February 19, 2026

Newsnap Kannada

The World at your finger tips!

VANDE BHARAT

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು : ಪ್ರಧಾನಿಯಿಂದ ಇಂದು ಉದ್ಘಾಟನೆ – ದರ ಎಷ್ಟು ಗೊತ್ತಾ?

Spread the love

ಬೆಂಗಳೂರು : ಬೆಂಗಳೂರಿನಿಂದ-ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಸಂಚರಿಸುವ ನೂತನ ‘ವಂದೇ ಭಾರತ್ ಎಕ್ಸ್​ಪ್ರೆಸ್​​’ ಹೈ-ಸ್ಪೀಡ್ ರೈಲು ಸೇವೆಗೆ ಇಂದು ಬೆಳಿಗ್ಗೆ 10.30 ಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ರಾಜ್ಯಕ್ಕೆ ಎರಡನೇ ಐಷಾರಾಮಿ ವಂದೇ ಭಾರತ್ ಎಕ್ಸ್​ಪ್ರೆಸ್​ ಸೇವೆ ಸಿಗಲಿದೆ. ಮಧ್ಯಪ್ರದೇಶದ ಭೋಪಾಲ್​​ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10.30 ಕ್ಕೆ ರಾಜಧಾನಿ ಭೋಪಾಲ್​ನಲ್ಲಿ ವಂದೇ ಭಾರತ್ ಟ್ರೈನ್​ಗೆ ಚಾಲನೆ ನೀಡಲಿದ್ದಾರೆ.

ದೇಶದ ಐದು ವಿವಿಧ ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್ ಟ್ರೈನ್​ಗೆ ಚಾಲನೆ ಸಿಗಲಿದ್ದು, ಭೋಪಾಲ್​ನ ರಾಣಿ ಕಮಲಪಾಟಿ ರೈಲ್ವೆ ನಿಲ್ದಾಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಸಿಗಲಿದೆ.

ಬೆಂಗಳೂರು- ಧಾರವಾಡ, ಗೋವಾ- ಮುಂಬೈ, ಇಂಧೋರ್- ಭೋಪಾಲ್ ನಡುವಿನ ವಂದೇ ಭಾರತ್ ಟ್ರೈನ್​ಗೆ ಚಾಲನೆ ಸಿಗಲಿದೆ. ಕರ್ನಾಟಕಕ್ಕೆ ಇಂದಿನಿಂದ ಎರಡನೇ ‘ವಂದೇ‌ ಭಾರತ್ ಟ್ರೈನ್​’ ಸೇವೆ ಸಿಗಲಿದೆ.

ಈಗಾಗಲೇ ಮೈಸೂರು- ಬೆಂಗಳೂರು- ಚೆನ್ನೈ ನಡುವೆ ವಂದೇ‌ ಭಾರತ್ ಟ್ರೈನ್ ಸಂಚಾರ ನಡೆಯುತ್ತಿದೆ.

ನಾಳೆಯಿಂದ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಸಿಗಲಿದೆ.ಬೆಂಗಳೂರು ನಿಲ್ದಾಣದಿಂದ 5.57ಕ್ಕೆ ಹೊರಟು ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪಲಿದೆ ,ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಬಿಟ್ಟು ಸಂಜೆ 7.45ಕ್ಕೆ ಪುನಃ ಬೆಂಗಳೂರಿಗೆ ವಾಪಸ್.ನಾಡಪ್ರಭು ಕೆಂಪೇಗೌಡರ ಜಯಂತಿ

ದರ ಎಷ್ಟು ?

  • AC ಚೇರ್​​ಕಾರ್​ನಲ್ಲಿ ಬೆಂಗಳೂರಿನಿಂದ ಧಾರವಾಡಕ್ಕೆ 1165 ರು
  • ಬೆಂಗಳೂರಿನಿಂದ ಧಾರವಾಡ (ಎಕ್ಸಿಕ್ಯೂಟಿವ್ ಕ್ಲಾಸ್​) 2245 ರು
  • ಧಾರವಾಡದಿಂದ ಬೆಂಗಳೂರು (AC ಚೇರ್​​ಕಾರ್) 1130 ರು
  • ಧಾರವಾಡದಿಂದ ಬೆಂಗಳೂರು (ಎಕ್ಸಿಕ್ಯೂಟಿವ್ ಕ್ಲಾಸ್​) 2240 ರು
error: Content is protected !!