February 19, 2026

Newsnap Kannada

The World at your finger tips!

deepa1

ದೀಪದೊಳಗು

Spread the love

ನಾಕವೇನಲ್ಲ
ನನ್ನೊಳಗು

ಕಣ್ಣಕೆಳಗೆ
ಉರಿನಾಲಗೆ
ಮೈಯ ತುಂಬ
ಚಿತ್ತಾರ

ಕಡುಕತ್ತಲು
ಹುರಿ ನಡುಗಿಸಲು
ಬೆಳಗ ಬೇಕು
ನಾ ನಿಂತು

ಆಗೀಗ ಬರುವ
ಮರುತ ನಗುತ
ಜೀವ ಹಿಂಡುವ
ಆಟವಾಡುತ

ಕಣ್ಣ ಕಾಂತಿಯ
ಹರಡಿ ನಕ್ಕು
ನೋವ ನುಂಗಿ
ಬೆಳಕ ಚೆಲ್ಲಿ

ಒಡಲೊಳಗೆ
ಬಿಸಿಯುಸಿರ ತೈಲ
ನಾನಾಗಬೇಕು
ಬೆಳಕ ಶೈಲ

ನಾಕವೇನಲ್ಲ
ನನ್ನೊಳಗು
ಹೆಣ್ಣಲ್ಲವೆ
ದೀಪ

-ಡಾ.ಶುಭಶ್ರೀಪ್ರಸಾದ್

error: Content is protected !!