ರಾಜ್ಯದಲ್ಲಿ IAS – IPS ಯುದ್ದ : ರೋಹಿಣಿ ವಿರುದ್ದ ಮತ್ತೆ ಸಿಡಿದೆದ್ದ ರೂಪ

Team Newsnap
2 Min Read
Apologize : Otherwise 1 Crore Rs. Defamation case – Rohini warns Roopa ಕ್ಷಮೆ ಕೇಳಿ : ಇಲ್ಲದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ

ರೋಹಿಣಿ ಸಿಂಧೂರಿ ತಮ್ಮ ಕೆಲಸಕ್ಕಿಂತ ಹೆಚ್ಚಾಗಿ ವಿವಾದದಿಂದಲೇ ಹೆಚ್ಚು ಖ್ಯಾತಿ. ಡಿಕೆ ರವಿಯವರಿಂದ ಹಿಡಿದು ಇತ್ತೀಚಿಗೆ ಶಾಸಕ ಸಾ.ರಾ ಗೋವಿಂದರ ಜೊತೆಗಿನ ಕಿತ್ತಾಟದಲ್ಲಿ ರೋಹಿಣಿ ಹೆಚ್ಚು ಫೇಮಸ್ .

ರೂಪಾ ಸಮರ :

ರೋಹಿಣಿಯವರ ಕಾರ್ಯವೈಖರಿ ಬಗ್ಗೆ ಐಪಿಎಸ್‌ ಅಧಿಕಾರಿ ರೂಪ ಸಮರ ಸಾರಿ ಪ್ರಶ್ನೆ ಗಳ ಸುರಿಮಳೆ ಸುರಿಸಿದ್ದಾರೆ ರಾಜ್ಯದಲ್ಲಿ ಐಎಎಸ್‌ ಐಪಿಎಸ್‌ ಅಧಿಕಾರಿಗಳ ನಡುವಿನ ಯುದ್ದ ತಾರಕಕ್ಕೇ ಏರಿದೆ.ತೆಲುಗು ನಟ ನಂದಮೂರಿ ತಾರಕ ರತ್ನ ಇನ್ನಿಲ್ಲ

WhatsApp Image 2023 02 19 at 10.51.37 AM

ರೋಹಿಣಿ ಸಿಂಧೂರಿ ವಿರುದ್ದ ರೂಪ ಆರೋಪ ಏನು ಗೊತ್ತಾ ?

  • ಆತ್ಮಹತ್ಯೆ ಮಾಡಿಕೊಂಡಿರುವ ಡಿಕೆ ರವಿ ಜೊತೆ ತುಂಬಾ ಸಾಪ್ಟ್ ನಡೆದು ಕೊಂಡ ಸಿಂಧೂರಿ ನಿರಂತರ ಚಾಟ್ ಮಾಡಿ, ಅವರನ್ನು ಬ್ಲಾಕ್‌ ಮಾಡದೇ ಇರುವ ಹಿನ್ನೆಲೆ ಏನು?
  • ಮಂಡ್ಯದಲ್ಲಿ ನಿಗದಿತ ಪ್ರಮಾಣದಲ್ಲಿ ಶೌಚಾಲಯಗಳ ನಿರ್ಮಾಣದ ಮಾಡದೇ ಅಂಕಿ – ಸಂಖ್ಯೆಗಳನ್ನು ನೀಡಿದ ರೋಹಿಣಿ ಕೇಂದ್ರದ ಪ್ರಶಸ್ತಿ ಪಡೆದು ಅಗ್ಗದ ಪ್ರಚಾರ ಪಡೆದುಕೊಂಡರು ಈ ಬಗ್ಗೆ ಸರಿಯಾಗಿ ತನಿಖೆ ಮಾಡಿಲ್ಲ
  • ಚಾಮರಾಜನಗರ ಆಕ್ಸಿಜನ್‌ ಕೊರತೆ ಸಾವಿಗೂ ರೋಹಿಣಿ ಪರೋಕ್ಷ ಕಾರಣವಾಗಿದ್ದಾರೆ ಜವ್ದಾರಿಯುತವಾಗಿ ಅವರು ನಡೆದುಕೊಂಡಿಲ್ಲ
  • ರಾಜ್ಯದ ರಾಜಕಾರಣಿಯೊಬ್ಬರ ಜೊತೆಗೆ ರಾಜೀ ಸಂಧಾನ ಬಗ್ಗೆ ಆರಂಭಿಸಿದ್ದಾರೆ
    ಸಿಗೋ ಬ್ಯಾಗ್​ ಗಳನ್ನು ಜಿಲ್ಲಾಧಿಕಾರಿ 52 ರೂಪಾಯಿ ನೀಡಿ ಖರೀದಿಸಿದ್ದರು ಎನ್ನುವ ಆರೋಪ ಕೂಡ ರೋಹಿಣಿಯವರ ಮೇಲಿದೆ.
  • ಐಪಿಎಸ್ ಅಧಿಕಾರಿ N.ಹರೀಶ್ ಅವರ ಸಾವಿನ ಬಗ್ಗೆ ಕೂಡ ಅನುಮಾನ ವ್ಯಕ್ತವಾಗಿದೆ , ಈಕೆಗೆ ಕಾದು ಕಾದು ಆತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬ ದೂರು ಇದೆ
  • ಕೆಲವು ಐಎಎಸ್ ಅಧಿಕಾರಿಗಳಿಗೆ ಒಂದಲ್ಲ, ಎರಡಲ್ಲ, ಅನೇಕರಿಗೆ ಗಂಡಸರನ್ನು ಸೆಳೆಯುವ ತನ್ನ ಫೋಟೋ ಗಳನ್ನು ( not so decent ) ಕಳಿಸಿರುವ ಹಾಗೂ ಅವರನ್ನು ಉತ್ತೇಜಿಸುವ ಕಾರ್ಯ ಮಾಡಿದ್ದಾರೆ
  • ಜಾಲಹಳ್ಳಿಯಲ್ಲಿ ದೊಡ್ಡ ಮನೆ ಒಂದು ಕಟ್ಟುತ್ತಿದ್ದಾರೆ, ಐಎಎಸ್ ಅಧಿಕಾರಿ ಸಲ್ಲಿಸಬೇಕಾದ immovable property returnsನಲ್ಲಿ ಈ ಮನೆಯ ಉಲ್ಲೇಖ ಇರದೇ ಬೇರೆಲ್ಲಾ ಲಂಗು – ಲೊಟ್ಟೆ ಪ್ರಾಪರ್ಟಿ ಬಗ್ಗೆ ವರದಿ ಕೊಟ್ಟಿದ್ದಾರೆ ಅಂಥ ರೂಪ ಆರೋಪಿಸಿದ್ದಾರೆ.
Share This Article
Leave a comment