ಟಿ20 ವಿಶ್ವ ಕಪ್ ಗೆದ್ದರೆ ಮಾತ್ರ ವಿರಾಟ್ ಗೆ ನಾಯಕತ್ವ ಗಟ್ಟಿ : ಸೋತರೆ ಸ್ಥಾನ ಪಲ್ಲಟ

Team Newsnap
1 Min Read

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ವರ್ಲ್ಡ್ ಕಪ್​ ನಂತರ ಭಾರತೀಯ ಕ್ರಿಕೆಟ್​ನ ಟಿ20 ಕ್ರಿಕೆಟ್​ನ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.

ಈ ಮಧ್ಯೆ ವಿರಾಟ್ ಕೊಹ್ಲಿಯನ್ನು ಒನ್ ಡೇ ಇಂಟರ್​ನ್ಯಾಷನಲ್​ನ ನಾಯಕತ್ವದಿಂದಲೂ ಕೆಳಗಿಳಿಸಲು ಬಿಸಿಸಿಐ ಮತ್ತು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಗೊತ್ತಾಗಿದೆ.

ಈಗಾಗಲೇ ಬೋರ್ಡ್ ಮತ್ತು ಸೆಲೆಕ್ಷನ್ ಕಮಿಟಿಯಲ್ಲಿ ವಿರಾಟ್​ರನ್ನು ಕೆಳಗಿಳಿಸುವ ಬಗ್ಗೆ ಚರ್ಚೆ ಹೆಚ್ಚಾಗಿದೆ. ಒನ್​ಡೇ ಇಂಟರ್​ನ್ಯಾಷನಲ್​​ಗೆ ಇಬ್ಬರು ವೈಸ್​ ಕ್ಯಾಪ್ಟನ್​ಗಳನ್ನು ನೇಮಿಸಲು ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ.

.ವಿರಾಟ್ ಟಿ 20 ವರ್ಲ್ಡ್​ ಕಪ್​ನಲ್ಲಿ ಗೆದ್ದು ತೋರಿಸಲೇಬೇಕಿದೆ. ಒಂದು ವೇಳೆ ಟಿ 20 ವರ್ಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾ ಫೈನಲ್ ತಲುಪಿದರೂ ಅದರು ಕೊಹ್ಲಿ ಪಾಲಿಗೆ ನಷ್ಟವಾಗಿ ಪರಿಣಮಿಸಲಿದೆ.

ಟಿ20 ವರ್ಲ್ಡ್​ಕಪ್​ನಲ್ಲಿ ಕಪ್ ಗೆಲ್ಲುವಲ್ಲಿ ವಿರಾಟ್ ವಿಫಲರಾದರೆ ಅವರನ್ನು ಒನ್​ ಡೇ ಇಂಟರ್​​ನ್ಯಾಷನಲ್​ನಿಂದಲೂ ಕೆಳಗಿಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಟಿ20 ತಂಡದ ನಾಯಕತ್ವವನ್ನು ತ್ಯಜಿಸುತ್ತೇನೆ – ವಿರಾಟ್

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವವನ್ನು ತ್ಯಜಿಸುತ್ತೇನೆ ಎಂದು ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.

ಕೊಹ್ಲಿ, ನಾನು ಕಳೆದ 8-9 ವರ್ಷಗಳಿಂದ ಭಾರತ ತಂಡಕ್ಕಾಗಿ ಆಡುತ್ತಿದ್ದೇನೆ. ನನಗೆ ತಂಡದ ನಾಯಕತ್ವ ನೀಡಿ 5-6 ವರ್ಷಗಳು ಕಳೆದಿದೆ. ಈಗಾಗಲೇ ಸಾಕಷ್ಟು ಯಶಸ್ಸನ್ನು ಕಂಡಿದ್ದೇನೆ. ಇದೀಗ ನಾನು ನನ್ನ ಬ್ಯಾಟಿಂಗ್ ಸಾಮರ್ಥ್ಯದ ಕಡೆಗೆ ಹೆಚ್ಚು ಆಸಕ್ತಿ ವಹಿಸುವ ಉದ್ದೇಶದಿಂದ ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವ ತ್ಯಜಿಸುತ್ತೇನೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

Share This Article
Leave a comment