ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ನಿರ್ಮಿತವಾಗಿರುವ 25 ಅಡಿ ಎತ್ತರದ ಭುವನೇಶ್ವರಿ ಕಂಚಿನ ಪ್ರತಿಮೆಯನ್ನು ಜನವರಿ 27ರಂದು ಸಂಜೆ 4.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಲಿದ್ದಾರೆ.
ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಮೌಲಿಕ ಯೋಜನೆಯ ಭಾಗವಾಗಿ, ರಾಜ್ಯದ ಸಾರ್ತಕತೆಯನ್ನು ಪ್ರತಿಬಿಂಬಿಸುವ ಭುವನೇಶ್ವರಿ ಕಂಚಿನ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಯಿತು.
ಪ್ರತಿಮೆಯ ನಿರ್ಮಾಣ ಪೂರ್ಣಗೊಂಡಿದ್ದು, ಅನಾವರಣ ಸಮಾರಂಭವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ನಡೆಯಲಿದೆ ಎಂದು ಸಚಿವ ಶಿವರಾಜ್ ತಂಗಡಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನು ಓದಿ –26/11 ಉಗ್ರರ ದಾಳಿ: ತಹವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು US ಸುಪ್ರೀಂಕೋರ್ಟ್ ಅನುಮೋದನೆ
ಈ ಕಾರ್ಯಕ್ರಮವು ಕನ್ನಡಾಭಿಮಾನಿಗಳಿಗೆ ಒಂದು ಸಂಭ್ರಮದ ಕ್ಷಣವಾಗಲಿದ್ದು, ರಾಜ್ಯದ ಭಾಷಾ ಸಂಸ್ಕೃತಿಯ ಮಹತ್ವವನ್ನು ಅಭಿವ್ಯಕ್ತಪಡಿಸಲು ಪ್ರಮುಖ ಪಾತ್ರವಹಿಸಲಿದೆ.
More Stories
ಇಂಡಿಯನ್ ಆಯಿಲ್ ಲಿಮಿಟೆಡ್ನಲ್ಲಿ 456 ಅಪ್ರೆಂಟಿಸ್ ಹುದ್ದೆಗಳ ಭರ್ತಿ – ಅರ್ಜಿ ಆಹ್ವಾನ
ಇಂದಿನಿಂದಲೇ ಬಿಯರ್ ದರ ಹೆಚ್ಚಳ – ಹೊಸ ಬೆಲೆ ವಿವರ !
ಮೈಸೂರಿನಲ್ಲಿ ಹೊಸ ಹೋಟೆಲ್ ಆರಂಭಿಸಲು ತಾಜ್ ಗ್ರೂಪ್ ಸಿದ್ಧ