ನಂದಿಬೆಟ್ಟದಲ್ಲಿ ಟ್ರಕ್ಕಿಂಗ್​​​​(Nandi Hills Trekking) ವೇಳೆ ಅವಘಡ – ಕಾಲು ಜಾರಿ ಬಿದ್ದ ಯುವಕ

Team Newsnap
1 Min Read

ನಂದಿಬೆಟ್ಟದಲ್ಲಿ ಟ್ರಕ್ಕಿಂಗ್(Nandi Hills Trekking) ​​​​ ವೇಳೆ ಅವಘಡ – ಕಾಲು ಜಾರಿ ಬಿದ್ದ ಯುವಕ

  • ದೆಹಲಿ ಮೂಲದ 19 ವಷ೯ದ ವಿದ್ಯಾಥಿ೯
  • ವಿದ್ಯಾಥಿ೯ಗೆ ಈ ಅವಘಡದಲ್ಲಿ ಕಾಲು ಮುರಿತ
  • ವಾಯುಪಡೆ ಸೇನಾ ಹೆಲಿಕ್ಯಾಪ್ಟರ್ ಮೂಲಕ ವಿದ್ಯಾಥಿ೯ ರಕ್ಷಣೆ

ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣ ನಂದಿಬೆಟ್ಟದಲ್ಲಿ ಟ್ರಕ್ಕಿಂಗ್​ಗೆ ಹೋಗಿದ್ದ ನಿಶಾಂತ್​ ಗುಲ್ಲಾ(19) ನಂದಿಗಿರಿ ಧಾಮ ಪಕ್ಕದ ಬ್ರಹ್ಮಗಿರಿ ಬೆಟ್ಟದಿಂದ ನಿಜ೯ನ ಪ್ರದೇಶದಲ್ಲಿ ಜಾರಿ ಬಿದ್ದು ಕಾಲು ಮುರಿದು ಕೊಂಡಿದ್ದಾನೆ ಎಂಬ ಮಾಹಿತಿ ದೊರೆತಿದೆ

ನಂದಿಬೆಟ್ಟದ ತಪ್ಪಲಿನಲ್ಲಿ ಜಾರಿ ಬಿದ್ದಿರುವ ಯುವಕ ಅಸ್ವಸ್ಥನಾಗಿದ್ದಾನೆ. ಈತ ಡೆಲ್ಲಿ ಮೂಲದ 19 ವಷ೯ದ ವಿದ್ಯಾಥಿ೯. ಬೆಳಿಗ್ಗೆ ಒಬ್ಬನೇ ಟ್ರಕ್ಕಿಂಗ್ ಬಂದಿದ್ದನು ಎಂದಷ್ಟೇ ಮಾಹಿತಿ ಸಿಕ್ಕಿದೆ

ಈತನನ್ನು ಸೇನಾ ಪಡೆಯ ಹೆಲಿಕ್ಯಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಚಿಕ್ಕ ಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ನೀಡಿದ್ದಾರೆ

nandiHills

ಟ್ರಕ್ಕಿಂಗ್​ ಮಾಡುತ್ತಿದ್ದ ವೇಳೆ ಜಾರಿ ಬಿದ್ದಿರುವ ನಿಶಾಂತ್​ ನಿರ್ಜನ ಪ್ರದೇಶದಲ್ಲಿ ಸಿಲುಕಿದ್ದು, ಪ್ರಾಣ ರಕ್ಷಣೆಗಾಗಿ ಮೊರೆಯಿಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ರಕ್ಷಣಾ ಕಾರ್ಯ ಆರಂಭಿಸಿದ್ದಾರೆ

ಯುವಕನ ರಕ್ಷಣೆಗಾಗಿ ಎನ್​ಡಿಆರ್​ಎಫ್​ ತಂಡ ಕೂಡ ಸ್ಥಳಕ್ಕೆ ಆಗಮಿಸಿದೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಆಂಬ್ಯುಲೆಂನ್ಸ್​ ಕೂಡ ಆಗಮಿಸಿದೆ. 

ನಂದಿಗಿರಿಧಾಮ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a comment