ಸೂರಜ್ ಗೆ ಹಾಸನ, ಮಂಡ್ಯಕ್ಕೆ ಅಪ್ಪಾಜಿಗೌಡ – ಕೊನೆಗೂ ಬಿಡುಗಡೆ ಆದ ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ

Team Newsnap
1 Min Read

ಜೆಡಿಎಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ಇಂದೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಹಿನ್ನೆಲೆಯಲ್ಲಿ , ಅಭ್ಯರ್ಥಿಗಳ ಹೆಸರುಗಳನ್ನು ದಳಪತಿಗಳು ಅಳೆದು ತೂಗಿ 25 ಸ್ಥಾನಗಳಲ್ಲಿ ಕೇವಲ 7 ಸ್ಥಾನಕ್ಕೆ ಮಾತ್ರ ಅಭ್ಯಥಿ೯ಗಳನ್ನು ಘೋಷಣೆ ಮಾಡಿದ್ದಾರೆ

ಜೆಡಿಎಸ್​​ ಒಟ್ಟು ಏಳು ಸ್ಥಾನಗಳ ಅಭ್ಯರ್ಥಿಗಳಲ್ಲಿ ಮಂಡ್ಯದಲ್ಲಿ ಅಪ್ಪಾಜಿಗೌಡ, ಹಾಸನದಲ್ಲಿ  ಸೂರಜ್ ರೇವಣ್ಣ, ಮೈಸೂರುರಿನಲ್ಲಿ ಸಿ.ಎನ್ ಮಂಜೇಗೌಡ, ಬೆಂಗಳೂರು(ಗ್ರಾ)ದಲ್ಲಿ ರಮೇಶ್‌ಗೌಡ, ತುಮಕೂರುನಲ್ಲಿ ಅನಿಲ್ ಕುಮಾರ್, ಕೋಲಾರದಲ್ಲಿ ವಕ್ಕಲೇರಿ ರಾಮು ಹಾಗೂ ಕೊಡಗು ಸ್ಥಾನಕ್ಕೆ ಹೆಚ್.ಯು ಇಸಾಕ್ ಖಾನ್​​ಗೆ ಟಿಕೆಟ್​ ನೀಡಿದೆ.

kumarswamy - devegowda

ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಭ್ಯರ್ಥಿಗಳನ್ನು ಈಗಾಗಲೇ ಘೋಷಣೆ ಮಾಡಿದ್ದಾರೆ. ಇತ್ತ ಬಿಜೆಪಿಯಲ್ಲಿ ಟಿಕೆಟ್​ ಸಿಗದೆ ಜೆಡಿಎಸ್​​ ಕದ ತಟ್ಟಿದ್ದ ನಾಯಕರಿಗೆ ಮಣೆ ಹಾಕದೇ ದಳಪತಿಗಳು ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದ್ದಾರೆ.

Share This Article
Leave a comment