ಆರ್​​ಸಿಬಿ(RCB) ತಂಡದ ನಾಯಕನ ಪಟ್ಟ ಫಾಪ್ ಡು ಪ್ಲೆಸಿಸ್ ಗೆ ಸಾಧ್ಯತೆ ?

Team Newsnap
1 Min Read

ಆರ್​​ಸಿಬಿ(RCB) ತಂಡ, ಮುಂದಿನ ನಾಯಕ ಸೌತ್​ ಆಫ್ರಿಕಾದ ಫಾಫ್​ ಡು ಪ್ಲೆಸಿಸ್​. ಇದೊಂದು ಸುಳಿವಿನಿಂದ ಸಿಕ್ಕ ಮಾಹಿತಿ.

ಆರ್​ಸಿಬಿ ತಂಡದ ಡೈರೆಕ್ಟರ್​​ ಮೈಕ್​ ಹೆಸನ್​ ಈ ಸುಳಿವನ್ನು ನೀಡಿದ್ದಾರೆ. ಫಾಫ್​ ಡು ಪ್ಲೆಸಿಸ್​ ಒಬ್ಬ ಅನುಭವಿ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲಿ ಪಳಗಿದ್ದಾರೆ. ಅಲ್ಲದೆ ರಾಷ್ಟ್ರೀಯ ತಂಡದ ನಾಯಕನಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂದಿದ್ದಾರೆ.

ಮೆಗಾ ಹರಾಜಿಗೂ ಮುನ್ನ ಯಾರನ್ನೆಲ್ಲಾ ಖರೀದಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಿದ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಆರ್​​ಸಿಬಿ ಪೋಸ್ಟ್​ ಮಾಡಿದೆ. ಹರಾಜಿಗೂ ಮುನ್ನವೇ ಫಾಫ್​ ಡು ಪ್ಲೆಸಿಸ್​​ರನ್ನು ಖರೀದಿಸಲು ಮ್ಯಾನೇಜ್​ಮೆಂಟ್​ ಪ್ಲಾನ್​ ​ ರೂಪಿಸಿತ್ತು. ಅದರಂತೆ ಡು ಪ್ಲೆಸಿಸ್​​ರನ್ನು ಖರೀದಿಸಿದೆ.

ಡು ಪ್ಲೆಸಿಸ್​​ರ ಆಟದ ಕೌಶಲದ ಕುರಿತು ಮಾತನಾಡಿದ್ದಾರೆ. ಐಪಿಎಲ್​ನಲ್ಲೂ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಹಾಗಾಗಿ ಅವರನ್ನ ತಂಡಕ್ಕೆ ಖರೀದಿಸಲು ಮೆಗಾ ಪ್ಲಾನ್​ ಹಾಕಿಕೊಂಡಿದ್ದ ರೆಡ್​ ಆರ್ಮಿ, ಅವರಿಗಾಗಿ ದೊಡ್ಡ ಮೊತ್ತವನ್ನೇ ತೆಗೆದಿಡಲು ನಿರ್ಧರಿಸಿತ್ತು.

RCB

ಇದೆಲ್ಲವನ್ನೂ ನೋಡುತ್ತಿದ್ದರೆ ಡು ಪ್ಲೆಸಿಸ್​ಗೆ ನಾಯಕನ ಪಟ್ಟ ಕಟ್ಟೋದು ನಿಶ್ಚಿತ ಎಂದು ಹೇಳಲಾಗ್ತಿದೆ.

ಖರೀದಿಯಲ್ಲಿ ಉಳಿದ ಆಟಗಾರರಿದ್ದರೂ ಆತನ ಖರೀದಿಗೆ ಯೋಜನೆ ಹಾಕಿದ್ದು ಯಾಕೆ ಎಂಬ ಪ್ರಶ್ನೆ ಕೂಡ ಉದ್ಭವವಾಗಿದೆ.

Share This Article
Leave a comment