ನಾಡಪ್ರಭು ಹಿರಿಯ ಕೆಂಪೇಗೌಡರ ಜಯಂತಿಯನ್ನು ಕರ್ನಾಟಕ ರಾಜ್ಯದ್ಯಂತ ಜೂನ್ 27ರಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಭವ್ಯ ಬೆಂಗಳೂರಿನ ನಿರ್ಮಾಣದ ಶಿಲ್ಪಿ, ನಮ್ಮ ಹೆಮ್ಮೆಯ ವಿಜಯನಗರ ಸಂಸ್ಥಾನದ ಕೆಂಪೇಗೌಡರು.
16ನೇ ಶತಮಾನದಲ್ಲಿ ಬೆಂಗಳೂರಿನ ಪ್ರಾಂತ್ಯದ ಅಭಿವೃದ್ಧಿಗೆ ಅವರು ಕೈಗೊಂಡ ಕಾರ್ಯಗಳು ಇಂದಿಗೂ ಇತಿಹಾಸದ ಪುಟದಲ್ಲಿ ಅಮೋಘ ಸ್ಥಾನವನ್ನು ರಾರಾಜಿಸುತ್ತಿದೆ. ರಣಭೈರೇಗೌಡರ ಮನೆತನದಲ್ಲಿ ಜನಿಸಿದ ಪಾಳೇಗಾರ ಕೆಂಪೇಗೌಡರು ವೀರ ಶೌರ್ಯಕ್ಕೆ ಹೆಸರುವಾಸಿಯಾಗಿದ್ದರು.
ಅಂದಿನ ಬೆಂಗಳೂರನ್ನು ಹಳೆಯ ಲಂಡನ್ ಮಾದರಿಯಲ್ಲಿ ನಿರ್ಮಿಸಲು ಇವರು ಪಟ್ಟ ಶ್ರಮವು ಇಂದಿಗೂ ನಾವು ಕಾಣಬಹುದಾಗಿದೆ. ಬೆಂಗಳೂರಿನ ಒಂಬತ್ತು ಗೇಟುಗಳು,ಬೆಂಗಳೂರಿನ ಕೋಟೆ ಎಂದೇ ಹೆಸರುವಾಸಿಯಾದ ಮಾರ್ಕೆಟಿನ ಕಲ್ಲಿನ ಕೋಟೆ, ಹಾಗೂ ತಮ್ಮ ಸಂಸ್ಥಾನಕ್ಕೆ ಭದ್ರತಾ ರಕ್ಷಣಾ ನಿಟ್ಟಿನಲ್ಲಿ ಅನೇಕ ಕೋಟೆಗಳನ್ನು ಸುರಕ್ಷಿತವಾಗಿ ಸ್ಥಾಪಿಸುವಲ್ಲಿ ಮತ್ತು ಅಭಿವೃದ್ಧಿ ಪಡಿಸುವಲ್ಲಿ ಸಫಲವಾದರು.,
ಇಂತಹ ಸುಂದರ ಮತ್ತು ಭವ್ಯವಾದ ಒಂದು ನಾಡನ್ನು ಸೃಷ್ಟಿ ಮಾಡಲು ಕೆಂಪೇಗೌಡರ ದೂರದೃಷ್ಟಿ ವಿವೇಚನೆ ಮತ್ತು ಶಿಕ್ಷಣವೇ ಕಾರಣ ಎಂದು ಹೇಳಬಹುದು.
ಇಂತಹ ಮಹಾನಗರವನ್ನು ಒಂದು ಸುಸಜ್ಜಿತ ವ್ಯವಸ್ಥೆಯಲ್ಲಿ ನಿರ್ಮಿಸಲು ಅವರು ಪಟ್ಟ ಶ್ರಮ ಇಂದಿಗೂ ಹೆಸರುವಾಸಿಯಾಗಿ ನಮ್ಮ ನಿಮ್ಮೆಲ್ಲರ ಮನಸ್ಸಲ್ಲಿ ಸುಧೀರ್ಘವಾಗಿ ಉಳಿಯುವಂತಹದ್ದು.
ವ್ಯಾಪಾರ ವ್ಯವಹಾರ ಹಾಗೂ ವಾಣಿಜ್ಯಕ್ಕೆ ಅವರು ಕೊಟ್ಟ ಮಹತ್ವ ಅಪಾರ. ಇಂದು ನಾವು ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಆದರೆ ಅಂದು ಕೆಂಪೇಗೌಡರು ವಾಣಿಜ್ಯ ಕೇಂದ್ರವನ್ನಾಗಿಸುವ ಮಹಾದಾಸೆಯನ್ನು ಹೊಂದಿದ್ದರು. ಹಾಗೆ 54 ಪೇಟೆಗಳನ್ನು ಕೂಡ ಸೃಷ್ಟಿಸಿ ವಾಣಿಜ್ಯಕ್ಕೆ ಅನುಕೂಲವಾಗುವಂತೆ ಮಾಡಿದ್ದರು.
ಅಷ್ಟೇ ಅಲ್ಲದೆ ಹಲವಾರು ದೇವಸ್ಥಾನಗಳನ್ನು ಕಟ್ಟಿದ್ದಾರೆ. ಬೆಂಗಳೂರಿಗೆ ನೀರಿನ ಮೂಲವನ್ನು ಸೃಷ್ಟಿಸಿ ಕೆರೆಗಳನ್ನು ಕೊಡುಗೆಯಾಗಿ ಕೆಂಪೇಗೌಡರು ಕೊಟ್ಟಿದ್ದಾರೆ. ಇಂದು ಸುಸಜ್ಜಿತವಾಗಿ ನಮಗೆ ವಾಸಿಸಲು ಯೋಗ್ಯವಾದಂತಹ ಬೆಂಗಳೂರು ನಗರವನ್ನು ಸೃಷ್ಟಿ ಮಾಡಿಕೊಟ್ಟ ಕೆಂಪೇಗೌಡರಿಗೆ ನಾವು ಎಂದೆಂದಿಗೂ ಋಣಿಯಾಗಿ ನೆನೆಯುತ್ತೇವೆ.
ಚರಿತ್ರೆಯ ಭವ್ಯ ಪುಟಗಳನ್ನು ಒಮ್ಮೆ ತಿರುಗಿ ನೋಡಿದರೆ ಕೆಂಪೆನಂಜೇಗೌಡರ ಮೊದಲ ಮಗ ನಾಡಪ್ರಭು ಕೆಂಪೇಗೌಡರು. 1510ರಲ್ಲಿ ಜನಿಸಿದ ಹಿರಿಯ ಕೆಂಪೇಗೌಡ 1513 ರಲ್ಲಿ, ಇವರಿಗೆ ಪಟ್ಟಾಭಿಷೇಕ ನಡೆದು ಆಡಳಿತಕ್ಕೆ ಬಂದರು.1537 ರಲ್ಲಿ ತಮ್ಮ ಆಡಳಿತವಾಸ್ಥೆಯಲ್ಲಿ ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅದರ ಅಭಿವೃದ್ದಿಗೆ ಸತತ ಪ್ರಯತ್ನ ಮಾಡಿದರು.
ಆದರೆ ಇಂದು ನಾವು ಅದನ್ನೆಲ್ಲ ಉಳಿಸಿಕೊಳ್ಳುತ್ತಿದ್ದೇವೆಯೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಬೇಕು. ಕೆರೆಗಳೆಲ್ಲವೂ ಜನರು ಬಳಸದೇ ಇರುವ ರೀತಿ ಕಲುಷಿತವಾಗಿದೆ. ತ್ವರಿತ ವೇಗದಲ್ಲಿ ಸಿಲಿಕಾನ್ ಸಿಟಿ ಆಗಿ ಬೆಳೆಯುತ್ತಿರುವ ನಮ್ಮ ಈ ನಗರವನ್ನು ನಾವೆಲ್ಲರೂ ಪರಿಸರದ ಉಳಿವಿನ ನಿಟ್ಟಿನಲ್ಲಿ ಕಾಪಾಡಿಕೊಳ್ಳಬೇಕಾಗಿದೆ.ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ನಾವು ಈ ಜಯಂತಿಯನ್ನು ಸಾರ್ಥಕಗೊಳಿಸಬಹುದು. ಇಂದಿನ ಸರ್ಕಾರಿ ರೋಡಗಳನ್ನಾಗಲಿ, ಬಸ್ ನಿಲ್ದಾಣಗಳಲ್ಲಿ ಕಸದ ರಾಶಿ ಎಲ್ಲಾಂದರಲ್ಲಿ ಎಸೆದು ಕಲುಷಿತ ಮಾಡುತ್ತಾ ಸುಂದರ ಗಾರ್ಡನ್ ಸಿಟಿಯನ್ನು ಹಾಳುಗೆಡುವುತ್ತಿದ್ದೇವೆ. ಈ ನಗರವನ್ನು ಮುಂದಿನ ಪೀಳಿಗೆಗೆ ಆರೋಗ್ಯವಾಗಿ ಇರುವಂತೆ ಕಾಪಾಡಬೇಕು. ಹಸಿರನ್ನು ಉಳಿಸಿ ಬೆಳೆಸಬೇಕು. ಕೆಂಪೇಗೌಡರು ಕೊಟ್ಟ ಈ ಕೊಡುಗೆಗಳನ್ನು ನಾವು ನಿಧಿಯಂತೆ ಉಳಿಸಬೇಕು. ಇಲ್ಲವಾದರೆ ಮುಂದೊಂದಿನ ಈ ನಗರವನ್ನು ನಾವೇ ದುಸ್ಥಿತಿಯಲ್ಲಿ ಕಾಣುವ ಪರಿಸ್ಥಿತಿ ಬರಬಹುದು. ಉದಾಹರಣೆಗೆ ಡೆಲ್ಲಿ. ಆ ನಗರದ ಹೆಚ್ಚಾದ ಪರಿಸರ ಮಾಲಿನ್ಯದಿಂದ ಕಲುಷಿತ ಗಾಳಿ ಹರಿದಾಡಿದ ಘಟನೆ ನಾವೆಲ್ಲ ನೋಡಿದ್ದೇವೆ. ಇನ್ನು ನಮ್ಮ ಈ ನಗರವನ್ನು ಸುರಕ್ಷಿತವಾಗಿ ಸುಭದ್ರವಾಗಿ ಕಾಪಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕೈಯಲ್ಲಿ ಇದೆ
ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಇಂತಹ ತತ್ವಗಳಿಂದ ಸಾಕಾರಗೊಳಿಸೋಣ.ಅಂತಾರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿ ಪ್ರಕಟ
” ಸರ್ವ ಜನಾಂಗದ ಶಾಂತಿಯ ತೋಟ
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುಧ್ಯಾನ
ಜನಕನ ಹೋಲುವ ದೊರೆಗಳ ಧಾಮ
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಡಿದಾಡುವ ಗೇಹ
ಕನ್ನಡ ತಾಯಿಯ ಮಕ್ಕಳ ದೇಹ..”
ಜೈ ನಾಡಪ್ರಭು. ಜೈ ಕನ್ನಡಾಂಬೆ.
- ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
- ದಲಿತ ವಿಕಲಚೇತನ ಸೈಟ್ ನಲ್ಲಿ ಸಿದ್ದರಾಮಯ್ಯ ಮನೆ ನಿರ್ಮಾಣ – HDK
- ಪ್ರಜ್ವಲ್ ರೇವಣ್ಣನಿಂದ ಜಿ.ಪಂ ಮಾಜಿ ಸದಸ್ಯೆಗೆ 3 ವರ್ಷ ಲೈಂಗಿಕ ದೌರ್ಜನ್ಯ
- ಪ್ರೇಮಿಗಳು ಒಂದೇ ಹಗ್ಗಕ್ಕೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣು
- ಕೊಲೆಸ್ಟ್ರಾಲ್ ಮಟ್ಟ ಹಾಕಲು ಅಗಸೆ ರಾಮಬಾಣ ( ಅರೋಗ್ಯವೇ ಭಾಗ್ಯ )
- ನಂದಿನಿ ಹಾಲಿನ ದರ ಹೆಚ್ಚಳ – ಸಿಎಂ ಸಿದ್ದರಾಮಯ್ಯ