May 29, 2022

Newsnap Kannada

The World at your finger tips!

7 child

ನೀರಿನ ಟ್ಯಾಂಕ್​ಗೆ ಬಿದ್ದು 7 ವರ್ಷದ ಬಾಲಕಿ ಸಾವು

Spread the love

ಆಟವಾಡುವಾಗ ನೀರಿನ ಟ್ಯಾಂಕ್​ಗೆ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಚಿಕ್ಕಮಂಗಳೂರಿನ ಇಂದ್ರಾವತಿ ಎಸ್ಟೇಟ್​ನಲ್ಲಿ ಸಂಭವಿಸಿದೆ.

ಗೀತಾ-ಶೇಷಪ್ಪ ದಂಪತಿ ಪುತ್ರಿ ಪ್ರಾರ್ಥನಾ (7) ಸಾವನ್ನಪ್ಪಿದ ಮಗು.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದ ಎಸ್ಟೇಟ್​ನಲ್ಲಿ ಮಗು ಆಟವಾಡುತ್ತಿದ್ದಾಗ ನೀರಿನ ಟ್ಯಾಂಕ್​ಗೆ ಬಿದ್ದಿದೆ.

ನೀರಿನಲ್ಲಿ ಉಸಿರಾಟ ತೊಂದರೆಯಾಗಿ ಮಗು ಕೊನೆಯುಸಿರೆಳೆದಿದೆ.
ಘಟನೆ ಕುರಿತಂತೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!