March 29, 2023

Newsnap Kannada

The World at your finger tips!

election , cast , politics

Where is it that Brahmins should not be CM? pejawarashri ಬ್ರಾಹ್ಮಣರು ಸಿಎಂ ಆಗಬಾರದು ಅಂತ ಎಲ್ಲಿದೆ ? ಪೇಜಾವರ ಶ್ರೀ

ಬ್ರಾಹ್ಮಣರು ಸಿಎಂ ಆಗಬಾರದು ಅಂತ ಎಲ್ಲಿದೆ ? ಪೇಜಾವರ ಶ್ರೀ

Spread the love

ಹಿಂದಿನಿಂದಲೂ ಬ್ರಾಹ್ಮಣರ ವಿರುದ್ಧದ ಹೇಳಿಕೆಗಳ ಪ್ರತಿ ಚುನಾವಣೆ ಬಂದಾಗ ಇದು ಹೆಚ್ಚು ಕಾಣತ್ತೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ

ಮಂಡ್ಯದ ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹೆಚ್ ಡಿಕೆ ಬ್ರಾಹ್ಮಣರ ಬಗ್ಗೆ ಆಡಿರುವ ಮಾತುಗಳ ಕುರಿತು ಹೇಳಿಕೆ ನೀಡಿ ಬ್ರಾಹ್ಮಣರು ಯಾರು ಧ್ವನಿ ಎತ್ತಿ ಮಾತನಾಡುವವರು ಇಲ್ಲಾ, ಸಂಖ್ಯಾ ಬಲ ಇಲ್ಲಾ, ಅಲ್ಪ ಸಂಖ್ಯಾತರು ಆಗಿದ್ದಾರೆ ಏನು ಮಾತನಾಡಿದರೂ ನಡೆಯತ್ತೆ ಎಂದು ಮಾತನಾಡ್ತಾರೆ. ರಾಜ್ಯದಲ್ಲಿ ಬ್ರಾಹ್ಮಣ ಶಾಸಕರು ಎಷ್ಟು ಜನ ಇದ್ದಾರೆ.? ಎಷ್ಟು ಮಂದಿಗೆ ಟಿಕೆಟ್ ಕೊಟ್ಟಿದ್ದಾರೆ..? ಎಂದು ಕಿಡಿಕಾರಿದರು.

ಮಾತನಾಡುವವರು ಏನು ಬೇಕಾದರೂ ಮಾತನಾಡುತ್ತಾರೆ. ಹಿನ್ನೆಲೆ ಅಥವಾ ಪುರಾವೆ ಇಟ್ಟುಕೊಂಡು ಮಾತನಾಡಬೇಕು. ಒಂದು ವೇಳೆ ಬ್ರಾಹ್ಮಣರು ಮುಖ್ಯಮಂತ್ರಿ ಆಗೋದಾದರೆ ಆಗಲಿ. ಯಾಕೆ ಬ್ರಾಹ್ಮಣರು ಸಿಎಂ ಆಗಬಾರದು..? ಅವರು ಭಾರತದ ಪ್ರಜೆಗಳಲ್ಲವೆ..? ಎಂದರು.ಹಿರಿಯ ಕಲಾವಿದ ಬಿಕೆ ಎಸ್ ವರ್ಮ ನಿಧನ

ಬ್ರಾಹ್ಮಣರಿಂದಲೇ ಗಾಂಧಿ ಹತ್ಯೆ ಎಂಬ ವಿಚಾರವಾಗಿ ಮಾತನಾಡಿದಂತ ಅವರು, ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮಾಜವನ್ನು ದೂಷಿಸುವುದಾದರೆ ಇತರೆ ಸಮಾಜದಲ್ಲಿ ನಡೆದ ವಿಚಾರವನ್ನು ಸಾಮೂಹಿಕರಣ ಮಾಡ್ತಿಲ್ಲ..? ಬ್ರಾಹ್ಮಣ ಸಮಾಜವನ್ನು ದೂರು ಬೇಕು ಎಂದು ಯಾವುದಾದರೂ ಒಂದು ನೆಪ ಮಾಡಿ ದೂರ್ತಾರೆ. ಪ್ರಜಾಪ್ರಭುತ್ವ ಸಮಾಜದಲ್ಲಿ ಯಾರಿಗೂ ಅನ್ಯಾಯವಾಗಬಾರದು. ಇವತ್ತು ಯಾವುದೋ ಸಮಾಜ, ಧರ್ಮದ ಪರವಾಗಿ ಸರ್ಕಾರ ನಡೆಯೋದಾದ್ರೆ. ಅನ್ಯಾಯವಾದಾಗ ಒಂದು ಧರ್ಮದ ವಿರುದ್ದ ಮತ್ತೊಂದು ಧರ್ಮ ಪುಟಿದೇಳಬೇಕು. ಪ್ರಜಾಪ್ರಭುತ್ವ ಸಮಾಜದಲ್ಲಿ ಈ ರೀತಿ ಒಂದು ಧರ್ಮವನ್ನ ದೂಷಿಸುವುದು ಸರಿಯಲ್ಲ. ಯಾವ ಧರ್ಮದವ್ರಿಗೂ ಅನ್ಯಾಯ ಆಗಬಾರದು ಎಂದು ಹೇಳಿದರು.

error: Content is protected !!