ಎಲ್ರೂ ರಾಜಕೀಯಕ್ಕೆ ಹೋದರೆ ಮನೆ ನೋಡ್ಕೊಳ್ಳೋರು ಯಾರು? ಪ್ರೀತಂ ಗೌಡ ಪ್ರಶ್ನೆ.

Team Newsnap
1 Min Read

ದೇವೇಗೌಡರ ಕುಟುಂಬ ರಾಜಕಾರಣದಲ್ಲಿ ಸಂಪೂಣ೯ ಮುಳುಗಿ ಹೋದರೆ ಹೊಳೆ ನರಸೀಪುರದ ಮನೆ ಖಾಲಿಯಾಗುತ್ತದೆ. ಹೀಗಾಗಿ ಸೂರಜ್ ರೇವಣ್ಣ ಅವರನ್ನು ಮನೆ ಕಾಯಲು ಬಿಡಿ ಎಂದು ಮತದಾರರಲ್ಲಿ ಶಾಸಕ ಪ್ರೀತಂ ಗೌಡ ಮನವಿ ಮಾಡಿದರು

ಚನ್ನರಾಯಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಪ್ರೀತಮ್ ಗೌಡ ಮಾತನಾಡಿ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು

ಹಾಸನ ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬ ರಾಜಕಾರಣ ಮಿತಿಮೀರಿದೆ. ದೇವೇಗೌಡರನ್ನು ತುಮಕೂರಿಗೆ ಕಳುಹಿಸಿದ್ದರು. ಹೊಳೆನರಸೀಪುರದಲ್ಲಿ ಮಗ-ಸೊಸೆ, ಇಬ್ಬರು ಮಕ್ಕಳು ಸೇರಿ ನಮ್ಮ ಗೌಡರನ್ನು ಸೋಲಿಸಿಬಿಟ್ಟರು. ಹೀಗಾಗಿ ಅವರನ್ನು ರಾಜ್ಯಸಭೆಗೆ ಕಳಿಸಲಾಯಿತು. ಮತ್ತೆ ಇನ್ನೊಬ್ಬರನ್ನು ಹಾಸನದ ಲೋಕಸಭೆಗೆ ಕಳುಹಿಸಲಾಯಿತು. ಇದೀಗ ಮತ್ತೊಬ್ಬ ಮೊಮ್ಮಗ ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ಒಂದೇ ಮನೆಯವರು ಎಲ್ಲಾ ಕಡೆ ಇರಬೇಕು ಅಂತ ಹೇಳಿ ದೊಡ್ಡಗೌಡರು ತೀರ್ಮಾನ ಮಾಡಿದಂತಿದೆ ಎಂದು ಕುಟುಕಿದ್ದಾರೆ.

ವಿಧಾನ ಪರಿಷತ್ ಸ್ಥಾನ ಖಾಲಿ ಇದೆ. ಆದ್ದರಿಂದ ಸೂರಜ್ ಅವರನ್ನು ವಿಧಾನ ಪರಿಷತ್ ಅಭ್ಯರ್ಥಿಯನ್ನಾಗಿ ಮಾಡಿರಬೇಕು ಎಂದು ಜೆಡಿಎಸ್ ಕಾರ್ಯಕರ್ತರು ನನ್ನ ಬಳಿ ಹೇಳಿಕೊಂಡಿದ್ದಾರೆ. ʼಎಲ್ಲರನ್ನೂ ನಾಲ್ಕು ಮನೆಗೂ ಕಳುಹಿಸಿದ್ದೇವೆ. ಹಾಗಾದರೆ ಇವರು ಇರುವ ಹೊಳೆನರಸೀಪುರ ಮನೆ ಖಾಲಿಯಾಗಿಬಿಡುತ್ತದೆ. ಮನೆ ನೋಡ್ಕೊಳ್ಳೋಕೆ ಯಾರಾದರೂ ಒಬ್ಬ ಮಗ ಇರಲೇಬೇಕಲ್ಲವೇʼ ಅಂತ ನಾನು ಪ್ರಶ್ನಿಸಿದ್ದೆ ಎಂದು ವ್ಯಂಗ್ಯವಾಡಿದ್ದಾರೆ.

ದೆಹಲಿಗೆ ತಾತ ಹೋಗಿದ್ದಾರೆ. ಲೋಕಸಭೆಗೆ ಒಬ್ಬ ಮೊಮ್ಮಗ ದೆಹಲಿಗೆ ಹೋಗಿದ್ದಾರೆ. ಇನ್ನು ಪಾಪ ರೇವಣ್ಣ ಅವರು ವಿಧಾನಸಭೆಗೆ ಹೋಗಲೇಬೇಕು. ಭವಾನಿ ಅಕ್ಕ ಜಿಲ್ಲಾ ಪಂಚಾಯಿತಿ ಗೆದ್ದಿದ್ದರೂ ಹಾಸನಕ್ಕೆ ಬರ್ತಾ ಇರಬೇಕು. ಮನೆ ಅನಾಥ ಆಗಬಾರದು. ಆದ ಕಾರಣ ಮನೆಗೆ ಒಬ್ಬ ಮಗ ಇರಲಿ. ನಿಮ್ಮ ಸೂರಜ್ ರೇವಣ್ಣ ಅವರನ್ನು ಮನೆ ಮಗನಾಗಿ ಇಟ್ಟುಕೊಳ್ಳಲಿ. ಆದ್ದರಿಂದ ವಿಶ್ವನಾಥ್‌ ಅವರಿಗೆ ವೋಟು ಹಾಕಿ ಅಂತ ಜೆಡಿಎಸ್ ಕಾರ್ಯಕರ್ತರಲ್ಲಿ ಕೇಳಿಕೊಂಡಿದ್ದೇನೆ ಎಂದು ಹೇಳಿದರು.

Share This Article
Leave a comment