ಮೇಲ್ಮನೆ ಕುಸ್ತಿ : ಜೆಡಿಎಸ್ – ಬಿಜೆಪಿ ದೋಸ್ತಿ? ಕಾಂಗ್ರೆಸ್ ಹಣಿಯಲು ದಳಪತಿಗಳ ರಣತಂತ್ರ

Team Newsnap
2 Min Read

ರಾಜ್ಯದಲ್ಲಿನ 25 ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಪ್ರಮುಖ ಮೂರು ಪಕ್ಷಗಳು ತಮ್ಮ ಅಭ್ಯಥಿ೯ಗಳ ಪಟ್ಟಿಯನ್ನು ಆಖೈರು ಮಾಡಿದ್ದಾರೆ.

ಆದರೆ ಜೆಡಿಎಸ್ ಮಾತ್ರ ಜಾಣ ನಡೆ ಪ್ರದಶ೯ನ ಮಾಡಿ 25 ಕ್ಷೇತ್ರಗಳ ಪೈಕಿ ಕೇವಲ 7 ಕ್ಷೇತ್ರಗಳಲ್ಲಿ ಅಭ್ಯಥಿ೯ಗಳನ್ನು ಕಣಕ್ಕೆ ಇಳಿಸಿ ಕಾಂಗ್ರೆಸ್ ಹಣಿಯುವ ತಂತ್ರಕ್ಕೆ ಕಸರತ್ತು ಮಾಡಿದ್ದಾರೆ ಈ ದಳಪತಿಗಳು .

ಮೇಲ್ಮನೆಯ ಚುನಾವಣಾ ರಣರಂಗದಲ್ಲಿ ಜೆಡಿಎಸ್, ಬಿಜೆಪಿಯೊಂದಿಗೆ ದೋಸ್ತಿ ಮಾಡುವ ಲೆಕ್ಕಾಚಾರಗಳು ನಿಜವಾಗುತ್ತಿವೆ

ಸ್ಥಳೀಯ ಸಂಸ್ಥೆಗಳಿಂದ ನಡೆಯುವ 25 ಪರಿಷತ್ ಸ್ಥಾನಗಳಿಗೆ ವೇದಿಕೆ ಸಿದ್ಧವಾಗಿದೆ. ಮೇಲ್ಮನೆಯ ಮಿನಿ ಫೈಟ್‌ನಲ್ಲಿ ಮೂರು ಪಕ್ಷಗಳು ಗೆಲುವಿನ ಜಿದ್ದಿಗೆ ಬಿದ್ದಿವೆ.
ಈ ಮಧ್ಯೆ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಜೆಡಿಎಸ್‌ ಭಾರೀ ರಣತಂತ್ರವೊಂದನ್ನು ರೂಪಿಸಿದೆ

ದಳದ ಬೆಂಬಲ ಕೋರಿರುವ ಬಿಜೆಪಿ ನಾಯಕರು ರಾಜ್ಯದಲ್ಲಿ ವಿಧಾನಪರಿಷತ್ ಉಪಕದನಕ್ಕೆ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದಾರೆ

ಇತ್ತ ಕಾಂಗ್ರೆಸ್ ಕೂಡಾ ನಿನ್ನೆ 20 ಸ್ಥಾನಗಳಿಗೆ ಕದನಕ್ಕೆ ಟಿಕೆಟ್ ನಿಗದಿ ಮಾಡಿದೆ. ಆದರೆ ಈಗ ದಳಪತಿಗಳ ನಡೆಯೇ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಆದರೆ ಜೆಡಿಎಸ್ ಮಾತ್ರ ಕೇವಲ 7 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲು ನಿರ್ಧರಿಸಿದೆ. ಹೀಗಾಗಿ ಪರಿಷತ್ ಮಿನಿಫೈಟ್‌ನಲ್ಲಿ ಬಿಜೆಪಿ ಜೊತೆ ಕೈಜೋಡಿಸಲು ದಳಪತಿಗಳು ತಂತ್ರ ಹೆಣದಿದ್ದಾರೆನ್ನುವುದು ಸ್ಪಷ್ಟವಾಗಿದೆ

ಮೇಲ್ಮನೆ ಕುಸ್ತಿ.. ಮತ್ತೆ ದೋಸ್ತಿಗೆ ದಾರಿ ?

ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಚುನಾವಣೆ ನಡೆಯುತ್ತಿದ್ದು, 7 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆಸುವುದಾಗಿ ಜೆಡಿಎಸ್​​ ನಾಯಕರು ಹೇಳಿದ್ದಾರೆ.

ಈಗಾಗಲೇ ಮಾಜಿ ಸಿಎಂ ಬಿಎಸ್​ವೈ ಜೆಡಿಎಸ್ ಸ್ಪರ್ಧಿಸದ ಕ್ಷೇತ್ರಗಳಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ದಳಪತಿಗಳ ಜೊತೆ ಚರ್ಚಿಸುವುದಾಗಿಯೂ ಹೇಳಿದ್ದಾರೆ.

ಜೊತೆಗೆ ಮೇಲ್ಮನೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ದಳಪತಿಗಳ ಬಳಿ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ

ಮೇಲ್ಮನೆ ಮಿನಿ ಸಮರದಲ್ಲಿ ಜೆಡಿಎಸ್‌ ಬಿಜೆಪಿ ಜೊತೆ ಕೈ ಜೋಡಿಸುವ ಬಗ್ಗೆ ಬಿಜೆಪಿ ಭೀಷ್ಮ ಏನೋ ಸುಳಿವು ನೀಡಿದ್ದಾರೆ. ಆದರೆ, ತಮ್ಮ ನಡೆಯ ಬಗ್ಗೆ ಜೆಡಿಎಸ್‌ ನಾಯಕರು ಇನ್ನೂ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು

Share This Article
Leave a comment