September 21, 2021

Newsnap Kannada

The World at your finger tips!

ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಪ್ರಕರಣ : ಬೆಚ್ಚಿ ಬೀಳಿಸುವ ಕಾರಣಗಳು !

Spread the love

ಶ್ರೀಮಂತರ ವಿರುದ್ಧದ ಸಿಟ್ಟಿನಿಂದ ಕಾರಿಗೆ ಬೆಂಕಿ ಇಟ್ಟಿದ್ದೇವೆ ಎಂದು ಆರೋಪಿಗಳು ಪೊಲೀಸ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರಿಗೆ ಸೇರಿರುವ ಎರಡು ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿತರಾದ ಗಾರ್ವೆಭಾವಿ ಪಾಳ್ಯದ ಶ್ರೀಧರ್, ಸಾಗರ್ ಹಾಗೂ ನವೀನ್
ಹೇಳಿಕೆಗಳು ಬೆಚ್ಚಿ ಬೀಳಿಸುತ್ತಿವೆ.

ನಾವು ಇದೇ ಊರಿನಲ್ಲಿ ವಾಸಿಸುತ್ತಿದ್ದೆವು, ಬಡವರು ಬಡವರಾಗಿಯೇ ಇದ್ದಾರೆ, ದೊಡ್ಡವರು ಇನ್ನೂ ದೊಡ್ಡವರಾಗುತ್ತಿ ದ್ದಾರೆ. ಶ್ರೀಮಂತರು ಐಷಾರಾಮಿ ಕಾರು ಕೊಂಡುಕೊಳ್ಳುತ್ತಿದ್ದಾರೆ . ಶ್ರೀಮಂತರು ಎಂಬ ಕಾರಣಕ್ಕೆ ನಾವು ಬೆಂಕಿ ಹಚ್ಚಿದೆವು ಎಂದು ಆರೋಪಿಗಳು ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾರೆ.

ನೇಪಾಳ ಮೂಲದ ಸಾಗರ್ ಮತ್ತು ಸ್ಥಳೀಯರಾದ ಶ್ರೀಧರ್ ಗೌಡ ಮತ್ತು ನವೀನ್‍ ಪೊಲೀಸರು ಬಂಧಿಸಿದ್ದಾರೆ. ವೇಳೆ ಲಾಕ್ ಡೌನ್ ನಂತರ ಈ ಮೂವರು ಕೆಲಸವಿಲ್ಲದೇ ತೀವ್ರ ಪರದಾಡಿದ್ದರು. ಆದರೆ ಎಲ್ಲೂ ಕೂಡ ಕೆಲಸ ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ಶಾಸಕ ಸತೀಶ್ ರೆಡ್ಡಿ ಬಳಿ ಸಹಾಯ ಕೇಳೋಕೆ ಅಂತಾ ಬಂದಿದ್ವಿ. ಮೂರು ಬಾರಿ ಶಾಸಕರನ್ನು ಭೇಟಿ ಮಾಡೋಕೆ ಪ್ರಯತ್ನ ಮಾಡಿದರು ಕೂಡ ಎಂಎಲ್‍ಎ ಮನೆ ಸೆಕ್ಯೂರಿಟಿ ಗಾರ್ಡ್ ಒಳಗೆ ಬಿಟ್ಟಿರಲಿಲ್ಲ.

ಇಡೀ ದಿನ ಕಾದರು ಕೂಡ ಒಮ್ಮೆ ಭೇಟಿಗೂ ಅವಕಾಶ ಕೊಟ್ಟಿರಲಿಲ್ವಂತೆ. ಹೊಟ್ಟೆಗೆ ಊಟವಿಲ್ಲದೇ ಇಡೀ ದಿನ ಕಾದರೂ ಒಮ್ಮೆಯೂ ಭೇಟಿಗೆ ಅವಕಾಶ ಕೊಟ್ಟಿರಲಿಲ್ಲ. ಇದರಿಂದ ಬೇಸರಗೊಂಡ ಮೂವರು ಆರೋಪಿಗಳು, ಕಂಠಪೂರ್ತಿ ಕುಡಿದು ಶ್ರೀಮಂತರು ಶ್ರೀಮಂತರಾಗೇ ಇರ್ತಾರೆ ನಮ್ಮಂಥ ಬಡವರು ಬಡವರಾಗೇ ಸಾಯಬೇಕು ಅಂತಾ ಹತಾಶೆಗೊಂಡಿದ್ರು. ಇದೇ ಮತ್ತಿನಲ್ಲಿ ಶಾಸಕರ ಮನೆ ಬಳಿ ಬಂದು ಬೈಕಿನಲ್ಲಿ ಪೆಟ್ರೋಲ್ ಕಳವು ಮಾಡಿ ಮನೆ ಬಳಿಯಿದ್ದ ಎರಡು ಕಾರುಗಳಿಗೆ ಬೆಂಕಿ ಹಾಕಿ ಎಸ್ಕೇಪ್ ಆಗಿದ್ದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾರೆ.

error: Content is protected !!