ಬೆಂಗಳೂರು : ಬೆಂಗಳೂರಿನಿಂದ-ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಸಂಚರಿಸುವ ನೂತನ ‘ವಂದೇ ಭಾರತ್ ಎಕ್ಸ್ಪ್ರೆಸ್’ ಹೈ-ಸ್ಪೀಡ್ ರೈಲು ಸೇವೆಗೆ ಇಂದು ಬೆಳಿಗ್ಗೆ 10.30 ಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
ರಾಜ್ಯಕ್ಕೆ ಎರಡನೇ ಐಷಾರಾಮಿ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆ ಸಿಗಲಿದೆ. ಮಧ್ಯಪ್ರದೇಶದ ಭೋಪಾಲ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10.30 ಕ್ಕೆ ರಾಜಧಾನಿ ಭೋಪಾಲ್ನಲ್ಲಿ ವಂದೇ ಭಾರತ್ ಟ್ರೈನ್ಗೆ ಚಾಲನೆ ನೀಡಲಿದ್ದಾರೆ.
ದೇಶದ ಐದು ವಿವಿಧ ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್ ಟ್ರೈನ್ಗೆ ಚಾಲನೆ ಸಿಗಲಿದ್ದು, ಭೋಪಾಲ್ನ ರಾಣಿ ಕಮಲಪಾಟಿ ರೈಲ್ವೆ ನಿಲ್ದಾಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಸಿಗಲಿದೆ.
ಬೆಂಗಳೂರು- ಧಾರವಾಡ, ಗೋವಾ- ಮುಂಬೈ, ಇಂಧೋರ್- ಭೋಪಾಲ್ ನಡುವಿನ ವಂದೇ ಭಾರತ್ ಟ್ರೈನ್ಗೆ ಚಾಲನೆ ಸಿಗಲಿದೆ. ಕರ್ನಾಟಕಕ್ಕೆ ಇಂದಿನಿಂದ ಎರಡನೇ ‘ವಂದೇ ಭಾರತ್ ಟ್ರೈನ್’ ಸೇವೆ ಸಿಗಲಿದೆ.
ಈಗಾಗಲೇ ಮೈಸೂರು- ಬೆಂಗಳೂರು- ಚೆನ್ನೈ ನಡುವೆ ವಂದೇ ಭಾರತ್ ಟ್ರೈನ್ ಸಂಚಾರ ನಡೆಯುತ್ತಿದೆ.
ನಾಳೆಯಿಂದ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಸಿಗಲಿದೆ.ಬೆಂಗಳೂರು ನಿಲ್ದಾಣದಿಂದ 5.57ಕ್ಕೆ ಹೊರಟು ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪಲಿದೆ ,ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಬಿಟ್ಟು ಸಂಜೆ 7.45ಕ್ಕೆ ಪುನಃ ಬೆಂಗಳೂರಿಗೆ ವಾಪಸ್.ನಾಡಪ್ರಭು ಕೆಂಪೇಗೌಡರ ಜಯಂತಿ
ದರ ಎಷ್ಟು ?
- AC ಚೇರ್ಕಾರ್ನಲ್ಲಿ ಬೆಂಗಳೂರಿನಿಂದ ಧಾರವಾಡಕ್ಕೆ 1165 ರು
- ಬೆಂಗಳೂರಿನಿಂದ ಧಾರವಾಡ (ಎಕ್ಸಿಕ್ಯೂಟಿವ್ ಕ್ಲಾಸ್) 2245 ರು
- ಧಾರವಾಡದಿಂದ ಬೆಂಗಳೂರು (AC ಚೇರ್ಕಾರ್) 1130 ರು
- ಧಾರವಾಡದಿಂದ ಬೆಂಗಳೂರು (ಎಕ್ಸಿಕ್ಯೂಟಿವ್ ಕ್ಲಾಸ್) 2240 ರು
- MUDA ಹಗರಣ: ಅಂತಿಮ ತನಿಖಾ ವರದಿ ಐಜಿಪಿಗೆ ಸಲ್ಲಿಕೆ
- ಕೇಂದ್ರ ಸರ್ಕಾರದ 622 ಪುಟಗಳ ಹೊಸ ತೆರಿಗೆ ಮಸೂದೆ – ಪ್ರಮುಖ ಬದಲಾವಣೆಗಳ ಪರಿಚಯ
- ಶೀಘ್ರದಲ್ಲೇ ಬೆಂಗಳೂರುಗೆ ಎರಡನೇ ವಿಮಾನ ನಿಲ್ದಾಣ ಸ್ಥಳದ ಘೋಷಣೆ – ಡಿ.ಕೆ. ಶಿವಕುಮಾರ್
- 2025 ICC ಚಾಂಪಿಯನ್ಸ್ ಟ್ರೋಫಿ: ಟೀಮ್ ಇಂಡಿಯಾ ತಂಡ ಪ್ರಕಟ, ಬುಮ್ರಾ ಔಟ್ – ಹರ್ಷಿತ್ ರಾಣಾ ಸೇರ್ಪಡೆ
- ಮೈಸೂರಿನಲ್ಲಿ ಗಲಭೆ: ನಿಷೇಧಿತ ಸಂಘಟನೆಗಳ ಕೈವಾಡ ಶಂಕೆ
- ರಾಜ್ಯದಲ್ಲಿ ತಾಪಮಾನ ಏರಿಕೆ: ಬಿಸಿಲಿನ ತೀವ್ರತೆ ಹೆಚ್ಚಳ, ಹವಾಮಾನ ಇಲಾಖೆಯ ಮುನ್ಸೂಚನೆ
More Stories
MUDA ಹಗರಣ: ಅಂತಿಮ ತನಿಖಾ ವರದಿ ಐಜಿಪಿಗೆ ಸಲ್ಲಿಕೆ
ಕೇಂದ್ರ ಸರ್ಕಾರದ 622 ಪುಟಗಳ ಹೊಸ ತೆರಿಗೆ ಮಸೂದೆ – ಪ್ರಮುಖ ಬದಲಾವಣೆಗಳ ಪರಿಚಯ
ಶೀಘ್ರದಲ್ಲೇ ಬೆಂಗಳೂರುಗೆ ಎರಡನೇ ವಿಮಾನ ನಿಲ್ದಾಣ ಸ್ಥಳದ ಘೋಷಣೆ – ಡಿ.ಕೆ. ಶಿವಕುಮಾರ್