ನವೆಂಬರ್ ಅಂತ್ಯದಲ್ಲಿ ಶಾಲೆಗಳ ಆರಂಭ?

Team Newsnap
1 Min Read

ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆರಂಭದ ಬಗ್ಗೆ ಮತ್ತೆ ಚರ್ಚೆಗಳು ಆರಂಭವಾಗಿವೆ. ನವೆಂಬರ್ ನಂತರ ಶಾಲೆಗಳು ಪುನರಾರಂಭವಾಗಬಹುದು ಎನ್ನಲಾಗುತ್ತಿದೆ.

ಕೇಂದ್ರ ಸರ್ಕಾರ ಅನ್‌ಲಾಕ್ 5.0 ಮಾರ್ಗಸೂಚಿಯನ್ನು ನವೆಂಬರ್ 30, 2020ರವರೆಗೆ ವಿಸ್ತರಣೆ ಮಾಡಿತ್ತು. ಅಲ್ಲದೇ ನವೆಂಬರ್ 30ರವರೆಗೆ ಶಾಲೆಗಳನ್ನು ಆರಂಭಿಸದಂತೆ ಆದೇಶ ಕೂಡ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲೆಗಳ ಆರಂಭದ ಬಗ್ಗೆ ಸದ್ಯದಲ್ಲಿಯೇ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.

WhatsApp Image 2020 10 31 at 11.57.18 AM

ನವೆಂಬರ್ 17 ಪದವಿ ಕಾಲೇಜು

ಜೊತೆಗೆ ನವೆಂಬರ್ 2ರಿಂದ ಶಾಲಾ ಶಿಕ್ಷಕರು, ಸಿಬ್ಬಂದಿಗಳು ಮುಂದಿನ ಆದೇಶದವರೆಗೆ ಶಾಲೆಗಳಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಆದರೆ ವಿದ್ಯಾಗಮ ಸೇರಿದಂತೆ ಯಾವುದೇ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಈಗಾಗಲೇ ನ.17ರಿಂದ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನು ಪುನಾರಂಭಿಸಲು ಅನುಮತಿ ನೀಡಲಾಗಿದೆ.

ನವೆಂಬರ್ 2 ರಂದು ಸಭೆ

ಶಾಲೆಗಳ ಪುನರಾರಂಭದ ಬಗ್ಗೆ ಸಾರ್ಜಜನಿಕ ಶಿಕ್ಷಣ ಇಲಾಖೆ ನವೆಂಬರ್ ೨ರಂದು ಸಭೆಯನ್ನು ಕರೆದಿದೆ ಎನ್ನಲಾಗಿದೆ. ಅಂದು ನಡೆಯಲಿರುವ ಸಭೆಯಲ್ಲಿ ರಾಜ್ಯದಲ್ಲಿ ಶಾಲೆಗಳ ಆರಂಭ ಕುರಿತಂತೆ ಚರ್ಚೆ ನಡೆಸಲಿದೆ. ಈ ಸಭೆಯಲ್ಲಿನ ಚರ್ಚೆಯ ನಂತರ ಮುಖ್ಯಮಂತ್ರಿಗಳು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಲಿದ್ದಾರೆ. ಆ ನಂತರ ಶಾಲೆಗಳನ್ನು ಪುನರಾರಂಭಿಸಬೇಕೇ ಅಥವಾ ಈ ವರ್ಷವನ್ನು ಶೂನ್ಯ ವರ್ಷ ಎಂದು ಪರಿಗಣಿಸಬೇಕೇ ಎಂಬ ಬಗ್ಗೆ ನಿರ್ಧಾರ ಹೊರಬೀಳಲಿದೆ.

ಶಿಕ್ಷಣ ಇಲಾಖೆಯ ಮೂಲಗಳಂತೆ ಮಾಹಿತಿಯ ಪ್ರಕಾರ, ನವೆಂಬರ್ ಕೊನೆಯ ವಾರದಲ್ಲಿ ಶಾಲೆಗಳ ಪುನರಾರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿನ ಶಾಲೆ ಆವರಣ, ಶಾಲಾ ಕೊಠಡಿಗಳನ್ನು
ಸ್ವಚ್ಛಗೊಳಿಸುವಂತೆಯೂ ಸೂಚಿಸಿದೆ ಎನ್ನಲಾಗಿದೆ.

Share This Article
Leave a comment