ಟಿ 20 ಕ್ರಿಕೆಟ್‌ : ಸಾವಿರ ಸಿಕ್ಸರ್ ಬಾರಿಸಿದ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್

Team Newsnap
1 Min Read

ಐಪಿಎಲ್ 2020ರಲ್ಲಿ  8 ಪಂದ್ಯಗಳ ನಂತರ  11ರ ಬಳಗದಲ್ಲಿ ತಂಡ ಸೇರಿಕೊಂಡಿರುವ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸಾವಿರ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

41ನೇ ವಯಸ್ಸಿನಲ್ಲೂ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಕ್ರಿಸ್ ಗೇಲ್,  ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ  ಈ ಸಾಧನೆ ಮಾಡಿದರು. 410 ನೇ ಟಿ20 ಪಂದ್ಯದಲ್ಲಿ ಗೇಲ್ ಈ ಸಾಧನೆ ಮಾಡಿದ್ದಾರೆ. 

ನಿನ್ನೆ ನಡೆದ ಪಂದ್ಯದಲ್ಲಿ ಕೇವಲ ಒಂದು ರನ್‌ನಿಂದ ಶತಕ ವಂಚಿತರಾದ ಗೇಲ್ ಒಟ್ಟು 8 ಸಿಕ್ಸರ್​ ಸಿಡಿಸಿದ್ದಾರೆ. ಅವರೀಗ ಒಟ್ಟಾರೆ 1001 ಸಿಕ್ಸರ್​ಗಳ ಸರದಾರರಾಗಿದ್ದಾರೆ. 

ಗೇಲ್ ಅವರ ಸಾವಿರ ಸಿಕ್ಸರ್‌ಗಳ ಪೈಕಿ 105 ಸಿಕ್ಸರ್‌ಗಳು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಬಂದಿವೆ. ಐಪಿಎಲ್‌ನಲ್ಲೂ ಅವರು 345 ಸಿಕ್ಸರ್ ಸಿಡಿಸಿದ್ದಾರೆ.  ಉಳಿದೆಲ್ಲ ಸಿಕ್ಸರ್‌ಗಳನ್ನು ವಿಶ್ವದ ವಿವಿಧ ಟಿ20 ಲೀಗ್‌ಗಳಲ್ಲಿ ಬಾರಿಸಿದ್ದಾರೆ.  ಟಿ20 ಕ್ರಿಕೆಟ್‌ನಲ್ಲಿ 22 ಶತಕ ಮತ್ತು 85 ಅರ್ಧಶತಕಗಳ ಸಹಿತ 13 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಸಾವಿರಕ್ಕೂ ಅಧಿಕ ಬೌಂಡರಿಗಳನ್ನೂ ಸಿಡಿಸಿದ್ದಾರೆ.

Share This Article
Leave a comment