November 16, 2024

Newsnap Kannada

The World at your finger tips!

ಗಣೇಶ ಚತುರ್ಥಿ ಹಬ್ಬ ganesha festive

ಗಣೇಶ ಚತುರ್ಥಿ ಹಬ್ಬ ganesha festive

ಗಣೇಶನಿಂದ ಕಲಿಯುವ ಅದ್ಭುತ ಪಾಠಗಳು

Spread the love
dr. rajashekar
ಡಾ. ರಾಜಶೇಖರ ನಾಗೂರ

ಗಣೇಶನಿಂದ ಕಲಿಯುವ ಅದ್ಭುತ ಪಾಠಗಳು

ತುಳಿದವರನ್ನೂ ಕ್ಷಮಿಸುತ್ತಾ ಸಾಗೋಣ

🐘 ಕೂರಿಸಿ ಆರಾಧಿಸಿದವರೇ ಎತ್ತಿಕೊಂಡು ಹೋಗಿ ಕೆರೆ, ಬಾವಿಗಳಲ್ಲಿ ಎಸೆದುಬಂದರೂ ಮುಂದಿನ ವರ್ಷ ಮತ್ತೆ ಮತ್ತೆ ಎದ್ದು ಬಂದು ಆಶೀರ್ವದಿಸೋ ಗಣೇಶನ ಹಾಗೆಯೇ ನಾವು ಆಗಬೇಕಿದೆ. ಯಾರು ಎಷ್ಟೇ ತುಳಿದರೂ ಮತ್ತೆ ಮತ್ತೆ ಎದ್ದು ನಿಂತು, ತುಳಿದವರನ್ನೂ ಕ್ಷಮಿಸುತ್ತಾ ಸಾಗೋಣ.

ಕೈ ಹಿಡಿದ ಕೆಲಸ ಎಂದೂ ನಿಲ್ಲಬಾರದು

🐘🐘 ಹಿಡಿದ ಕೆಲಸ ಬಿಡೋ ಜಾಯಮಾನ ಗಣೇಶನದಲ್ಲ. ವ್ಯಾಸ ಮುನಿಗಳು ಮಹಾಭಾರತ ರಚಿಸುವಾಗ ಅವರು ಹೇಳುತ್ತಾ ಹೋದರೆ, ಗಣಪತಿ ಬರೆಯುತ್ತಾ ಹೋಗುತ್ತಾನೆ. ಇಬ್ಬರಲ್ಲಿಯೂ ಒಂದು ಕಂಡೀಶನ್ ಇತ್ತು. ಒಂದು ಕ್ಷಣವೂ ಹೇಳುವುದನ್ನು ವ್ಯಾಸರು ನಿಲ್ಲಿಸುವ ಹಾಗಿಲ್ಲ. ಆಕಾಸ್ಮಾತ್ ಆಗಿ ಅವರು ಹೇಳುವುದನ್ನು ಒಂದು ಸಣ್ಣ ಅವಧಿಗೆ ನಿಲ್ಲಿಸಿದರೂ, ಆ ಕ್ಷಣವೇ ನಾನು ಕೂಡ ಬರೆಯುವುದನ್ನು ನಿಲ್ಲಿಸಿಬಿಡುವೆ ಎನ್ನುವ ಕಂಡೀಶನ್ ಗಣಪತಿಯದಾಗಿತ್ತು. ಹಾಗೆಯೇ ನಾನು ಕೂಡ ಒಮ್ಮೆ ಬರೆಯಲು ಪ್ರಾರಂಭಿಸಿದರೆ ಯಾವುದೇ ಕಾರಣಕ್ಕೂ ಮುಗಿಯುವವರೆಗೆ ನಿಲ್ಲಿಸಲಾರೆ ಎನ್ನುವ ದೃಢ ನಿರ್ಧಾರ ಗಣಪತಿಯದಾಗಿತ್ತು. ಒಮ್ಮೆ ಪ್ರಾರಂಭವಾದಮೇಲೆ ಇದು ಸುಮಾರು ತಿಂಗಳುಗಳವರೆಗೆ ಎಲ್ಲಿಯೂ ನಿಲ್ಲದೆ ಸಾಗಿತು. ಹೀಗೆ ಬರೆಯುತ್ತಿರುವಾಗ ಗಣಪತಿಯ ಲೆಕ್ಕಣಿಕೆ (pen) ಯಾವುದೊ ಕಾರಣಕ್ಕೆ ಮುರಿದು ಹೋಯಿತು. ತಕ್ಷಣವೇ ಗಣೇಶನು ತನ್ನ ಒಂದು ದಂತವನ್ನೇ ಮುರಿದು ಅದನ್ನೇ ಲೆಕ್ಕಣಿಕೆಯಾಗಿಸಿ ಬರೆಯುವುದನ್ನು ಮುಂದುವರೆಸುತ್ತಾನಂತೆ.
ಈ ಸಮರ್ಪಣಾ ಗುಣ ಗಣೇಶನಿಂದ ಕಲಿಯುವಂತದ್ದು. ಅಲ್ವಾ! ಯಾವುದೇ ಟಾಸ್ಕ್ ನ್ನು ಒಮ್ಮೆ ತೆಗೆದುಕೊಂಡರೆ, ಎಷ್ಟೇ ಕಷ್ಟಗಳು ಬಂದರೂ ಅದನ್ನು ಮುಗಿಸುವವರೆಗೆ ನಿಲ್ಲಬಾರದು ಎನ್ನುವ ಮಹತ್ವದ ಪಾಠ. ಗಣೇಶ ಚತುರ್ಥಿ 2022 (Ganesha Chaturthi 2022)

ತಾಯಿ – ತಂದೆ ನಮ್ಮ ದೇವರು

Parents Are god ganesha newsnap kannada english

🐘🐘🐘 ಜಗತ್ತನ್ನು ಮೂರು ಸುತ್ತು ಸುತ್ತಿ ಬನ್ನಿ ಎಂದು ಶಿವ ಪಾರ್ವತಿಯರು ಮಕ್ಕಳಿಗೆ ಹೇಳಿದಾಗ, ಗಣಪತಿಯು ತಂದೆ-ತಾಯಿಯನ್ನೇ ಪ್ರದಕ್ಷಿಣೆ ಹಾಕಿ ಹೇಳುತ್ತಾನೆ. ನನಗೆ ನೀವೇ ಪ್ರಪಂಚ. ಹೀಗಾಗಿ ನಿಮಗೆ ಪ್ರದಕ್ಷಿಣೆ ಮಾಡಿದೆ ಎಂದು. ನಮ್ಮ ಬದುಕಲ್ಲಿ ನಾವು ಯಾರನ್ನು ನಮ್ಮ ಪ್ರಪಂಚ ಎಂದುಕೊಂಡಿರುತ್ತೇವೆಯೋ ಅವರ ಜೊತೆಯೇ ಜೀವನದ ಕೊನೆಯ ಕ್ಷಣದವರೆಗೆ ಸದಾ ಗೌರವ ಪ್ರೀತ್ಯಾಧಾರಗಳಿಂದ ಇರುವ ಇಂಗಿತ.

ಬರೀ ಆಚರಣೆಯಾಗಬಾರದು! ಆಚರಣೆಯ ಹಿಂದಿನ ಸೂಕ್ಷ್ಮ ಪಾಠಗಳನ್ನು ಕಲಿಯುವಂತಾಗಬೇಕು. ಆಗ ಗಣಪತಿಯ ಆರಾಧನೆಗೆ ಒಂದು ಅರ್ಥ.

ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು

Lessons to learn from Lord ganesha #ganeshainkannada #ganesha #kannada #ganapati #mushikavahana #thoughtsofganesha #shiva #kannadanews #mandya #mysore #bengaluru

Copyright © All rights reserved Newsnap | Newsever by AF themes.
error: Content is protected !!