ನಾಳೆಯಿಂದ ಕೊಡಗಿನಲ್ಲಿ ನಾಲ್ಕು ದಿನ ನಿಷೇದಾಜ್ಞೆ : ಕಾಂಗ್ರೆಸ್ ಮುತ್ತಿಗೆ , ಬಿಜೆಪಿ ಸಮಾವೇಶಕ್ಕೆ ಬ್ರೇಕ್

Team Newsnap
1 Min Read

ಆಗಸ್ಟ್​ 26ಕ್ಕೆ ಕೊಡಗು ಎಸ್​ಪಿ ಕಚೇರಿ ಮೇಲೆ ಮುತ್ತಿಗೆ ಹಾಕೋ ಮೂಲಕ ಶಕ್ತಿಪ್ರದರ್ಶನಕ್ಕೆ ಕಾಂಗ್ರೆಸ್ ನಾಯಕರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಬ್ರೇಕ್​ ಹಾಕಲು ಸರ್ಕಾರ ನಿಷೇಧಾಜ್ಞೆ ಅಸ್ತ್ರವನ್ನು ಪ್ರಯೋಗಿಸಿದೆ.

ನಾಳೆಯಿಂದ (ಅ. 24) ಮುಂದಿನ 4 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದೆ ಇದನ್ನು ಓದಿ –ಕಷ್ಟಗಳಿಗೆ ಹೆದರಿ ಮಗು ಕೊಂದು ಅತ್ಮಹತ್ಯೆಗೆ ಯತ್ನಿಸಿದ ತಾಯಿಯ ಸ್ಥಿತಿ ಗಂಭೀರ

ಜಿಲ್ಲಾಡಳಿತಕ್ಕೆ , ಕಾಂಗ್ರೆಸ್​ನ ‘ಮಡಿಕೇರಿ ಚಲೋ’, ‘ಬಿಜೆಪಿಯ ಜನಜಾಗೃತಿ’ ನಿಲ್ಲಿಸೋದಷ್ಟೇ ಉದ್ದೇಶವಲ್ಲ. ಬದಲಾಗಿ ಕೇಂದ್ರ ಗುಪ್ತಚರ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಸ್ಫೋಟಕ ಮಾಹಿತಿ ಸಿಕ್ಕಿದೆ
. ಆ 26 ರಂದು ಎರಡು ರಾಷ್ಟ್ರೀಯ ಪಕ್ಷಗಳ ಮುಖಾಮುಖಿ ಆಗುವ ಹಿನ್ನೆಲೆಯಲ್ಲಿ ಎರಡು ಪಕ್ಷಗಳಿಂದ ತಲಾ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿಸುವ ಸಾಧ್ಯತೆ ಇದೆ.

ಈ ವೇಳೆ ಕೊಡಗಿನಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ. ಅದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ನಡೆಯುವ ಹಿಂಸಾಚಾರವಲ್ಲ. ಪಕ್ಕದ ರಾಜ್ಯ ಕೇರಳದಿಂದ ಪಿಎಫ್ಐ ಜಿಲ್ಲೆಗೆ ಎಂಟ್ರಿಯಾಗುವ ಬಗ್ಗೆ ಮಾಹಿತಿ ಸಿಕ್ಕಿದೆ. ಈಗಾಗಲೇ ಜಿಲ್ಲೆಯಲ್ಲಿ ಪಿಎಫ್ಐನ ಕೆಲವು ಸದಸ್ಯರು ಬಂದು ತಂಗಿದ್ದಾರೆ ಎನ್ನಲಾಗಿದೆ.

ಕೊಡಗಿನಲ್ಲಿ ಐಜಿಪಿ ನೇತೃತ್ವದಲ್ಲಿ ಎರಡು ಪಕ್ಷಗಳ ಮುಖಂಡರ ಸಭೆ ನಡೆಯುವ ಸಾಧ್ಯತೆ ಇದೆ. ಎರಡು ಪಕ್ಷಗಳು ತಮ್ಮ ಕಾರ್ಯಕ್ರಮಗಳನ್ನು ಮುಂದೂಡುವಂತೆ ಸಲಹೆ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.

Share This Article
Leave a comment