ಶ್ರಾವಣ ಮಾಸ ಬಂತೆಂದರೆ ಸಾಕು, ಸಾಲು ಸಾಲು ಹಬ್ಬಗಳ ಸಂಭ್ರಮ.ಅದರೊಂದಿಗೆ ಮನೆ ಮನ ತುಂಬುವ ಸಂಭ್ರಮವನ್ನು ಶ್ರಾವಣ ಮಾಸ ತನ್ನೊಂದಿಗೇ ತಂದುಕೊಡುತ್ತದೆ. ಈ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬವೆಂದರೆ ಹೆಂಗಳೆಯರಿಗೆ ಮತ್ತಷ್ಟು ಹುಮ್ಮಸ್ಸು ಉತ್ಸಾಹ.
ಸಕಲ ಸಂಪನ್ನಗಳ ತಾಯಿ ಎಂದು ಕರೆಯಲ್ಪಡುವ ವರಮಹಾಲಕ್ಷ್ಮಿಯನ್ನು ಪೂಜಿಸಿದರೆ, ಆಕೆ ಅಷ್ಟೈಶ್ವರ್ಯಗಳನ್ನು ಪ್ರಾಪ್ತಿಸುತ್ತಾಳೆ ಎಂಬ ನಂಬಿಕೆ ಈ ಹಬ್ಬದ ಹಿಂದಿದೆ.
ಸಮೃದ್ಧಿಯ ಸಂಕೇತವಾದ ಲಕ್ಷ್ಮೀದೇವಿಯನ್ನು ಮನೆಗೆ ಬರಮಾಡಿಕೊಳ್ಳುವ ಕಾತರ. ಹಿಂದೂ ಧರ್ಮದಲ್ಲಿ ಸಂಪತ್ತಿನ ಅಧಿದೇವತೆಯೆಂದೇ ಕರೆಸಿಕೊಳ್ಳುವ ಲಕ್ಷ್ಮೀ ದೇವಿಯನ್ನು ಆರಾಧಿಸಿ ವಿಶೇಷ ವರ ಕೊಡು ಎಂದು ಬೇಡಿಕೆಯಿಡುವ ಈ ಹಬ್ಬ “ವರಮಹಾಲಕ್ಷ್ಮಿ ವೃತ”ವೆಂದು ಕರೆಸಿಕೊಳ್ಳುತ್ತದೆ.
ವರಮಹಾಲಕ್ಷ್ಮಿ ಅಲಂಕಾರಪ್ರಿಯೆ
ರಂಗೋಲಿ : ಪೂಜಾ ಸ್ಥಳವನ್ನು ಶುದ್ಧಗೊಳಿಸಿದ ನಂತರ ಪೂಜಾ ಸ್ಥಳದಲ್ಲಿ ಸುಂದರವಾದ ರಂಗೋಲಿಯನ್ನು ಬಿಡಿಸುತ್ತಾರೆ. ಮನೆಯ ಮಧ್ಯಭಾಗಕ್ಕೆ ಸರಿಹೊಂದುವಂತೆ ರಂಗೋಲಿ ಇರಬೇಕು. ಇದು ಅದೃಷ್ಟವನ್ನು ತರುವ ಧನಲಕ್ಷ್ಮಿಗೆ ಸ್ವಾಗತವನ್ನು ಕೋರುವ ರೀತಿಯಾಗಿದೆ.
ಕಲಶ ಸಿದ್ಧಪಡಿಸುವುದು : ಕಲಶವನ್ನು ಬೆಳ್ಳಿ ಅಥವಾ ಹಿತ್ತಾಳೆಯಿಂದ ತಯಾರಿಸಲಾಗುತ್ತದೆ. ಗಂಧದಿಂದ ಸ್ವಸ್ತಿಕ ಚಿಹ್ನೆಯನ್ನು ಕಲಶದ ಮೇಲೆ ಬರೆಯಲಾಗುತ್ತದೆ. ಅಕ್ಕಿ, ನೀರು, ನಾಣ್ಯ, ಪೂರ್ಣ ಲಿಂಬೆ, ಐದು ಪ್ರಕಾರದ ಎಲೆಗಳು, ಅಡಿಕೆಯನ್ನು ಕಲಶದಲ್ಲಿ ಇರಿಸುತ್ತಾರೆ. ಕೆಲವರು ಅರಶಿನ, ಬಾಚಣಿಗೆ, ಕನ್ನಡಿ, ಸಣ್ಣ ಕಪ್ಪು ಬಳೆಗಳು ಕಪ್ಪು ಮಣಿಗಳನ್ನು ಇರಿಸುತ್ತಾರೆ. ನಂತರ ಅರಶಿನದ ಮಿಶ್ರಣವನ್ನು ತೆಂಗಿನ ಕಾಯಿಗೆ ಹಚ್ಚಿ ಕಲಶದ ಬಾಯಿಗೆ ಇರಿಸಲಾಗುತ್ತದೆ. ಎಲೆಯಿಂದ ಆವೃತವಾದ ಕುಂಭದ ಬಾಯಿಗೆ ತೆಂಗಿನಕಾಯಿಯನ್ನು ಇರಿಸುವುದು ವಾಡಿಕೆ. ನಂತರ ಇದರ ಮೇಲೆ ಲಕ್ಷ್ಮೀ ದೇವರ ಫೋಟೋವನ್ನಿಟ್ಟು ಪೂಜಿಸಲಾಗುತ್ತದೆ.
ಪೂಜೆಯನ್ನು ಪ್ರಾರಂಭಿಸುವುದು : ಗಣೇಶನ ನಾಮವನ್ನು ಪ್ರಾರಂಭಿಸುವುದರೊಂದಿಗೆ ಪೂಜೆಯನ್ನು ಆರಂಭಿಸಲಾಗುತ್ತದೆ. ನಂತರ ಲಕ್ಷ್ಮಿ ಸ್ತ್ರೋತ್ರವನ್ನು ಪಠಿಸಲಾಗುತ್ತದೆ. ನಂತರ ದೇವಿಗೆ ಆರತಿಯನ್ನು ಬೆಳಗಿ ಪ್ರಸಾದವನ್ನು ಅರ್ಪಿಸಲಾಗುತ್ತದೆ. ಕೆಲವು ಮಹಿಳೆಯರು ದೇವಿಯ ಪ್ರಸಾದವೆಂದು ಹಳದಿ ದಾರವನ್ನು ಕೈಗಳಿಗೆ ಕಟ್ಟಿಕೊಳ್ಳುತ್ತಾರೆ. ಪೂಜೆಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಅಡಿಕೆ ವೀಳ್ಯದೆಲೆಯೊಂದಿಗೆ ತಾಂಬೂಲವನ್ನು ನೀಡಲಾಗುತ್ತದೆ. ನಂತರ ಅಕ್ಕಪಕ್ಕದಲ್ಲಿರುವ ಮಹಿಳೆಯರನ್ನು ಸಂಜೆಯ ಆರತಿಗೆ ಆಹ್ವಾನಿಸುತ್ತಾರೆ.
ಪೂಜೆಯನ್ನು ಮುಗಿಸುವುದು ಮುಂದಿನ ದಿನ, ಶನಿವಾರದಂದು ಸ್ನಾನವನ್ನು ಮುಗಿಸಿದ ನಂತರ ಕಲಶವನ್ನು ವಿಸರ್ಜಿಸುವುದು ಮತ್ತು ಕಲಶದ ನೀರನ್ನು ಮನೆಯೊಳಗೆ ಪ್ರೋಕ್ಷಿಸಲಾಗುತ್ತದೆ. ನಂತರ ಅಕ್ಕಿಯನ್ನು ಅನ್ನ ತಯಾರಿಸಲು ಬಳಸುವ ಅಕ್ಕಿಯೊಂದಿಗೆ ಮಿಶ್ರ ಮಾಡಲಾಗುತ್ತದೆ. ತೈವಾನ್ ನಂತರ ಜಪಾನಿನ ಮೇಲೂ ಚೀನಾ ಕ್ಷಿಪಣಿ ದಾಳಿ
ಅಲಂಕಾರಪ್ರಿಯೆಗೆ ಸಂಭ್ರಮದ ಪೂಜೆ ಪುನಸ್ಕಾರ ಲಕ್ಷ್ಮೀ ಅಲಂಕಾರಪ್ರಿಯೆ. ಹೀಗಾಗಿ ಲಕ್ಷ್ಮಿಯನ್ನು ಅಲಂಕರಿಸಿ ಪೂಜಿಸುವುದು ಈ ಹಬ್ಬದ ಒಂದು ವೈಶಿಷ್ಟ್ಯವೆಂದೇ ಹೇಳಬಹುದು. ಕಳಸಕ್ಕೆ ಸೀರೆ ಉಡಿಸಿ ಆಭರಣಗಳನ್ನು ತೊಡಿಸಿ ಅಲಂಕಾರ ಮಾಡುವುದರೊಂದಿಗೆ ಸಾಂಪ್ರದಾಯಿಕ ರಂಗೋಲಿ ಹಾಕಿ ದೇವಿಯನ್ನು ಬರಮಾಡಿಕೊಳ್ಳಲಾಗುತ್ತದೆ. ಪೂಜೆ ಬಳಿಕ 9 ಗಂಟುಗಳು ಇರುವ ಮತ್ತು ಮಧ್ಯದಲ್ಲಿ ಹೂವಿರುವ ದಾರವನ್ನು ಬಲ ಕೈಗೆ ಕಟ್ಟಿಕೊಳ್ಳಬೇಕು. ಇದು ಆಚರಣೆಯ ಪ್ರಮುಖ ಅಂಶ.
ವರಮಹಾಲಕ್ಷ್ಮಿ ವೃತವನ್ನು ಏಕೆ ಆಚರಿಸುತ್ತಾರೆ?
ವರಮಹಾಲಕ್ಷ್ಮಿ ಆಚರಣೆಗೆ ಸಂಬಂಧಿಸಿದಂತೆ ಪುರಾಣದಲ್ಲಿ ಹಿನ್ನೆಲೆಯಿದೆ. ಅದರಲ್ಲಿ ಚಾರುಮತಿ ಕಥೆ ಜನಪ್ರಿಯವಾಗಿದೆ. ಶಿವನಲ್ಲಿ ಒಮ್ಮೆ ಪಾರ್ವತಿದೇವಿ ಪ್ರಶ್ನೆಯೊಂದನ್ನು ಕೇಳುವಳು. ಮಹಿಳೆಯರು ತಮ್ಮ ಕುಟುಂಬದ ಸುಖಸಮೃದ್ಧಿಗೆ ಏನು ಮಾಡಬೇಕು? ಎಂದು. ಆಗ ಚಾರುಮತಿ ಕಥೆಯನ್ನು ಶಿವ ವಿವರಿಸಿದನು.
ಮಗಧ ದೇಶದಲ್ಲಿ ಸದ್ಗುಣದ ಪ್ರತೀಕದಂತಿದ್ದ ಚಾರುಮತಿ ಎಂಬ ಮಹಿಳೆ ಪರಿಪೂರ್ಣ ಪತ್ನಿ, ಸೊಸೆ ಮತ್ತು ತಾಯಿಯಾಗಿದ್ದಳು. ಆಕೆಯ ನಿಷ್ಠೆ, ಭಕ್ತಿಯಿಂದ ಪ್ರಭಾವಿತಳಾದ ಲಕ್ಷ್ಮೀ ದೇವಿ ಒಂದು ದಿನ ಚಾರುಮತಿಯ ಕನಸಿನಲ್ಲಿ ಬಂದು ಶ್ರಾವಣ ತಿಂಗಳಲ್ಲಿ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರ ತನ್ನನ್ನು ಪೂಜಿಸುವಂತೆ ಹೇಳುವಳು. ನೀನು ಭಕ್ತಿಪೂರ್ವಕವಾಗಿ ಪೂಜಿಸಿದರೆ ಜೀವನದಲ್ಲಿ ಇಚ್ಛಿಸಿರುವುದನ್ನು ವರ ನೀಡುವೆನು ಎಂದು ಲಕ್ಷ್ಮೀ ದೇವಿ ಹೇಳುವಳು. ಅದರಂತೆಯೇ ಚಾರುಮತಿ ನೆರೆಹೊರೆಯವರು, ಸಂಬಂಧಿಗಳ ಸಮ್ಮುಖದಲ್ಲಿ ಪೂಜೆ ನೆರವೇರಿಸುವಳು.
ಪೂಜೆ ನಂತರ ಚಾರುಮತಿ ಮನೆ ಬಂಗಾರದಂತೆ ಸಮೃದ್ಧವಾಯಿತು. ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ನೆರವೇರಿಸುವ ಪರಿಪಾಠ ಬೆಳೆದುಕೊಂಡು ಬಂದಿತು. ಕುಟುಂಬದ ಶ್ರೇಯಸ್ಸು, ಸಮೃದ್ಧಿಯಂಥ ವರವನ್ನು ಕೊಡು ತಾಯಿ ಎಂದು ಮನೆ ಮಹಿಳೆಯರು ಪೂಜಿಸುವುದು ಪದ್ಧತಿಯಾಯಿತು.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ