ಹಳೇ ವಾಹನ ಗುಜರಿಗೆ ಹಾಕಿದರೆ ಲಾಭ ಏನಿದೆ ? ಪ್ರಧಾನಿ ವಿವರಣೆ

Team Newsnap
1 Min Read

ಹಳೆ ವಾಹನ ಗುಜರಿ ನೀತಿಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಚಾಲನೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಹಳೆಯ ವಾಹನ ಮಾಲೀಕರು ಸ್ವಯಂಪ್ರೇರಿತವಾಗಿ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಅವಕಾಶ ಜನರಿಗೆ ಲಭಿಸಲಿದೆ.

ಸ್ವಪ್ರೇರಣೆಯಿಂದ ಹಳೆ ವಾಹನ ‌ಗುಜರಿಗೆ ಹಾಕಿದರೆ, ಹೊಸ ವಾಹನ ಖರೀದಿ ವೇಳೆ ನೋಂದಣಿ ಶುಲ್ಕ ಕಟ್ಟಬೇಕಿಲ್ಲ ಹಾಗೂ ರಸ್ತೆ ತೆರಿಗೆಯಿಂದಲೂ ವಿನಾಯಿತಿ ಸಿಗಲಿದೆ ಎಂದು ಹೇಳಿದರು.

ಪರಿಸರ ಸ್ನೇಹಿ ಸುಸ್ಥಿರ ಆರ್ಥಿಕತೆಯನ್ನು ಬೆಳೆಸುವ ಆಟೋ ಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡುವ ಯೋಜನೆ ಇದಾಗಿದೆ.

ಗುಜರಿ ನೀತಿಯಡಿ ಜನರು ತಮ್ಮಲ್ಲಿರುವ ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಸರ್ಕಾರದಿಂದ ಪ್ರಮಾಣಪತ್ರ ಪಡೆಯಬಹುದು. ನಂತರ ಅವರು ಹೊಸ ವಾಹನ ಖರೀದಿಸುವಾಗ ನೋಂದಣಿ ಶುಲ್ಕ ಪಾವತಿಸಬೇಕಿಲ್ಲ. ಜೊತೆಗೆ ರಸ್ತೆ ತೆರಿಗೆಯಲ್ಲೂ ರಿಯಾಯ್ತಿ ದೊರೆಯುತ್ತದೆ.

Share This Article
Leave a comment