ಆರ್ಥಿಕ ಅಭದ್ರತೆಗೆ ಹೆದರಿ ಬ್ರಿಟನ್ ಪ್ರಧಾನಿ ಲೀಜ್ ರಾಜೀನಾಮೆ

Team Newsnap
1 Min Read
British Prime Minister Liege resigns due to fear of economic insecurity ಆರ್ಥಿಕ ಅಭದ್ರತೆಗೆ ಹೆದರಿ ಬ್ರಿಟನ್ ಪ್ರಧಾನಿ ಲೀಜ್ ರಾಜೀನಾಮೆ

ಬ್ರಿಟನ್ ನೂತನ ಪ್ರಧಾನಿ ಲಿಜ್ ಟ್ರಸ್​ ಕೇವಲ 45 ದಿನಕ್ಕೆ ಪ್ರಧಾನಿ. ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಅಧಿಕಾರ ವಹಿಸಿಕೊಂಡು ಕೇವಲ 45 ದಿನಕ್ಕೇ ಪ್ರಧಾನಿ ಸ್ಥಾನದಿಂದ ಕೆಳಗೆ ಇಳಿದಿದ್ದಾರೆ. ಇನ್ನು ನೂತನ ಪ್ರಧಾನಿ ಆಯ್ಕೆ ಆಗುವವರೆಗೂ ಲಿಜ್ ಟ್ರಸ್​ ಅವರೇ ಪ್ರಧಾನ ಮಂತ್ರಿಗಳ ಸ್ಥಾನದಿಂದ ಮುಂದುವರಿಯಲಿದ್ದಾರೆ.ಇದನ್ನು ಓದಿ –ಜೆಡಿಎಸ್ ಶಾಸಕರು ಟಾರ್ಗೆಟ್ ಯಾಕೆ ? ಸಂಸದೆ ಹೇಳಿಕೆ ಸರಿ ಇಲ್ಲ – ನಿಖಿಲ್

ಲಿಜ್​ ಟ್ರಸ್ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಹೊಸ ಸರ್ಕಾರದ ಆರ್ಥಿಕ ಕಾರ್ಯಕ್ರಮವು ಲಂಡನ್ ಮಾರುಕಟ್ಟೆಯಲ್ಲಿ ಪ್ರಕ್ಷುಬ್ಧತೆಯನ್ನು ಉಂಟು ಮಾಡಿತ್ತು. ಇದೇ ಕಾರಣಕ್ಕೆ ಟ್ರಸ್ ಸರ್ಕಾರದ ಅನೇಕ ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಪ್ರಧಾನಿಯೇ ರಾಜೀನಾಮೆ ನೀಡಿದ್ದಾರೆ.


ಸದ್ಯ ಬ್ರಿಟನ್​​ನ ಆರ್ಥಿಕ ಪರಿಸ್ಥಿತಿ ಗಮನಿಸಿದರೆ ನಾನು ಯಾವ ಜನಾದೇಶಕ್ಕಾಗಿ ಆಯ್ಕೆಯಾಗಿದ್ದೇನೋ ಅದನ್ನು ನಿರ್ವಹಿಸಲು ಸಾಧ್ಯವಿಲ್ಲ. ಉತ್ತರಾಧಿಕಾರಿ ಆಯ್ಕೆಯಾಗುವವರೆಗೂ ನಾನು ಪ್ರಧಾನಿಯಾಗಿ ಇರುತ್ತೇನೆ ಎಂದು ಮಾಧ್ಯಮಗಳಿಗೆ ನಿರ್ಗಮಿತ ಪ್ರಧಾನಿ ಹೇಳಿದ್ದಾರೆ.

Share This Article
Leave a comment