June 7, 2023

Newsnap Kannada

The World at your finger tips!

virat 1

ವಿರಾಟ್ ಗೋಲ್ಡನ್ ಡಕ್ – ಮುಂದುವರೆದ ಕಳಪೆ ಆಟ

Spread the love

ಲಖನೌ ವಿರುದ್ಧದ ಪಂದ್ಯದಲ್ಲೂ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್​ ತೋರಿ ಇಂದಿನ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ಗೋಲ್ಡನ್ ಡಕ್ ಆಗಿ ಪೆವಿಲಿಯನ್​ ಸೇರಿದ್ದಾರೆ.

ಈ ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಬಾರಿ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದಾರೆ.

2008ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ, 2014ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ, 2017ರಲ್ಲಿ ಕೆಕೆಆರ್ ವಿರುದ್ಧ ಹಾಗೂ ಇದೀಗ ಲಖನೌ ವಿರುದ್ಧ ಕೊಹ್ಲಿ ಎದುರಾಳಿಯ ಮೊದಲ ಎಸೆತದಲ್ಲೇ ಔಟಾಗಿ ಹೊರಹೋಗಿದ್ದಾರೆ.

ಇನ್ನೊಂದು ವಿಶೇಷ ಅಂದರೆ 5 ವರ್ಷಗಳ ನಂತರ ಕೊಹ್ಲಿ ‘ಗೋಲ್ಡನ್ ಡಕ್’ಗೆ ಬಲಿಯಾಗಿದ್ದಾರೆ. ಇದಲ್ಲದೇ ಕೊಹ್ಲಿ ಐಪಿಎಲ್ ನಲ್ಲಿ ರನ್ ಗಳಿಸದೇ ಔಟಾಗಿರುವುದು 7ನೇ ಬಾರಿಯಾಗಿದೆ. ಲಖನೌ ತಂಡದ ದುಷ್ಮಂತ್ ಚಮೀರಾ ಮೊದಲ ಓವರ್ ಎಸೆಯಲು ಬಂದಿದ್ದರು. ಐದನೇ ಬಾಲ್​ನಲ್ಲಿ ಅನುಜ್ ರಾವತ್ ವಿಕೆಟ್ ಪಡೆದು, ಆರನೇ ಬಾಲ್​ನಲ್ಲಿ ಕೊಹ್ಲಿ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!