ಬೆಲ್ಲಕ್ಕೆ ಶೇ.5 ಜಿಎಸ್‌ಟಿ ಬೇಡ: ಕೇಂದ್ರಕ್ಕೆ ಸಂಸದೆ ಸುಮಲತಾ ಮನವಿ

Team Newsnap
1 Min Read
No 5% GST for jaggery : MP Sumalatha appeals to the Centre

ಬೆಲ್ಲದ ಮೇಲೆ ಶೇ.5 ಜಿಎಸ್‌ಟಿ ವಿಧಿಸಿರುವುದನ್ನು ವಾಪಸ್‌ ಪಡೆಯಬೇಕೆಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಕೇಂದ್ರದ ವಿತ್ತ ಸಚಿವರಿಗೆ ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿನ ಕಬ್ಬು ಬೆಳೆಗಾರರಿಗೆ ಹೋಲಿಕೆ ಮಾಡಿದರೆ ಕರ್ನಾಟಕ ರಾಜ್ಯದಲ್ಲಿನ ಬೆಳೆಗಾರರಿಗೆ ಮುಕ್ತ ಹಾಗೂ ನ್ಯಾಯ ಸಮ್ಮತ ದರ (ಎಫ್‌ಆರ್‌ಪಿ) ಕಡಿಮೆಯೇ ಇದೆ ಎಂದಿದ್ದಾರೆ.ಇದನ್ನು ಓದಿ –ತೈವಾನ್ ನಂತರ ಜಪಾನಿನ ಮೇಲೂ ಚೀನಾ ಕ್ಷಿಪಣಿ ದಾಳಿ

ನವದೆಹಲಿಯಲ್ಲಿ ಗುರುವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಈ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿ ಸಲ್ಲಿಸಿದರು.

ಉತ್ತರದ ರಾಜ್ಯಗಳನ್ನು ಹೋಲಿಕೆ ಮಾಡಿದಾಗ ಕರ್ನಾಟಕದಲ್ಲಿ ಇರುವ ಬೆಲ್ಲ ತಯಾರಿಕಾ ಘಟಕಗಳ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ವಿವರಿಸಿದರು. ಮಂಡ್ಯ ಜಿಲ್ಲೆ ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಕೂಡ ಕಬ್ಬು ಬೆಳೆಗಾರರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ವಿತ್ತ ಸಚಿವರಿಗೆ ವಿವರಿಸಿದರು.

ಮನವಿಯನ್ನು ಪರಿಶೀಲಿಸಿದ ನಿರ್ಮಲಾ ಸೀತಾರಾಮನ್‌ ಅವರು, ಬೆಲ್ಲಕ್ಕೆ ಶೇ.5 ಜಿಎಸ್‌ಟಿ ವಿಧಿಸಿದ ಬಗ್ಗೆ ಮಂಡಳಿಯ ಗಮನಕ್ಕೆ ತಂದು ಪರಿಶೀಲಿಸಲಾಗುತ್ತದೆ. ಜತೆಗೆ ಇತರ ಕೋರಿಕೆಗಳಿಗೆ ಸ್ಪಂದಿಸಿ ಪರಿಹಾರ ಸೂತ್ರ ಪ್ರಕಟಿಸುವುದಾಗಿ ಹೇಳಿದ್ದಾರೆ.

Share This Article
Leave a comment