ಮಂಡ್ಯ ಜಿಲ್ಲೆಯಲ್ಲಿ ಜನವರಿ ಅಂತ್ಯದವರೆಗೂ ವೀಕೆಂಡ್,ನೈಟ್ ಕರ್ಫ್ಯೂ ವಿಸ್ತರಣೆ- ಡಿಸಿ

Team Newsnap
1 Min Read

ದಿನೇ ದಿನೇ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಜನವರಿ ಅಂತ್ಯದವರೆಗೂ 144 ನಿಷೇಧಾಜ್ಞೆ ಹಾಗೂ ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಎಸ್ ಅಶ್ವತಿ ಆದೇಶ ಮಾಡಿದ್ದಾರೆ.

ಜನರ ವಿರೋಧದ ನಡುವೆಯೂ ಜನರವರೆ 31ರವರೆಗೆ ಟಫ್ ರೂಲ್ಸ್ ಮುಂದುವರಿಕೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಕಠಿಣ ನಿಬಂಧನೆಗಳು ಯಾವವು? :

ಮದುವೆ, ನಿಶ್ಚಿತಾರ್ಥ, ಬೀಗರ ಔತಣಕ್ಕೆ 100 ಜನರಿಗೆ ಮಾತ್ರ ಅವಕಾಶ.

ಅಂತ್ಯ ಸಂಸ್ಕಾರ, ಹಾಗೂ ತಿಥಿ ಕಾರ್ಯಕ್ಕೆ ಕೇವಲ 30 ಜನರಿಗೆ ಅವಕಾಶ.

ದೇವರ ದರ್ಶನಕ್ಕೆ ಒಂದು ಸಮಯಕ್ಕೆ 50 ಜನರಿಗೆ ಅವಕಾಶ.

ವಿಶೇಷ ದಿನ, ಸಾರ್ವತ್ರಿಕ ರಜಾ ದಿನಗಳಲ್ಲಿ ದೇವಾಲಯ, ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ.

ಜಾತ್ರೆ, ಧನದ ಜಾತ್ರೆ, ಗ್ರಾಮ ದೇವತೆ ಹಬ್ಬ, ಕೊಂಡೊತ್ಸವ, ಹಾಗೂ ಸಾಮೂಹಿಕ ಪ್ರಾರ್ಥನೆಗೂ ಅವಕಾಶ ಇಲ್ಲ.

ಬೃಹತ್ ರ್ಯಾಲಿ, ಧರಣಿ, ಪ್ರತಿಭಟನೆಗೆ ನಿಷೇಧ.

ಪಬ್, ಬಾರ್ & ರೆಸ್ಟೋರೆಂಟ್,ಹೋಟೆಲ್, ಚಿತ್ರಮಂದಿರ, ಸಭಾಂಗಣ, ರಂಗಮಂದಿರ, ಈಜುಕೊಳ,ಹಾಗೂ ಜಿಮ್ ಕೇಂದ್ರಕ್ಕೆ ಶೇ50 ರಷ್ಟು ಅವಕಾಶ

ಸ್ಪೋರ್ಟ್ಸ್, ಕ್ರೀಡಾಂಗಣ ಹಾಗೂ ಕಾಂಪ್ಲೆಕ್ಸ್ ಗೆ 50% ಅವಕಾಶ.

ನೈಟ್ ಕರ್ಫ್ಯೂ ವೇಳೆ ರಾತ್ರಿ 10 ರಿಂದ ಬೆಳಿಗ್ಗೆ 5ರ ವರೆಗೆ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ.
ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಿಗ್ಗೆ 5 ರ ವರಗೆ ವೀಕೆಂಡ್ ಕರ್ಫ್ಯೂ ಜಾರಿ.

ವೀಕೆಂಡ್ ಕರ್ಫ್ಯೂ ವೇಳೆ ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲಾ ಸೇವೆಗೆ ನಿರ್ಬಂಧ.

ಪ್ರವಾಸಿತಾಣಕ್ಕೆ ಪ್ರವಾಸಿಗರ ನಿಷೇಧ.

ಆಹಾರ, ದಿನಸಿ ಅಂಗಡಿ,ಹಣ್ಣು ಮತ್ತು ತರಕಾರಿ ಅಂಗಡಿ,ಮೀನು ಮಾಂಸದ ಅಂಗಡಿ, ಹಾಲಿನ ಬೂತ್,ಬೀದಿ ಬೀದಿ ವ್ಯಾಪಾರಕ್ಕೆ ಮಾತ್ರ ಅವಕಾಶ

ಹೋಟೆಲ್- ರೆಸ್ಟೊರೆಂಟ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ..
ಉಳಿದಂತೆ ಎಲ್ಲಾ ಸೇವೆಗಳಿಗೆ ನಿರ್ಬಂಧ.

ಕೊರೊನಾ ನಿಯಮದ ಆದೇಶ ಉಲ್ಲಂಘಿಸಿದ್ರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವತಿ ನೀಡಿದ್ದಾರೆ.

Share This Article
Leave a comment