ತೈವಾನ್ ನಂತರ ಜಪಾನಿನ ಮೇಲೂ ಚೀನಾ ಕ್ಷಿಪಣಿ ದಾಳಿ

Team Newsnap
1 Min Read
China missile attack on Japan after Taiwan #Thenewsnap

ತೈವಾನ್‍ನ ಮೇಲೆ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೇ ಜಪಾನ್‍ನ ವಿಶೇಷ ಆರ್ಥಿಕ ವಲಯದೊಳಗೆ ಚೀನಾ 5 ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ.

ಈ ಬಗ್ಗೆ ಜಪಾನಿನ ರಕ್ಷಣಾ ಸಚಿವ ನೊಬುವೊ ಕಿಶಿ ಮಾಹಿತಿ ನೀಡಿದ್ದು, ಚೀನಾ ಉಡಾವಣೆ ಮಾಡಿದ್ದ 9 ಕ್ಷಿಪಣಿಗಳಲ್ಲಿ 5 ಜಪಾನ್‍ನ ವಿಶೇಷ ಆರ್ಥಿಕ ವಲಯದೊಳಗೆ ಬಂದಿದೆ.ಇದನ್ನು ಓದಿ –ಶಿಕ್ಷಕಿ ಬರ್ಬರ ಹತ್ಯೆ; ನಂಜನಗೂಡು ನಗರಸಭೆ BJP ಸದಸ್ಯೆ ಸೇರಿ ನಾಲ್ವರ ಬಂಧನ

ನಮ್ಮ ದೇಶದ ಭದ್ರತೆ ಹಾಗೂ ಜನರ ಜನರ ಸುರಕ್ಷತೆಗೆ ಗಂಭೀರ ಸಮಸ್ಯೆಯಾಗಿದೆ ಎಂದು ತಿಳಿಸಿದರು.

ಜಪಾನ್‍ನ ದಕ್ಷಿಣದ ದ್ವೀಪ ಪ್ರದೇಶದ ಓಕಿನಾವಾವು ತೈವಾನ್‍ಗೆ ಹತ್ತಿರದಲ್ಲಿವೆ. ಈ ಹಿನ್ನೆಲೆಯಲ್ಲಿ ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಜಪಾನ್‍ನ ವಿಶೇಷ ಆರ್ಥಿಕ ವಲಯದ ಮೇಲೆ ಬಿದ್ದಿರುವುದು ಇದೇ ಮೊದಲು ಎಂದು ಹೇಳಿದರು.

ಚೀನಾ ಪ್ರಜಾಸತ್ತಾತ್ಮಕ ತೈವಾನ್ ಅನ್ನು ತನ್ನ ಭೂಪ್ರದೇಶದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತದೆ. ಅಗತ್ಯವಿದ್ದಲ್ಲಿ ಬಲವಂತವಾಗಿ ಅದನ್ನು ವಶಪಡಿಸಿಕೊಳ್ಳುವುದಾಗಿ ಚೀನಾ ಸರ್ಕಾರ ತಿಳಿಸಿತ್ತು.

ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‍ಗೆ ಭೇಟಿ ನೀಡಿದ ಬಳಿಕ ಕೆರಳಿರುವ ಚೀನಾವು ಇಂದು ತೈವಾನ್‍ನ ಸುತ್ತಮುತ್ತಲು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ.

Share This Article
Leave a comment