ಭಾರೀ ಮಳೆ- ನಾಳೆ ಮಂಡ್ಯ, ಚಾಮರಾಜನಗರ ಜಿಲ್ಲೆಯಲ್ಲಿ ಎರಡು ದಿನ ಶಾಲೆಗಳಿಗೆ ರಜೆ

Team Newsnap
1 Min Read

ಭಾರೀ ಮಳೆಯ ಹಿನ್ನೆಲೆಯಲ್ಲಿ ನಾಳೆ ಮಂಡ್ಯ ಹಾಗೂ ಚಾಮರಾಜನಗರದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಮಂಡ್ಯದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‍ಎಸ್ ಡ್ಯಾಂ ಈಗಾಗಲೇ ತುಂಬಿದೆ ಜೀವನದಿ ಕಾವೇರಿ ಸೇರಿದಂತೆ ಅನೇಕ ನದಿಗಳು ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಅಂಗನವಾಡಿ, ಎಲ್.ಕೆ.ಜಿ, ಯುಕೆಜಿ ಸೇರಿದಂತೆ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ನೀಡುವಂತೆ ಮಂಡ್ಯ
ಡಿ ಸಿ ಅಶ್ವಥಿ ರಜೆ ಘೋಷಿಸಿದ್ದಾರೆ. ಬೆಲ್ಲಕ್ಕೆ ಶೇ.5 ಜಿಎಸ್‌ಟಿ ಬೇಡ: ಕೇಂದ್ರಕ್ಕೆ ಸಂಸದೆ ಸುಮಲತಾ ಮನವಿ

ಜಿಲ್ಲೆಯಾದ್ಯಂತ ಮಳೆಯಿಂದ ಹಲವಡೆ ಈಗಾಗಲೇ ಅವಾಂತರ ಸೃಷ್ಟಿ ಮಾಡಿದ್ದು, ಮಕ್ಕಳ ಹಿತದೃಷ್ಟಿಯಿಂದ ಮುನ್ನಚ್ಚರಿಕೆವಾಗಿ ನಾಳೆ (ಶುಕ್ರವಾರ) ರಜೆ ಘೋಷಣೆ ಮಾಡಲಾಗಿದೆ.

mandya,rain,damage
Ashlesha rains: Huge disturbance in districts including Mandya

ಚಾಮರಾಜನಗರ ಜಿಲ್ಲೆಯಲ್ಲೂ ಮುಂದಿನ ಎರಡು ದಿನಗಳ ಕಾಲ ಅತ್ಯಧಿಕ ಮಳೆ ಬೀಳುವ ಸಂಭವ ವರದಿ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾದ್ಯಂತ ಎಲ್ಲಾ ಶಾಲೆ ಹಾಗೂ ಅಂಗನವಾಡಿಗಳಿಗೆ ಆಗಸ್ಟ್ 5 ಮತ್ತು 6 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಭಾರತೀಯ ಹವಾಮಾನ ಇಲಾಖೆಯು ಮುಂದಿನ ಎರಡು ದಿನಗಳ ಕಾಲ ಜಿಲ್ಲಾದ್ಯಂತ ಅತೀ ಹೆಚ್ಚು ಮಳೆ ಬೀಳುವ ಸಂಭವ ಇದೆ ಎಂದು ವರದಿ ನೀಡಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ಜಿಲ್ಲಾದ್ಯಂತ ಇರುವ ಎಲ್ಲಾ ಅಂಗನವಾಡಿ, ಎಲ್.ಕೆ.ಜಿ, ಯು.ಕೆ.ಜಿ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಆಗಸ್ಟ್ 5 ಹಾಗೂ 6 ರಂದು ರಜೆ ಘೋಷಿಸಲಾಗಿದೆ.

Share This Article
Leave a comment