ರೋಹಿಣಿ ಸಿಂಧೂರಿಯ ( Rohini Sindhuri ) ಇನ್ನೊಂದು ಮುಖ ಇದೆ ಎಂಬುದನ್ನು ರೂಪ ಬಯಲು ಮಾಡಿದ್ದಾರೆ. ಒಬ್ಬ ಅಧಿಕಾರಿಯಾಗಿ ಇದ್ದುಕೊಂಡು ಮತ್ತೊಬ್ಬರನ್ನು ಸೆಳೆಯುವ ಅಥವಾ ಉತ್ತೇಜಿಸುವ ಪೋಟೋ ಗಳನ್ನು ವಾಟ್ ಸ್ಯಾಪ್ ಮೂಲಕ ಕಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ ರೂಪ.ಇದನ್ನು ಓದಿ – ಹಾಸನ – ಐಫೋನ್ ಆಸೆಗಾಗಿ ಕೊರಿಯರ್ ಬಾಯ್ ಹತ್ಯೆ
ನಾನು ರೋಹಿಣಿ ಸಿಂಧೂರಿ ಕುರಿತಾದ ಎಲ್ಲಾ ಪೋಟೋ, ದಾಖಲೆಗಳನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥಳು ಎಂತಾಗಿದೆ. ಈಗ ಅವರ ಖಾಸಗಿ ಪೋಟೋಗಳನ್ನು ಯಾವ ಅಧಿಕಾರಿಗಳಿಗೆ ಕಳುಹಿಸುತ್ತಿದ್ದರು. ಉದ್ದೇಶ ಏನು ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ರೂಪ ಹೇಳಿದ್ದಾರೆ. ಇದನ್ನು ಓದಿ – ರಾಜ್ಯದಲ್ಲಿ IAS – IPS ಯುದ್ದ : ರೋಹಿಣಿ ವಿರುದ್ದ ಮತ್ತೆ ಸಿಡಿದೆದ್ದ ರೂಪ
19 ಆರೋಪಗಳನ್ನು ಮಾಡಿರುವ ರೂಪ ಎಲ್ಲದಕ್ಕೂ ದಾಖಲೆ ಇದೆ. ಅಗತ್ಯ ಸಮಯದಲ್ಲಿ ಮಾತ್ರ ಬಹಿರಂಗ ಮಾಡುವೆ . ಸಧ್ಯಕ್ಕೆ ಫೇಸ್ ಬುಕ್ ಕೆಲವು ಸಂಗತಿ, ಫೋಟೋಗಳನ್ನು ಹಂಚಿಕೊಂಡಿದ್ದೇನೆ. ಮಾಡಿರುವ ಆರೋಪಗಳಿಗೆ ಬದ್ಧವಾಗಿದ್ದೇನೆ ಎಂದು ಮಾಧ್ಯಮಗಳಿಗೆ ಐಜಿ ರೂಪ ಮೌದ್ಗಿಲ್ ಪ್ರತಿಕ್ರಿಯೆ ನೀಡಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು