ಉರಿಗೌಡ- ನಂಜೇಗೌಡ ಸಿನಿಮಾ ವಿವಾದ : ನಿರ್ಮಲಾನಂದ ಶ್ರೀ ಗಳ ಜೊತೆ ನಾಳೆ ಮಹತ್ವದ ನಿರ್ಧಾರ

Team Newsnap
1 Min Read
Urigowda-Nanjegowda movie dispute: Important decision with Nirmalanand Sri ಉರಿಗೌಡ- ನಂಜೇಗೌಡ ಸಿನಿಮಾ ವಿವಾದ : ನಿರ್ಮಲಾನಂದ ಶ್ರೀ ಗಳ ಜೊತೆ ನಾಳೆ ಮಹತ್ವದ ನಿರ್ಧಾರ

ಟಿಪ್ಪು ಸುಲ್ತಾನನನ್ನು ಕೊಂದು ಹಾಕಿದ್ದಾರೆ ಎನ್ನಲಾದ ಉರಿಗೌಡ, ನಂಜೇಗೌಡರ ಹೆಸರಿನ ಸಿನಿಮಾ ವಿವಾದ ಈಗ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಅಂಗಳ ತಲುಪಿದೆ.

ಈ ವಿಚಾರದಲ್ಲಿ ಶ್ರೀಗಳು ಮಧ್ಯ ಪ್ರವೇಶಿಸಿ, ನಾಳೆ ಮಹತ್ವದ ನಿರ್ಧಾರ ಹೊರ ಬೀಳುವ ಸಾಧ್ಯತೆಯಿದೆ.

ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಉರಿಗೌಡ, ನಂಜೇಗೌಡರ ಚರ್ಚೆ ತಾರಕಕ್ಕೇರಿದೆ.

ರಾಜ್ಯ ಬಿಜೆಪಿಯ ನಾಯಕರು ಹಳೇ ಮೈಸೂರು ಭಾಗದಲ್ಲಿ ಉರಿಗೌಡ, ನಂಜೇಗೌಡರನ್ನೇ ಬಳಸಿಕೊಂಡು ಮತಬೇಟೆಗೂ ಇಳಿದಿದ್ದಾರೆ. ಇತಿಹಾಸದಲ್ಲಿ ಉರಿಗೌಡ, ನಂಜೇಗೌಡ ಇದ್ದರು ಎನ್ನುವುದಕ್ಕೆ ದಾಖಲೆ ಒದಗಿಸುತ್ತಿರುವ ಬಿಜೆಪಿ, ಈ ಪಾತ್ರದ ಕುರಿತಂತೆ ಸಿನಿಮಾ ಮಾಡಲು ಮುಂದಾಗಿದೆ.

ನಿರ್ಮಾಪಕ, ಸಚಿವ ಮುನಿರತ್ನ ಉರಿಗೌಡ, ನಂಜೇಗೌಡ ಸಿನಿಮಾ ತಯಾರಿಸಲು ಟೈಟಲ್ ಕೂಡ ರಿಜಿಸ್ಟರ್ ಮಾಡಿದ್ದಾರೆ.

ಬಿಜೆಪಿ ನಾಯಕರ ಉರಿಗೌಡ, ನಂಜೇಗೌಡ ಸಿನಿಮಾ ತಂತ್ರಗಾರಿಕೆಗೆ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಕೆಂಡಕಾರಿದ್ದರು.

ಉರಿಗೌಡ, ನಂಜೇಗೌಡ ಎಂಬ ಕಲ್ಪಿತ ಒಕ್ಕಲಿಗ ಹೆಸರುಗಳ ಸೃಷ್ಟಿ, ಸಿನಿಮಾ ಮಾಡುವ ದುರುಳ ಐಡಿಯಾ, ಒಕ್ಕಲಿಗರ ಮೇಲೆ BJP ಬೀರುತ್ತಿರುವ ವಕ್ರದೃಷ್ಟಿ. ಇದೆಲ್ಲವೂ ಒಕ್ಕಲಿಗರನ್ನು ರಾಜಕೀಯವಾಗಿ ಮುಗಿಸಿಬಿಡುವ ಬಿಜೆಪಿ ರಕ್ಕಸ ಹಿಡೆನ್ ಅಜೆಂಡಾ ಅಲ್ಲದೆ ಮತ್ತೇನೂ ಅಲ್ಲ ಎಂದು ಹೆಚ್‌ಡಿಕೆ ತರಾಟೆ ತೆಗೆದುಕೊಂಡಿದ್ದರು.

ನಾನು ಒಬ್ಬ ಸಿನಿಮಾ ನಿರ್ಮಾಪಕನಾಗಿ ಅವರ ಚಿತ್ರ ಮಾಡೋಣ ಅಂತಿದ್ದೀನಿ. ಇದಕ್ಕೆ ಸಂಬಂಧಿಸಿದಂತೆ ಆದಿಚುಂಚನಗಿರಿ ಶ್ರೀಗಳು ಚರ್ಚೆ ‌ಮಾಡಲು ನನ್ನನ್ನು ಕರೆದಿದ್ದಾರೆ. ನಾಳೆ‌ ಬೆಳಗ್ಗೆ ಶ್ರೀಗಳ ಭೇಟಿ ಮಾಡುತ್ತಿದ್ದೇನೆ. ಇತಿಹಾಸದ ಬಗ್ಗೆ ‌ಮಾತಾಡೋರು ಅದಕ್ಕೆ ಜಾತಿ ಬಣ್ಣ ಕಟ್ಟಬಾರದು. ಸಿನಿಮಾ ಬಗ್ಗೆ ಸದ್ಯ ಚರ್ಚೆಯಲ್ಲಿದೆ. ನಾಳೆ ಬೆಳಗ್ಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಜೊತೆ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.ಇದನ್ನು ಓದಿ –ನಾಳೆ ಬೆಂಗಳೂರಿನಾದ್ಯಂತ ಆಟೋ ಚಾಲಕರ ಮುಷ್ಕರ

Share This Article
Leave a comment