ಚಿಕ್ಕಬಳ್ಳಾಪುರದಲ್ಲಿ ಏಕಕಾಲದಲ್ಲೇ 2 ಕಡೆ ಭೂಕಂಪ- ಆತಂಕಗೊಂಡ ಜನ

Team Newsnap
1 Min Read
continuously 2 times earthquake in chikkaballapura

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಏಕಕಾಲದಲ್ಲೇ ಎರಡು ಕಡೆ ಭೂಕಂಪನ ಸಂಭವಿಸಿದ ಘಟನೆ ಸೋಮವಾರ ಜರುಗಿದೆ

ಇದನ್ನು ಓದಿ –ಸೊಸೆ ಹತ್ಯೆ ಮಾಡಿ ಗಂಡನ ಮನೆಯವರೇ ನೇಣು ಹಾಕಿದ್ದಾರೆ – ಮೃತಳ ಕುಟುಂಬದವರ ಆರೋಪ

ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯಲ್ಲಿ ಏಕಕಾಲದಲ್ಲಿ ಕ್ರಮವಾಗಿ 2.6 ಹಾಗೂ 2.4 ತೀವ್ರತೆಯ ಭೂಕಂಪನ ದಾಖಲಾಗಿದೆ.ಈ ಭೂಕಂಪದ ತೀವ್ರತೆ ಕಡಮೆ ಇದ್ದರೂ ಜನರು ಆತಂಕದಲ್ಲಿ ಇದ್ದರು ಜಿಲ್ಲಾ ಕೇಂದ್ರದಿಂದ 10 ಕಿಲೋ ಮೀಟರ್ ದೂರದಲ್ಲಿ ಭೂಕಂಪನವಾಗಿದೆ. ಭೂಮಿಯ 6.8 ಕಿಲೋ ಮೀಟರ್ ಅಂತರಾಳದಲ್ಲಿ ಭೂಮಿಯ ಕಂಪನ ಉಂಟಾಗಿದೆ ಎಂದು ವರದಿಯಾಗಿದೆ.

ಚಿಂತಾಮಣಿ ತಾಲೂಕು ಕೇಂದ್ರದಿಂದ 13 ಕಿಲೋಮೀಟರ್ ದೂರದಲ್ಲಿ ಮತ್ತೊಂದು ಭೂಕಂಪನ ಸಂಭವಿಸಿದೆ. ಭೂಗರ್ಭ 10 ಕಿಲೋ ಮೀಟರ್ ಅಂತರಾಳದಲ್ಲಿ ಭೂಮಿಯ ಕಂಪನವಾಗಿದೆ. ಮಧ್ಯಾಹ್ನ 2 ಗಂಟೆ 39 ನಿಮಿಷಕ್ಕೆ ಏಕಕಾಲದಲ್ಲಿ ಎರಡು ಕಡೆ ಭೂಕಂಪನ ಸಂಭವಿಸಿದೆ.

Share This Article
Leave a comment