March 31, 2023

Newsnap Kannada

The World at your finger tips!

JDS , MLA , Mandya

Why are JDS MLAs a target? MP's statement is not correct - Nikhil ಜೆಡಿಎಸ್ ಶಾಸಕರು ಟಾರ್ಗೆಟ್ ಯಾಕೆ ? ಸಂಸದೆ ಹೇಳಿಕೆ ಸರಿ ಇಲ್ಲ - ನಿಖಿಲ್

ಜೆಡಿಎಸ್ ಶಾಸಕರು ಟಾರ್ಗೆಟ್ ಯಾಕೆ ? ಸಂಸದೆ ಹೇಳಿಕೆ ಸರಿ ಇಲ್ಲ – ನಿಖಿಲ್

Spread the love

ಮಂಡ್ಯ ಜೆಡಿಎಸ್​ ಶಾಸಕರಿಗೆ ಸಂಸದೆ ಸುಮಲತಾ ಅಂಬರೀಶ್ ಆಣೆ ಪ್ರಮಾಣ ಸವಾಲು ವಿಚಾರ ದಲ್ಲಿ ಸುಮಲತಾ ಹೇಳಿಕೆ ಸರಿಯಿಲ್ಲ ಎಂದು ಜೆಡಿಎಸ್​ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನಿಖಿಲ್ ಜೆಡಿಎಸ್​ ನಾಯಕರನ್ನೇ ಸುಮಲತಾ ಅಂಬರೀಶ್ ಪದೇ ಪದೆ ಯಾಕೆ ಟಾರ್ಗೆಟ್ ಮಾಡ್ತಾರೆ ಎಂಬ ಪ್ರಶ್ನೆಗೆ ಖಾರವಾಗಿ ಪ್ರತ್ಯುತ್ತರ ನೀಡಿದರು.

ನಿಖಿಲ್ ಅವರಿಗೆ ಬೇರೆ ಏನೂ ಬಂಡವಾಳ ಇಲ್ಲ. ಮಾತನಾಡಲು ಬಂಡವಾಳ ಬೇಕಲ್ಲ. ಅವರ ಕೆಲಸ ಮಾತಾಡಬೇಕಲ್ವಾ? ಯಾವತ್ತೂ ಒಂದು ಮಾತನ್ನು ಹೇಳ್ತೀನಿ ಕೇಳಿ ಈ ರೀತಿಯ ನಡವಳಿಕೆಗಳು ಜಾಸ್ತಿ ದಿನ ನಡೆಯುವುದಿಲ್ಲ. ಅವರ ಬಗ್ಗೆ ನಾನು ಜಾಸ್ತಿ ದಿನ ಚರ್ಚೆ ಮಾಡಲ್ಲ.

ಅವರೊಬ್ಬ ಹೆಣ್ಣು ಮಗಳು. ಅಪ್ಪಿ ತಪ್ಪಿಯೂ ಅವರ ಬಗ್ಗೆ ಮಾತನಾಡಿದರೆ ದೊಡ್ಡ ತಪ್ಪು ಆಗಿಬಿಡುತ್ತದೆ. ಅದಕ್ಕೆ ಕೈಜೋಡಿಸುತ್ತೇನೆ ಎಂದರು.ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಭಕ್ತನೊಬ್ಬ ಹೃದಯಾಘಾತದಿಂದ ಸಾವು

ಇತ್ತೀಚೆಗೆ ಮಳವಳ್ಳಿಯಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ ಈ ಘಟನೆ ನಡೆದ ಒಂದು ವಾರ ಎಲ್ಲಿ ಹೋಗಿದ್ದರು. ಆ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ಕೊಡಿಸಿದ್ದೇವೆ. ಶಾಸಕ ಅನ್ನದಾನಿ ಅವರು ನಿಂತು ಹೋರಾಡಿದ್ದಾರೆ. ನಾವು
ಟ್ರೋಲ್​ಗೆಲ್ಲ ಹೆದರಿಕೊಂಡರೆ ಮನೆಯಿಂದ ಹೊರಗೆ ಬರಲು ಆಗುತ್ತಿರಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

error: Content is protected !!