ನಿನ್ನೆ ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿ ನಾನೇನೂ ತಪ್ಪು ಮಾಡಿಲ್ಲ,ನಾನು ನಿರಪರಾಧಿ ಅಂತೆಲ್ಲಾ ಗೊಳೋ ಅಂತ ಕಣ್ಣೀರು ಹಾಕಿದ್ದ ಆ್ಯಂಕರ್ ಅನುಶ್ರೀಗೆ ಡ್ರಗ್ಸ್ ಜಾಲದ ನಂಟು ಬಲವಾಗಿಯೇ ಸುತ್ತಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ.
ವಿಡಿಯೋದಲ್ಲಿ ಆಕೆಯೇನೋ ತಮ್ಮ ಮನದಾಳದ ನೋವು, ಆತಂಕ,ದಿಗಿಲು ತೋಡಿಕೊಂಡಿದ್ದಾರೆ.ಸೆಪ್ಟೆಂಬರ್ 24 ನನ್ನ ಜೀವನ ಅತ್ಯಂತ ಕರಾಳ ದಿನ, ನನ್ನ ಬಗ್ಗೆ ಸುಳ್ಳು ಕತೆಗಳನ್ನು ಸೃಷ್ಟಿಸಲಾಗುತ್ತಿದೆ, ಒಂದು ವಾರದಿಂದ ಮನೆಯವರ ನೆಮ್ಮದಿಯೇ ಹಾಳಾಗಿದೆ ಅಂತ ಗೋಳಾಡಿದ್ದಾರೆ. ಆದರೆ ಆಕೆ ಹಾಗೆ ವಿಡಿಯೋದಲ್ಲಿ ಅವಲತ್ತುಕೊಂಡ ಸ್ವಲ್ಪ ಹೊತ್ತಿನ ನಂತರ ಆಕೆ ಹೇಳುತ್ತಿರುವುದೇ ಕಟ್ಟುಕತೆ ಅನ್ನುವುದನ್ನು ನಿರೂಪಿಸುವ ಒಂದು ಸ್ಫೋಟಕ ಮಾಹಿತಿ ಬಯಲಾಗಿದೆ.
ಅದು ಎಲ್ಲರನ್ನು ದಿಗ್ಮೂಢರನ್ನಾಗಿಸುವಂಥ ರಹಸ್ಯ.ಅನುಶ್ರೀ ತನಗೆ ನೊಟೀಸು ದೊರೆತ ದಿನವೇ ರಾಜ್ಯದ ಘಟಾನುಘಟಿ ನಾಯಕರು ಮತ್ತು ನಾಯಕರ ಮಕ್ಕಳಿಗೆ ಕಾಲ್ ಮಾಡಿದ್ದಾರಂತೆ.ಪ್ರಕರಣದಿಂದ ಬಚಾವ್ ಆಗಲು ಮೂವರು ಪ್ರಭಾವಿಗಳಿಗೆ ಅನುಶ್ರೀ ಕಾಲ್ ಮಾಡಿದ್ದು, ಸಿಸಿಬಿ ತನಿಖೆಯಲ್ಲಿ ಬಹಿರಂಗಗೊಂಡಿದೆ. ಅಂದಹಾಗೆ ಆ ಮೂವರು ಪ್ರಭಾವಿಗಳು ಯಾರು ಅನ್ನುವುದು ಕುತೂಹಲಕಾರಿ ಮತ್ತು ಅಷ್ಟೇ ಆಘಾತಕಾರಿ ಸಂಗತಿ.
ಅವತ್ತು ಅನುಶ್ರೀ ಕಾಲ್ ಮಾಡಿದ್ದ ಪ್ರಭಾವಿಗಳಲ್ಲಿ ಮೊದಲನೆಯವರು ಒಬ್ಬ ಮಾಜಿ ಮುಖ್ಯಮಂತ್ರಿ! ಅನುಶ್ರೀ ಆ ನಾಯಕರೊಂದಿಗೆ ಹಲವಾರು ಬಾರಿ ಮಾತನಾಡಿದ್ದಾರಂತೆ.
ಆಕೆ ಎರಡನೇ ಕಾಲ್ ಮಾಡಿದ್ದು ಮಾಜಿ ಮುಖ್ಯಮಂತ್ರಿಯೊಬ್ಬರ ಮಗನಿಗೆ! ಅವರಿಗೆ ಕಾಲ್ ಮಾಡಿದ ಅನುಶ್ರೀ ಸುಮಾರು ಹೊತ್ತು ಮಾತನಾಡಿರುವ ವಿಷಯ ಬಯಲಾಗಿದೆ.
ಅನುಶ್ರೀಯಂದ ಕರೆ ಸ್ವೀಕರಿಸಿದ ಮೂರನೇ ಪ್ರಭಾವಿ ನಾಯಕ ಕರಾವಳಿ ಭಾಗದ ಬಿಜೆಪಿ ಶಾಸಕರಾಗಿದ್ದಾರೆ!. ಈ ಎಲ್ಲ ರೋಚಕ ಸಂಗತಿಗಳು ಅನುಶ್ರೀ ಕಾಲ್ ಡಿಟೇಲ್ಸ್ ಚೆಕ್ ಮಾಡಿದಾಗ ಬಯಲಾಗಿವೆ.
ಅನುಶ್ರೀ ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ಕಣ್ಣೀರಿಟ್ಟ ದಿನವೇ ಆಕೆ ಅತ್ಯಂತ ಪ್ರಭಾವಿ ನಾಯಕರಿಗೆ ಫೋನ್ ಮಾಡಿರುವ ವಿಚಾರ ಗೊತ್ತಾಗಿ ಪ್ರಕರಣ ಒಂದು ರೋಚಕ ತಿರುವು ಪಡೆದುಕೊಂಡಿದೆ. ಈ ತಿರುವು ಆಕೆಯನ್ನು ಎಲ್ಲಗೆ ಮುಟ್ಟಿಸುತ್ತದೆಯೋ ಗೊತ್ತಿಲ್ಲ ಆದರೆ,ಆ ನಾಯಕರು ಮಾತ್ರ ಖಂಡಿತವಾಗಿಯೂ ಸಣ್ಣಗೆ ಬೆವರುತ್ತಾ ಆತಂಕಕ್ಕೊಳಗಾಗಿರುತ್ತಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ