ಧಾರವಾಡಕ್ಕೆ ಪ್ರವೇಶ : ವಿನಯ್ ಕುಲ್ಕರ್ಣಿಗೆ ನಿರ್ಬಂಧ ಮುಂದುವರಿಕೆ – ಶಿಗ್ಗಾಂವ್ ನಿಂದ ಸ್ಪರ್ಧೆ ?

Team Newsnap
2 Min Read
Entry to Dharwad: Vinay Kulkarni's ban continues - competition from Shiggaon? ಧಾರವಾಡಕ್ಕೆ ಪ್ರವೇಶ : ವಿನಯ್ ಕುಲ್ಕರ್ಣಿಗೆ ನಿರ್ಬಂಧ ಮುಂದುವರಿಕೆ - ಶಿಗ್ಗಾಂವ್ ನಿಂದ ಸ್ಪರ್ಧೆ ?

ರಾಜ್ಯ ವಿಧಾನಸಭಾ ಚುನಾವಣೆಯಸಮಯದಲ್ಲಿ ಧಾರವಾಡಕ್ಕೆ ತೆರಳಲು ಅನುಮತಿ ಕೋರಿ ಮಾಜಿ ಸಚಿವ ಕಾಂಗ್ರೆಸ್ ಅಭ್ಯರ್ಥಿ ವಿನಯ್‌ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ಯನ್ನು ಕೋರ್ಟ್ ವಜಾಮಾಡಿದೆ .

ಚುನಾವಣೆಯ ವೇಳೆ ವಿನಯ್ ಧಾರವಾಡ ಪ್ರವೇಶಕ್ಕೆ ನಿರ್ಬಂಧ ಮುಂದುವರೆದಿರುವುದು ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.

ಧಾರವಾಡ ಬಿಜೆಪಿ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ವಿನಯ್ ಕುಲಕರ್ಣಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿದ್ದರು.

ಏಪ್ರಿಲ್‌ 15 ರಂದು ವಿನಯ್‌ ಕುಲಕರ್ಣಿ ಅವರ ಅರ್ಜಿಯ ವಿಚಾರಣೆಯನ್ನು ಪೂರ್ಣ ಮಾಡಿದ್ದ ಕೋರ್ಟ್‌ ಏಪ್ರಿಲ್‌ 18ಕ್ಕೆ ತೀರ್ಪು ಕಾಯ್ದಿರಿಸಿತ್ತು.

ಯೋಗೇಶ್‌ ಗೌಡ ಪ್ರಕರಣದ 120 ಸಾಕ್ಷಿಗಳ ಪೈಕಿ 90 ಮಂದಿ ಧಾರವಾಡದವರೇ ಆಗಿದ್ದಾರೆ. ವಿನಯ್‌ ಕುಲಕರ್ಣಿಗೆ ಕ್ಷೇತ್ರಕ್ಕೆ ಪ್ರವೇಶ ನೀಡಿದರೆ ಆದೇಶ ದುರುಪಯೋಗವಾಗಬಹುದು. ಮುಂದೆ ವಿಚಾರಣೆಗೆ ಸಮಸ್ಯೆಯಾಗಬಹುದು. ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಸಿಬಿಐ ಪರ ವಕೀಲರು ಬಲವಾದ ವಾದ ಮಂಡಿಸಿದ್ದರು.

ಯೋಗೇಶ್‌ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ವಿನಯ್‌ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು. ಜಾಮೀನು ಮಂಜೂರು ಮಾಡುವಾಗ ಧಾರವಾಡ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್‌ ಷರತ್ತು ವಿಧಿಸಿತ್ತು. ಆದರೆ ಅನಿವಾರ್ಯ ಇದ್ದಾಗ ಮಾತ್ರ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದ ಕಾರಣ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿ ಪ್ರವೇಶಕ್ಕೆ ಮನವಿ ಮಾಡಿದ್ದರು
ವಿನಯ್‌ ಕುಲಕರ್ಣಿ ಈಗ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡದ ಕಾರಣ ಕಾಂಗ್ರೆಸ್‌ ಮುಂದೆ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಧಾರವಾಡ ಪ್ರವೇಶ ಸಿಗದಿದ್ದರೆ ವಿನಯ್‌ ಕುಲಕರ್ಣಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಮಾತು ಈ ಹಿಂದೆಯೇ ಕೇಳಿ ಬಂದಿತ್ತು. ಒಂದು ವೇಳೆ ಕಾಂಗ್ರೆಸ್‌ ವಿನಯ್‌ ಕುಲಕರ್ಣಿ ಹೆಸರನ್ನು ಅಂತಿಮಗೊಳಿಸಿದರೆ ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಬೇಕಾಗುತ್ತದೆ.ಇದನ್ನು ಓದಿ -ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಿದರೆ – ರೈತ ಮಹಿಳೆ ನಿಲ್ಲಿಸಿ ಗೆಲ್ಲಿಸುವೆ – ಹೆಚ್ ಡಿ ಕೆ

Share This Article
Leave a comment