ಎರಡು ದಿನ ದಸರಾ ( Dasara) ಹಬ್ಬದ ಬ್ರೇಕ್ ಬಳಿಕ ಕಾಂಗ್ರೆಸ್ನ ( Congress ) ಮುಖಂಡ ರಾಹುಲ್ ಗಾಂಧಿ ( Rahul Gandhi )ನಾಯಕತ್ವದಲ್ಲಿ ಹಮ್ಮಿಕೊಂಡಿರುವ ಭಾರತ ಐಕ್ಯತಾ ಯಾತ್ರೆಶುಕ್ರವಾರ ಬೆಳಿಗ್ಗೆಯಿಂದ ಮತ್ತೆ ಆರಂಭವಾಗಿದೆ.
ಆರಂಭದಲ್ಲೇ ಸೋನಿಯಾ ಗಾಂಧಿ ( Sonia Gandhi ) ಅವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಇದು ಕಾಂಗ್ರೆಸ್ನ ( Congress)ನಾಯಕರಿಗೆ ಮತ್ತಷ್ಟು ಜೋಷ್ ನೀಡಿತ್ತು.ನಕಲಿ ಮದುವೆ ಸರ್ಟಿಪಿಕೇಟ್ ಸೃಷ್ಠಿಸಿ 19 ಕೋಟಿ ರು ಆಸ್ತಿ ಕಬಳಿಸಿದ ಸುಂದರಿ ! ಪೋಲಿಸರಿಂದ ಮೂವರ ಬಂಧನ
ಮೇಲುಕೋಟೆ ( Melukote ) ವಿಧಾನಸಭಾ ಕ್ಷೇತ್ರದಲ್ಲಿ ಸಾಗುತ್ತಿರುವ ಯಾತ್ರೆಯಲ್ಲಿ ಜಕ್ಕನಹಳ್ಳಿಯಿಂದ ಸೋನಿಯಾ ಗಾಂಧಿ ಭಾಗಿಯಾಗಿದ್ದರು. ಹದಿನೈದು ನಿಮಿಷ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸೋನಿಯಾ ಅವರು ರಾಜ್ಯ ನಾಯಕರ ಜೊತೆ ನಡೆಯುತ್ತಲೇ ಮಾತುಕತೆ ನಡೆಸಿದರು. ಇಂದು ಪಾಂಡವಪುರದಿಂದ ಶುರುವಾಗಿ ಬ್ರಹ್ಮದೇವರಹಳ್ಳಿಯವರೆಗೂ ಸಾಗಲಿದೆ.
ಈ ವೇಳೆ ರಾಹುಲ್ಗೆ ಡಿ.ಕೆ. ಶಿವಕುಮಾರ್ ( D K Shivkumar ) , ಸಿದ್ದರಾಮಯ್ಯ ( Siddaramaiah ) ಸೇರಿದಂತೆ ಹೆಚ್.ಕೆ ಪಾಟೀಲ್, ಜೈರಾಂ ರಮೇಶ್, ದಿಗ್ವಿಜಯ್ ಸಿಂಗ್ ಜೊತೆಯಾಗಿ ಪಾದಯಾತ್ರೆ ಮಾಡಿದರು.
ಎರಡು ದಿನದ ಹಿಂದೆ ರಾಜ್ಯಕ್ಕೆ ಬಂದಿರುವ ಸೋನಿಯಾ ಗಾಂಧಿ ಕಬಿನಿ ( Kabini ) ಹಿನ್ನೀರನಲ್ಲಿರುವ ಆರೆಂಜ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಪಾದಯಾತ್ರೆಯಲ್ಲಿ ಭಾಗಿ ಆಗಲು ರೆಸಾರ್ಟ್ನಿಂದ ಹೊರಟು, ತೂಬಿನಕೆರೆವರೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ಅಲ್ಲಿಂದ ಕಾರ್ ಮೂಲಕ ಜಕ್ಕನಹಳ್ಳಿಗೆ ಹೋಗಿ ಯಾತ್ರೆಯಲ್ಲಿ ಭಾಗಿಯಾದರು.
ಪಾದಯಾತ್ರೆ ಮುಗಿಸಿದ ಸೋನಿಯಾ ಗಾಂಧಿ ಅವರು, ಸೀದಾ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.
ಇನ್ನೂ, 11 ಗಂಟೆಗೆ ಖಾರದ್ಯಕೆರೆ ಬಳಿ ನಾಯಕರು ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ 4 ಗಂಟೆಗೆ ಯಾತ್ರೆ ಮತ್ತೆ ಆರಂಭವಾಗಿ ಬ್ರಹ್ಮದೇವರಹಳ್ಳಿಯಲ್ಲಿ ಕೊನೆಗೊಳ್ಳಲಿದೆ. ಒಟ್ಟಾರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯುತ್ತಿರುವ ಪಾದಯಾತ್ರೆಗೆ, ಹೋದಲೆಲ್ಲ ಅಭೂತ ಪೂರ್ವ ಬೆಂಬಲ ಸಿಗುತ್ತಿದೆ.
More Stories
ಲೋಕಸಭೆ ಚುನಾವಣೆಗೆ ಬಿಜೆಪಿ – ಜೆಡಿಎಸ್ ಮೈತ್ರಿ..? ಮಾಜಿ ಸಿಎಂ ‘HDK’ ನಡೆಯೇ ಕುತೂಹಲ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಐದು ಷರತ್ತು
ಮಂಡ್ಯ : ಲಾರಿಗೆ ಕಾರು ಡಿಕ್ಕಿ – ನೆಲಮಂಗಲದ ನಾಲ್ವರು ಸಾವು