ಇದೇ ಆರೋಪದಡಿ ಕ್ರೈಸ್ತ ಪ್ರಾದಿ, ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಆ ಸುಂದರ ಮಹಿಳೆ ಮತ್ತು ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಇದನ್ನು ಓದಿ –ಮುಂಬರುವ ಚುನಾವಣೆಯಲ್ಲಿ JDS- BRS ಮೈತ್ರಿ – H D K
ಅಂಜಲಿ ಅಗರ್ವಾಲ್ (30), ಥಾಮಸ್ ರಾಮುಲ್ ಗೋಡ್ಪವಾರ್ (50) ಮತ್ತು ಮಹೇಶ್ ಕಾಟ್ಕರ್ (37) ಬಂಧಿತರು .ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಅಂಜಲಿ ಅಗರ್ವಾಲ್, ಅಲ್ಲಿಗೆ ಬರುತ್ತಿದ್ದ 35 ವರ್ಷದ ಗ್ರಾಹಕರೊಬ್ಬರನ್ನು ಪ್ರೀತಿಸುತ್ತಿದ್ದಳು. ನಂತರ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು.
ಆದರೆ 2021ರ ನವೆಂಬರ್‌ನಲ್ಲಿ ( November ) ವ್ಯಕ್ತಿ ಸಾವನ್ನಪ್ಪಿದರು. ಈ ವಿಚಾರ ತಿಳಿದ ಅಂಜಲಿ, ಇಬ್ಬರು ಆರೋಪಿಗಳ ಸಹಾಯದಿಂದ ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿಸಿ ಥಾಣೆ ಮುಂಬೈನ ಕವೇಸರ್‌ನಲ್ಲಿ 19.70 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದೋಚಿದ್ದಾಳೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಾಲೋಜಿ ಶಿಂಧೆ ಹೇಳಿದ್ದಾರೆ.
ಈ ವಿಚಾರ ತಿಳಿದ ಬಳಿಕ ಮೃತ ವ್ಯಕ್ತಿಯ ತಾಯಿ, ನೌಪಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಆರೋಪಿಗಳು ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ತೋರಿಸಿ ಆಸ್ತಿ ( Asset ) ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ