ಜ. 31 ರಿಂದ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ರದ್ದು : ಕೊವಿಡ್ ನಿರ್ಬಂಧ ಸಡಿಲ – ಹೊಸ ಮಾರ್ಗಸೂಚಿ

Team Newsnap
1 Min Read

ರಾಜ್ಯದಲ್ಲಿ ಕೋವಿಡ್​ ಅಬ್ಬರ ತಗ್ಗಿಸಲು ವಿಧಿಸಲಾಗಿದ್ದ ರಾತ್ರಿ ಕರ್ಫ್ಯೂವನ್ನು ತೆರವು ಮಾಡಲಾಗಿದೆ . ಬೆಂಗಳೂರಿನಲ್ಲಿ
ಶಾಲೆಗಳು ಆರಂಭಕ್ಕೂ ಅನುಮತಿ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್​. ಅಶೋಕ್​ ತಿಳಿಸಿದರು.

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್​ ತಾಂತ್ರಿಕ ಸಲಹಾ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಂದಾಯ ಸಚಿವ ಆರ್​. ಅಶೋಕ್​, ಬೆಂಗಳೂರಿನಲ್ಲಿ ಶಾಲೆ ಆರಂಭಕ್ಕೆ ತಜ್ಞರು ಗ್ರೀನ್​ ಸಿಗ್ನಲ್​ ನೀಡಿದ್ದಾರೆ ಎಂದರು.

ಹೊಸ ಮಾರ್ಗಸೂಚಿಗಳ ಬಿಡುಗಡೆ :

ಬೆಂಗಳೂರಿನಲ್ಲಿ ಶಾಲೆ ಆರಂಭಕ್ಕೆ ಗ್ರೀನ್​ ಸಿಗ್ನಲ್​

ಜನವರಿ 31ರಿಂದ ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಇರಲ್ಲ

ಪಬ್, ರೆಸ್ಟೋರೆಂಟ್‌, ಹೋಟೆಲ್‌ ಓಪನ್‌ ಇರುತ್ತೆ

ಚಿತ್ರ ಮಂದಿರ, ಮಲ್ಟಿಪ್ಲೆಕ್ಸ್‌ಗಳಲ್ಲಿ 50% ಸಾಮರ್ಥ್ಯ ಮುಂದುವರಿಕೆ

50% ಸಾಮರ್ಥ್ಯದೊಂದಿಗೆ ಜಿಮ್, ಈಜುಕೊಳ ಓಪನ್​ಗೆ ಅವಕಾಶ

ಮದುವೆ ಕಾರ್ಯಕ್ರಮಗಳಲ್ಲಿ ಒಳಾಂಗಣದಲ್ಲಿ  200, ಹೊರಾಂಗಣದಲ್ಲಿ 300 ಜನರಿಗೆ ಅವಕಾಶ

ದೇವಸ್ಥಾನಗಳಲ್ಲಿ ಅರ್ಚನೆ, ಮಂಗಳಾರತಿಗೆ ಅವಕಾಶ

ದೇವಸ್ಥಾನಗಳಲ್ಲಿ 50 ಜನರಿಗೆ ಮಾತ್ರ ಅವಕಾಶ

ಸರ್ಕಾರಿ ಕಚೇರಿಗಳಲ್ಲಿ ಶೇ. 100 ರಷ್ಟು ಹಾಜರಾತಿಗೆ ಅನುಮತಿ

ಸಾರಿಗೆ ವ್ಯವಸ್ಥೆಯಲ್ಲಿನ ಈಗಿರುವ ನಿಯಮಗಳೇ ಮುಂದುವರಿಕೆ

Share This Article
Leave a comment