ನಾಳೆ ಬೆಂಗಳೂರಿನಾದ್ಯಂತ ಆಟೋ ಚಾಲಕರ ಮುಷ್ಕರ

Team Newsnap
1 Min Read
Statewide call for auto drivers' strike on July 28 ರಾಜ್ಯಾದ್ಯಂತ ಜುಲೈ 28ರಂದು ಆಟೋ ಚಾಲಕರ ಮುಷ್ಕರಕ್ಕೆ ಕರೆ #autodrivers #kannadanews

ಸೋಮವಾರ ಸಂಪೂರ್ಣ ಆಟೋ ಸಂಚಾರ ಬಂದ್ ಮಾಡಲು ಆಟೋ ಚಾಲಕರು ನಿರ್ಧರಿಸಿದ್ದಾರೆ.

ಅನಧಿಕೃತ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಮಧ್ಯರಾತ್ರಿ 12 ರಿಂದ 24 ಗಂಟೆಗಳ ಕಾಲ ನಗರದಲ್ಲಿ ಆಟೋ ಸಂಚಾರ ಸ್ಥಗಿತಗೊಳಿಸಲಾಗಿದೆ.

ಆಟೋ ಚಾಲಕರು ನಾಳೆ ಬೆಳಗ್ಗೆ 11 ಗಂಟೆಗೆ ಕಪ್ಪುಪಟ್ಟಿ ಧರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ (Basavaraj Bommai) ರೇಸ್ ಕೋರ್ಸ್ ನಿವಾಸಕ್ಕೆ ತೆರಳಲಿದ್ದಾರೆ .

ಕಪ್ಪು ಪಟ್ಟಿ ಧರಿಸುವ ಮೂಲಕ ಆಟೋ ಚಾಲಕರು ತಮ್ಮ ಆಕ್ರೋಶ ವ್ಯಕ್ತಪಡಿಸಿ , ರಾಜ್ಯ ಸರ್ಕಾರಕ್ಕೆ ಮೂರು ದಿನಗಳ ಡೆಡ್‍ಲೈನ್ ನೀಡಲಿದ್ದಾರೆ .

ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳಿಂದ ತಮಗೆ ಬಾಡಿಗೆ ದೊರಕದೆ ಜೀವನ ಸಾಗಿಸಲು ತೊಂದರೆಯಾಗುತ್ತಿದೆ ಎಂದು ಚಾಲಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ 21 ಆಟೋ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿ , ಯೆಲ್ಲೋ ಬೋರ್ಡ್ ಹಾಕಿಕೊಂಡು ಬೈಕ್ ಟ್ಯಾಕ್ಸಿ ಸೇವೆ ನೀಡಲಿ ಎಂದು ಹೇಳಿದ್ದಾರೆ .

ಓಲಾ (Ola), ಊಬರ್‌ನಲ್ಲೂ (Ubar) ಆಟೋ ಸೇವೆ ಲಭ್ಯವಿರುವುದಿಲ್ಲ ಮತ್ತು 2 ಲಕ್ಷದ 10 ಸಾವಿರ ಆಟೋಗಳ ಸಂಚಾರ ಬಂದ್ ಆಗುವ ಸಾಧ್ಯತೆ ಕಂಡುಬರುತ್ತಿದೆ.

ಸಾರಿಗೆ ಸಚಿವರಾದ ಶ್ರೀರಾಮುಲು ರವರು ಆರ್‌ಟಿಓಗೆ ರ‍್ಯಾಪಿಡೋ ಬ್ಯಾನ್ ಮಾಡಲು ವರದಿ ಕೇಳಿದ್ದಾರೆ.

ಆಟೋ ಚಾಲಕರಿಗೆ ಚುನಾವಣೆಯೊಳಗೆ ಸಿಹಿ ಸುದ್ದಿ ನೀಡುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ .ಇದನ್ನು ಓದಿ –ರಾಜ್ಯ ವಿಧಾನಸಭೆಗೆ ಮಾರ್ಚ್ ಅಂತ್ಯಕ್ಕೆ ಚುನಾವಣೆ ಘೋಷಣೆ ?

Share This Article
Leave a comment