ಅಪರಿಚಿತ ಯುವತಿ ಯುವಕನೊಬ್ಬನಿಗೆ ವೀಡಿಯೋ ಕಾಲ್ ಮಾಡಿ, ಬಳಿಕ ಅದರ ರೆಕಾರ್ಡ್‌ಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣ ಕುರಿತು ಮೈಸೂರಿನ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಯುವಕ ವಾಸುವಿಗೆ ಭಾನುವಾರ ಬೆಳಗ್ಗೆ ಯುವತಿಯೊಬ್ಬಳಿಂದ ವೀಡಿಯೋ ಕಾಲ್ ಬಂದಿದೆ.ಇದನ್ನು ಓದಿ –ಕಷ್ಟಗಳಿಗೆ ಹೆದರಿ ಮಗು ಕೊಂದು ಅತ್ಮಹತ್ಯೆಗೆ ಯತ್ನಿಸಿದ ತಾಯಿಯ ಸ್ಥಿತಿ ಗಂಭೀರ
ಆಕೆ ವೀಡಿಯೋ ಕಾಲ್ ಮಾಡುವುದಕ್ಕೂ ಮುನ್ನ ತನ್ನನ್ನು ಅಮೃತ ಎಂದು ಪರಿಚಯ ಮಾಡಿಕೊಂಡು ಚ್ಯಾಟ್ ಮಾಡಿದ್ದಾಳೆ. ಬಳಿಕ ವೀಡಿಯೋ ಕಾಲ್ ಮಾಡುತ್ತಲೇ ನಗ್ನಳಾಗಿದ್ದಾಳೆ.
ಯುವತಿಯ ಅವಸ್ಥೆ ಕಂಡು ಕಸಿವಿಸಿಗೊಂಡ ವಾಸು ತಕ್ಷಣವೇ ವೀಡಿಯೋ ಕಾಲ್ ಅನ್ನು ಕಟ್ ಮಾಡಿದ್ದಾನೆ. ಆದರೆ ಬಳಿಕ ಅದೇ ವೀಡಿಯೋ ಕಾಲ್‌ನ ರೆಕಾರ್ಡ್ ಇಟ್ಟುಕೊಂಡು ಯುವತಿ ಹಣಕ್ಕಾಗಿ ಡಿಮಾಂಡ್ ಮಾಡಿದ್ದಾಳೆ.
ಹಣ ಕೊಡದೇ ಹೋದರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾಳೆ.
ಈ ಹಿನ್ನೆಲೆ ವಾಸು ತಕ್ಷಣವೇ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಬಗ್ಗೆ ಮೈಸೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
- ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ
- ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ
More Stories
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ