಾಧಿಸಿತು .
WHO ಪ್ರಕಾರ ವಿಶ್ವಾದ್ಯಂತ ಸುಮಾರು 466 ಮಿಲಿಯನ್ ಶ್ರವಣ ಸಮಸ್ಯೆಯಿರುವ ಜನರಿದ್ದಾರೆ. 2050ರ ವೇಳೆಗೆ 900 ದಶಲಕ್ಷ ಹೆಚ್ಚು ಜನರು ಶ್ರವಣ ಸಮಸ್ಯೆ ಉಂಟಾಗಬಹುದೆಂದು ಅಂದಾಜಿಸಲಾಗಿದೆ.
WHO ಪ್ರತಿಕ್ರಿಯೆ: ‘ಸುರಕ್ಷಿತವಾಗಿ ಆಲಿಸಿ’ (Make listening safe)
‘1 ಶತಕೋಟಿ ಜನರನ್ನು ‘ಸುರಕ್ಷಿತವಾಗಿ ಆಲಿಸುವಿಕೆ’ ಎಂಬ ವಿಷಯದ ಅಡಿಯಲ್ಲಿ ದೊಡ್ಡ ಶಬ್ದ ಮಾಲಿನ್ಯ, ಮನರಂಜನಾ ಕ್ಷೇತ್ರದಲ್ಲುಂಟಾಗುವ ಶಬ್ಧ ಮಾಲಿನ್ಯ ಶ್ರವಣ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ WHO ತಿಳಿಸುತ್ತದೆ.
ಕಿವುಡುತನವೆಂಬುದು ಹುಟ್ಟಿನಿಂದ, ಶಬ್ದ ಮಾಲಿನ್ಯಗಳಿಂದ ಉಂಟಾಗುವಂತಹದ್ದು. ಆದರೆ ಕಿವುಡುತನವನ್ನು ಸುಧಾರಿಸಲು ಸಾಕಷ್ಟು ನವೀನ ಮಾದರಿಯ ತಂತ್ರಜ್ಞಾನಗಳು ವೈದ್ಯಕೀಯ ಕ್ಷೇತ್ರದಲ್ಲಿ ಕಾಲಿಟ್ಟಿವೆ. ಶ್ರವಣ ಸಮಸ್ಯೆಯ ಪ್ರತಿಯೊಬ್ಬರನ್ನು ಕಾಡುತ್ತಿದೆ. ಸಾಕಷ್ಟು ಕಾರ್ಯಕ್ರಮವನ್ನು , ಮುನ್ನೆಚ್ಚರಿಕೆಯನ್ನು ವಿಶ್ವದಾದ್ಯಂತ ಅನೇಕ ಸಂಘ ಸಂಸ್ಥೆಗಳು, ಆರೋಗ್ಯ ಕೇಂದ್ರಗಳ ಮೂಲಕ ಕೈಗೊಳ್ಳಲಾಗಿದೆ.
-- ಯಶೋಧ
ಸಂವಹನ ವಿದ್ಯಾರ್ಥಿನಿ
ಬೆಂಗಳೂರು ವಿಶ್ವವಿದ್ಯಾಲಯ
ಜ್ಞಾನ ಭಾರತಿ ಆವರಣ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!