30 ವರ್ಷದ ಸುರ ಸುಂದರಿ ಒಬ್ಬಳು ನಕಲಿ ಮದುವೆ ಸರ್ಟಿಫಿಕೇಟ್ ( Fake Marriage certificate )ಸೃಷ್ಟಿಸಿ ಮಾಡಿ ಮೃತ ವ್ಯಕ್ತಿಯೊಬ್ಬರ 19.70 ಕೋಟಿ ( Crore ) ಮೌಲ್ಯದ ಆಸ್ತಿಯನ್ನು ಲಪಟಾಯಿಸಿ ಈಗ ಪೋಲಿಸರು ಬಂಧನದಲ್ಲಿ ಇದ್ದಾಳೆ.
ಇದೇ ಆರೋಪದಡಿ ಕ್ರೈಸ್ತ ಪ್ರಾದಿ, ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಆ ಸುಂದರ ಮಹಿಳೆ ಮತ್ತು ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಇದನ್ನು ಓದಿ –ಮುಂಬರುವ ಚುನಾವಣೆಯಲ್ಲಿ JDS- BRS ಮೈತ್ರಿ – H D K
ಅಂಜಲಿ ಅಗರ್ವಾಲ್ (30), ಥಾಮಸ್ ರಾಮುಲ್ ಗೋಡ್ಪವಾರ್ (50) ಮತ್ತು ಮಹೇಶ್ ಕಾಟ್ಕರ್ (37) ಬಂಧಿತರು .ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಅಂಜಲಿ ಅಗರ್ವಾಲ್, ಅಲ್ಲಿಗೆ ಬರುತ್ತಿದ್ದ 35 ವರ್ಷದ ಗ್ರಾಹಕರೊಬ್ಬರನ್ನು ಪ್ರೀತಿಸುತ್ತಿದ್ದಳು. ನಂತರ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು.
ಆದರೆ 2021ರ ನವೆಂಬರ್‌ನಲ್ಲಿ ( November ) ವ್ಯಕ್ತಿ ಸಾವನ್ನಪ್ಪಿದರು. ಈ ವಿಚಾರ ತಿಳಿದ ಅಂಜಲಿ, ಇಬ್ಬರು ಆರೋಪಿಗಳ ಸಹಾಯದಿಂದ ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿಸಿ ಥಾಣೆ ಮುಂಬೈನ ಕವೇಸರ್‌ನಲ್ಲಿ 19.70 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದೋಚಿದ್ದಾಳೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಾಲೋಜಿ ಶಿಂಧೆ ಹೇಳಿದ್ದಾರೆ.
ಈ ವಿಚಾರ ತಿಳಿದ ಬಳಿಕ ಮೃತ ವ್ಯಕ್ತಿಯ ತಾಯಿ, ನೌಪಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಆರೋಪಿಗಳು ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ತೋರಿಸಿ ಆಸ್ತಿ ( Asset ) ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
- ಮತ್ತೆ ಟೋಲ್ ಶುಲ್ಕ ಹೆಚ್ಚಳ, ಏಪ್ರಿಲ್ 1 ರಿಂದಲೇ ಹೊಸ ದರ
- ಕೌಟುಂಬಿಕ ಕಲಹ : ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಆತ್ಮಹತ್ಯೆ
- ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಚುನಾವಣೆಯಿಂದ 6 ವರ್ಷ ಅನರ್ಹ
- ಸಂಸತ್ ಸದಸ್ಯತ್ವಕ್ಕೆ ಪ್ರಜ್ವಲ್ ರೇವಣ್ಣರಾಜೀನಾಮೆ ? ದೇವೇಗೌಡರಿಗೆ ತಲೆ ನೋವಾದ ಹಾಸನ ಟಿಕೆಟ್
- ಕೇಂದ್ರದಲ್ಲಿನ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಖಾಲಿ ಹುದ್ದೆಗಳು
- SSLC ವಿದ್ಯಾರ್ಥಿಗಳಿಗೆ ಈ ಬಾರಿಯೂ ಶೇ.10 ರಷ್ಟು ಕೃಪಾಂಕ
More Stories
ಕೌಟುಂಬಿಕ ಕಲಹ : ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಆತ್ಮಹತ್ಯೆ
ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕ್ನ 114 ಕೋಟಿ ರೂ. ಆಸ್ತಿ ಜಪ್ತಿ
ಗಾಂಜಾ ಕೇಸ್. : ಪತಿ – ಪತ್ನಿ ಅಂದರ್ – ದಂಧೆಗೆ ತನ್ನ ಮಕ್ಕಳನ್ನೇ ಬಳಸಿಕೊಳ್ತಿದ್ದ ಖತರ್ನಾಕ್ ಲೇಡಿ