January 9, 2025

Newsnap Kannada

The World at your finger tips!

WhatsApp Image 2022 01 29 at 1.19.11 PM

ನನ್ನ -ಸೌಂದರ್ಯ ನಡುವೆ ಅನ್ಯೋನ್ಯತೆ ಇತ್ತು: ಗಲಾಟೆ ಇರಲಿಲ್ಲ : ನೀರಜ್

Spread the love

ನನ್ನ ಹೆಂಡತಿ ಸೌಂದರ್ಯ ನಡುವೆ ಯಾವುದೇ ಗಲಾಟೆ ಇರಲಿಲ್ಲ. ನಾವಿಬ್ಬರೂ. ತುಂಬಾ ಅನ್ಯೋನ್ಯವಾಗಿದ್ದೆವು.
ಎಂದು ನಿನ್ನೆ ಆತ್ಮಹತ್ಯೆ ಮಾಡಿಕೊಂಡ ಯಡಿಯೂರಪ್ಪನ ಮೊಮ್ಮಗಳು ಡಾ. ಸೌಂದರ್ಯಳ ಪತಿ ಡಾ. ನೀರಜ್ ಪೋಲೀಸರ ಮುಂದೆ ಇಂದು ಹೇಳಿಕೆ ನೀಡಿದ್ದಾರೆ.

ಸೌಂದರ್ಯಳನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ. ಸಾಕಷ್ಟು ವರ್ಷಗಳಿಂದ ಸೌಂದರ್ಯ ಕುಟುಂಬ ಹಾಗೂ ನಮ್ಮ ಕುಟುಂಬ ಪರಿಚಯ ಇತ್ತು. ನನ್ನ ದೊಡ್ಡಪ್ಪನ ಮೂಲಕ ಸೌಂದರ್ಯ ಕುಟುಂಬ ಆತ್ಮೀಯವಾಗಿತ್ತು. ಮದುವೆಗೂ ಮುನ್ನವೇ ನನಗೆ ಸೌಂದರ್ಯ ಪರಿಚಯ ಇತ್ತು. ಇಬ್ಬರು ಕೂಡ ಒಳ್ಳೆಯ ಸ್ನೇಹಿತರಾಗಿದ್ದೆವು ಎಂದು ಡಾ ನೀರಜ್ ಹೇಳಿದ್ದಾರೆ.

2018ರಲ್ಲಿ ಮದುವೆ ಆಗಿತ್ತು. ಹೆಚ್ಚಿನ ಸಂದರ್ಭದಲ್ಲಿ ಸೌಂದರ್ಯ ತಾಯಿಯ ಮನೆಯಲ್ಲಿ ಇರುತ್ತಿದ್ದಳು. ಬಳಿಕ ಆಕೆ ಬೌರಿಂಗ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದಳು. ನಾನು ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾ ಇದ್ದೆ. ಇಬ್ಬರಿಗೂ ಹತ್ತಿರವಾಗಲಿ ಅಂತ ಮೌಂಟ್ ಕಾರ್ಮೆಲ್ ಬಳಿ ಮನೆ ಮಾಡಿಕೊಂಡೆವು.

ಸೌಂದರ್ಯ ಆಸೆಯಂತೆ ಕಳೆದ ತಿಂಗಳು ಕಿಯಾ ಕಾರನ್ನೂ ಗಿಪ್ಟ್ ಮಾಡಿದ್ದೆ. ಕಳೆದ ತಿಂಗಳು ನಾನು ದುಬೈಗೆ ಹೋದಾಗಲೂ ಸಂತೋಷವಾಗಿದ್ದಳು. ಮನೆಯಲ್ಲಿ ಜಗಳ ಯಾವುದೂ ನಡೆದಿರಲಿಲ್ಲ. ಆದರೆ ನಾನು ಆಸ್ಪತ್ರೆಗೆ ಹೋದಾಗ ಈ ಘಟನೆ ನಡೆದಿದೆ.

ನನಗೆ ವಿಚಾರ ಗೊತ್ತಾದ ಬಳಿಕ ಮನೆಗೆ ಹೋದೆ. ಬಾಗಿಲು ತೆರೆಯದೇ ಇದ್ದಾಗ ಬಾಲ್ಕನಿ ಮೂಲಕ ಒಳಗೆ ಹೋಗಿ ಬಾಗಿಲು ತೆರೆದೆವು. ಈ ವೇಳೆ ಸೌಂದರ್ಯ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಳು. ಕೆಳಗೆ ಇಳಿಸಿದಾಗ ಉಸಿರಾಟ ಇನ್ನೂ ಇತ್ತು. ನಾನು ಬದುಕಿಸುವ ಪ್ರಯತ್ನ ಮಾಡಿದೆ.

ಕೊನೆಗೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷೆ ಮಾಡಿದರು. ಐಸಿಯೂ ಅಲ್ಲಿ ಪ್ರಯತ್ನ ಮಾಡಿದ್ರು. ಆದರೆ ಅಷ್ಟರಲ್ಲಿ ಸೌಂದರ್ಯ ಪ್ರಾಣ ಹೋಗಿದೆ ಎಂದು ಪೊಲೀಸರ ಮುಂದೆ ನೀರಜ್ ವಿವರವಾದ ಹೇಳಿಕೆ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!