ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಹೈ ಕಮ್ಯಾಂಡ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಕೆಪಿಸಿಸಿ ವಕ್ತಾರ ನಾಗಾರಾಜ್ ಯಾದವ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ.
ಕಾಂಗ್ರೆಸ್‍ನ ಹಿರಿಯ ನಾಯಕರು ಟಿಕೆಟ್‍ಗಾಗಿ ಹೈಕಮಾಂಡ್ ಬಳಿ ಅಂಗಲಾಚಿದ್ದರು. ಆದರೆ ಹೈಕಮಾಂಡ್ ಪಕ್ಷ ನಿಷ್ಠರನ್ನು ಹುಡುಕಿ ಮಣೆ ಹಾಕಿದೆ.
ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಲು ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ ಹೈಕಮಾಂಡ್ ಯಾರ ಪ್ರಯತ್ನಕ್ಕೂ ಕೇರ್ ಮಾಡದೇ ತನ್ನದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಇದನ್ನು ಓದಿ –ಚಿಕ್ಕಬಳ್ಳಾಪುರದಲ್ಲಿ ಏಕಕಾಲದಲ್ಲೇ 2 ಕಡೆ ಭೂಕಂಪ- ಆತಂಕಗೊಂಡ ಜನ
ಜಾತಿ ಸಮೀಕರಣದಲ್ಲಿ ಯಾದವ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ನಾಗರಾಜ್ ಯಾದವ್‍ಗೆ ಅವಕಾಶ ನೀಡಿದೆ. ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಮೇಶ್ ಜಾರಕಿಹೊಳಿ ಬೆಂಬಲಿಗ ಸಹಾ ಆಗಿರುವ ನಾಗರಾಜ್ ಯಾದವ್‍ಗೆ ಅವಕಾಶ ಸಿಕ್ಕಿದೆ. ಯಾದವ್ ಯಾವುದೇ ಬಣದಲ್ಲಿ ಗುರುತಿಸಿಕೊಂಡಿಲ್ಲ.
ಈ ಹಿಂದೆ ಒಂದು ಬಾರಿ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಪರಿಷತ್‍ಗೆ ನಾಮನಿರ್ದೇಶನಗೊಂಡಿದ್ದ ಅಬ್ದುಲ್ ಜಬ್ಬಾರ್‌ಗೆ ಹೈಕಮಾಂಡ್ ಮಣೆ ಹಾಕಿದೆ. ಪ್ರಸ್ತುತ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜಾಧ್ಯಕ್ಷರಾಗಿರುವ ಅಬ್ದುಲ್ ಜಬ್ಬಾರ್ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
- ಬಾದಾಮಿಯ ಕೇರೂರಿನಲ್ಲಿ ನೂಪುರ್ ಶರ್ಮ ವಿವಾದ : ಮೂವರ ಯುವಕರ ಮೇಲೆ ಚಾಕೂವಿನಿಂದ ಇರಿದು ಹಲ್ಲೆ
- ಶಾಸಕ ಜಮೀರ್ ಅಹಮದ್ ಅಕ್ರಮ ಆಸ್ತಿ 87.44 ಕೋಟಿ: ಇಡಿಗೆ ಎಸಿಬಿ ವರದಿ
- ಡಾ. ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ನಾಲ್ವರು ರಾಜ್ಯಸಭೆಗೆ ನಾಮ ನಿರ್ದೇಶನ
- KRSಗೆ 30 ಸಾವಿರ ಕ್ಯೂಸೆಕ್ ಒಳಹರಿವು – ಪ್ರವಾಹದ ಮುನ್ನೆಚ್ಚರಿಕೆ : ಆಣೆಕಟ್ಟೆ ಭರ್ತಿಗೆ 9 ಅಡಿ ಬಾಕಿ
- 18 ದಿನಗಳಲ್ಲಿ 8 ಬಾರಿ ತಾಂತ್ರಿಕ ದೋಷ: ಸ್ಪೈಸ್ ಜೆಟ್ ಗೆ ಡಿಜಿಸಿಎ ನೊಟೀಸ್
- ವೆಸ್ಟ್ ಇಂಡೀಸ್ ತಂಡಕ್ಕೆ ಟೀಂ ಇಂಡಿಯಾ ಪ್ರಕಟ : ಶಿಖರ್ ಧವನ್ ನಾಯಕ – ಕೊಹ್ಲಿ, ರೋಹಿತ್ ಗೆ ವಿಶ್ರಾಂತಿ
More Stories
ಬಾದಾಮಿಯ ಕೇರೂರಿನಲ್ಲಿ ನೂಪುರ್ ಶರ್ಮ ವಿವಾದ : ಮೂವರ ಯುವಕರ ಮೇಲೆ ಚಾಕೂವಿನಿಂದ ಇರಿದು ಹಲ್ಲೆ
ಶಾಸಕ ಜಮೀರ್ ಅಹಮದ್ ಅಕ್ರಮ ಆಸ್ತಿ 87.44 ಕೋಟಿ: ಇಡಿಗೆ ಎಸಿಬಿ ವರದಿ
ಡಾ. ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ನಾಲ್ವರು ರಾಜ್ಯಸಭೆಗೆ ನಾಮ ನಿರ್ದೇಶನ