ಯುದ್ಧ ಸಂಕಷ್ಟದಲ್ಲಿ ಉಕ್ರೇನ್ ಗೆ 4 ಸಾವಿರ ಕೋಟಿ ಹಣ ನೀಡಿರುವ ಅಮೆರಿಕ : ಅನುದಾನ ತಿರಸ್ಕಾರ

Team Newsnap
1 Min Read

ಯುದ್ಧ ಸಂಕಷ್ಟದಲ್ಲಿರುವ ಉಕ್ರೇನ್​ಗೆ ಅಮೆರಿಕ ತುರ್ತಾಗಿ 600 ಮಿಲಿಯನ್ ಡಾಲರ್​​ ಹಣವನ್ನು (4000 ಸಾವಿರ ರು ಕೋಟಿ) ಬಿಡುಗಡೆ ಮಾಡಲುಮುಂದಾಗಿದೆ .

ಯುದ್ದ ನಡೆಯುತ್ತಿರುವಾಗ ಉಪಕರಣಗಳ ಖರೀದಿ ಮತ್ತು ಮಿಲಿಟರಿ ಟ್ರೈನಿಂಗ್ ಹಾಗೂ ಎಜುಕೇಷನ್​ಗೆ 350 USD ಮಿಲಿಯನ್ ಹಣ ಬಿಡುಗಡೆ ಮಾಡಲು ಅಧ್ಯಕ್ಷ ಜೋ ಬೈಡನ್ ಅಧಿಕಾರ ನೀಡಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನ ಸೆಕ್ಯೂರಿಟಿ ಇಂಟರೆಸ್ಟ್ ​ಗೆ 250 ಯುಎಸ್​ಡಿ ಮಿಲಿಯನ್ ಡಾಲರ್ ಮಂಜೂರು ಮಾಡಲು ಶ್ವೇತಭವನ ತಿಳಿಸಿದೆ.

ಆದರೆ ಅಮೆರಿಕದ ಈ ಆಥಿ೯ಕ ನೆರವಿನ ಮಾತನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿರಸ್ಕರಿಸಿದ್ದಾರೆ.

ಉಕ್ರೇನ್ ರಾಜಧಾನಿ ಕೈವ್​ ಸುತ್ತ ರಷ್ಯಾ ಸೇನೆ ಸುತ್ತುವರಿದಿದೆ. ಈ ಹಿನ್ನೆಲೆಯಲ್ಲಿ ಉಕ್ರೇನಿಯನ್​ ಪಲಾಯನ ಮಾಡಲು ಅಮೆರಿಕ ಸಹಾಯ ಮಾಡುತ್ತದೆ ಎಂದಿತ್ತು. ಆದರೆ ಅಮೆರಿಕದ ಈ ಬೇಡಿಕೆಯನ್ನೂ ಕೂಡ ಉಕ್ರೇನ್ ಅಧ್ಯಕ್ಷರು ತಿರಸ್ಕರಿಸಿದ್ದಾರೆ.

ನಮಗೆ ಪಲಾಯನ ಬೇಡ.. ಯುದ್ಧ ನಡೆಯುತ್ತಿರೋದು ಇಲ್ಲಿ. ನಮಗೆ ಶಸ್ತ್ರಾಸ್ತ್ರಗಳ ಅಗತ್ಯ ಇದೆ ಎಂದಿದ್ದಾರೆ.

Share This Article
Leave a comment